spot_img
spot_img

ಲಸಿಕೆ ನೀಡಿಕೆ ದಾಖಲೆ; ವ್ಯಂಗ್ಯ ಮಾಡಿದ ಕಾಂಗ್ರೆಸ್ ಹಳೆ ಚಾಳಿ

Must Read

- Advertisement -

ಜೂನ್ ೨೧ ರಿಂದ ದೇಶದಲ್ಲಿ ಮೋದಿ ಸರ್ಕಾರ ಆರಂಭಿಸಿದ ಕೋವಿಡ್

ಲಸಿಕೆಯ ಮಹಾ ಅಭಿಯಾನದಲ್ಲಿ ಮೂರು ದಿನಗಳಲ್ಲಿ ಒಂದು ಕೋಟಿ ೧೦ ಲಕ್ಷ ಡೋಸ್ ಲಸಿಕೆ ಹಾಕಿ ಒಂದು ದಾಖಲೆಯನ್ನೇ ಬರೆಯಲಾಗಿದೆ.
ಈ ಹಿಂದೆ ಪ್ರಧಾನಿ ಮೋದಿಯವರು ಹೇಳಿದಂತೆ ಯೋಗ ದಿನವಾದ ಜೂನ್ ೨೧ ರಿಂದ ಇಡೀ ದೇಶದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವ ಪ್ರಕ್ರಿಯೆ ಶುರು ಮಾಡಲಾಗಿತ್ತು.

ಈ ಕಾರ್ಯಾಚರಣೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ಹಾಗೂ ಉತ್ಸಾಹ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ ೯೦.೮೬ ಲಕ್ಷ ಡೋಸ್ ಹಾಕಲಾಗಿತ್ತು. ಎರಡನೇ ದಿನ ೫೪ ಲಕ್ಷ, ಈವತ್ತು ೬೨ ಲಕ್ಷ ಇದುವರೆಗೂ ಒಂದು ಕೋಟಿ ೮೦ ಲಕ್ಷ ಲಸಿಕೆಗಳನ್ನು ಹಾಕಲಾಗಿದೆ.

- Advertisement -

ಕಾಂಗ್ರೆಸ್ ತುಚ್ಛ ರಾಜಕೀಯ

ಮೋದಿಯವರನ್ನು ಶತಾಯಗತಾಯ ವಿರೋಧ ಮಾಡಲೇಬೇಕು ಎಂಬ ಹಠ ತೊಟ್ಟಿರುವ ಕಾಂಗ್ರೆಸ್ ಮಾತ್ರ ಲಸಿಕೆಯ ಈ ದಾಖಲೆಯಲ್ಲೂ ಹುಳುಕು ಹುಡುಕಿ, ಇದೊಂದು ಗಿನ್ನೆಸ್ ದಾಖಲೆ ಎಂದು ವ್ಯಂಗ್ಯ ಮಾಡಿದೆ.

ದಾಖಲೆ ಮಾಡಲಿಕ್ಕಾಗಿಯೇ ಈ ಅಭಿಯಾನ ಆರಂಭಿಸಲಾಗಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಚಿದಂಬರಮ್ ಟ್ವೀಟ್ ಮಾಡಿ ತಮ್ಮ ಜ್ಞಾನ ಹೊರಹಾಕಿದ್ದಾರೆ !

ಇತ್ತ ದೇಶದಲ್ಲಿನ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಲಸಿಕಾಕರಣ ಅತ್ಯಂತ ಹೆಚ್ಚು ಪ್ರಮಾಣದಲ್ಲಿದ್ದರೆ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಕಡಿಮೆ ಲಸಿಕಾಕರಣ ಆಗಿದೆ.

- Advertisement -

ಈ ಮೊದಲು ಕೊರೋನಾ ಲಸಿಕೆ ಅಡ್ಡ ಪರಿಣಾಮ ಬೀರುತ್ತದೆ, ಲಸಿಕೆ ಹಾಕಿಸಿದರೆ ಮಕ್ಕಳಾಗುವುದಿಲ್ಲ ಎಂಬಂಥ ಸುಳ್ಳುಸುದ್ದಿಗಳನ್ನು ಹಬ್ಬಿಸಿದ ಕಾಂಗ್ರೆಸ್ ನಾಯಕರೇ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ಆರೋಪಿಸಿದ್ದು, ಕಾಂಗ್ರೆಸ್ ಇಂಥ ಹೊಲಸು ರಾಜಕೀಯ ಮಾಡಬಾರದು ಎಂದು ಹೇಳಿದೆ.

ಕೋವಿಡ್ ಎರಡನೇ ಅಲೆಯ ಭೀಕರ ಹೊಡೆತಕ್ಕೆ ದೇಶವೇ ನಲುಗಿಹೋಗಿದ್ದು ಲಸಿಕೆ ಹಾಕಿಕೊಳ್ಳುವುದಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಲಸಿಕೆ ಹಾಕಿಸಿದ್ದು, ಮೋದಿ ಸರ್ಕಾರ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡಬೇಕು ಎಂಬ ಆಗ್ರಹ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ನೋಡಿದರು.

ಆದರೆ ಮೋದಿಯವರು ಉಚಿತ ಲಸಿಕೆ ಘೋಷಣೆ ಮಾಡುತ್ತಲೇ ಮುಖಭಂಗಕ್ಕೊಳಗಾದ ಕಾಂಗ್ರೆಸ್ ಮತ್ತೊಂದು ಮಗದೊಂದು ನೆಪಗಳನ್ನು ಹೇಳುತ್ತ ಇನ್ನೂ ವಿರೋಧದಲ್ಲಿಯೇ ತೊಡಗಿದ್ದು ಜನರು ಕಾಂಗ್ರೆಸ್ ನ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group