ದಿನಾಂಕ 05/08/2024 ರಂದು ಸೋಮವಾರ ಮುಂಜಾನೆ 10.00 ಘಂಟೆಗೆ ಶರಣೆ ಬಸವರಾಜ ಶರಣೆ ರೇಖಾ ಮುದ್ದಾಪೂರ ಇವರ ಮನೆಯಲ್ಲಿ ಮನೆ ಮನಂಗಳಿಗೆ ವಚನ ಸಂದೇಶ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಸಾನ್ನಿಧ್ಯವನ್ನು ಶ್ರೀ ಮೃತ್ಯುಂಜಯ ಸ್ವಾಮೀಜಿ ಹೀರೆಮಠ ಗುರುಗಳು ವಹಿಸಿದ್ದರು ಶರಣೆ ವಸಂತಕ್ಕಾ ಗಡ್ಕರಿಯವರು ಶರಣ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸವನ್ನು ಎಳೆ, ಎಳೆಯಾಗಿ ಶರಣರಾದ ಅಕ್ಕಮಹಾದೇವಿ,ಹಡಪದ ಅಪ್ಪಣ್ಣ,ನೂಲಿಯ ಚಂದಯ್ಯ,ಮುಕ್ತಾಯಕ್ಕ ಇವರೆಲ್ಲರೂ ಅಲ್ಲಮಪ್ರಭುಗಳ ಪ್ರಶ್ನೆಗೆ ಉತ್ತರ ನೀಡಿದುದರ ಕುರಿತು ವಿವರವಾಗಿ ಉದಾಹರಣೆಗಳೊಂದಿಗೆ ತಿಳಿಸಿ ಮಾಚಿದೇವರ ಪರಿಕ್ಷೆ ಒಡ್ಡಿದ, ಕುರಿತು ವಿವರವಾಗಿ ಎಲ್ಲರ ಮನ ಮುಟ್ಟುವಂತೆ ವಚನದೊಂದಿಗೆ ತಿಳಿಸಿದರು
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮೃತ್ಯುಂಜಯ ಶ್ರೀಗಳು, ಶರಣೆ ವಸಂತಕ್ಕಾ ಗಡ್ಕರಿಯವರು ವಚನಗಳು ಮೂಲಕ ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ ಶರಣು ಮಡಿವಾಳ ಮಾಚಿದೇವರ ಕುರಿತು ಎಷ್ಟು ಹೇಳಿದರೂ ಕಡಿಮೆಯೇ ಯಾಕೆಂದರೆ ಅವರು ನಡೆದ ದಾರಿ ಒಮ್ಮೊಮ್ಮೆ ಬಸವಣ್ಣನವರನ್ನು ಮಾತಾಡುವಾಗ ಎಚ್ಚರಿಸುತ್ತಿದ್ದರು ಎಂಬುದುದರ ಬಗ್ಗೆ ವಿವರವಾಗಿ ತಿಳಿಸಿ ಕಲ್ಯಾಣ ಕ್ರಾಂತಿ ಆದಾಗ ವಚನ ಕಟ್ಟುಗಳ ರಕ್ಷಣೆ ಯುದ್ದವನ್ನು ಮಾಡಿ ರಕ್ಷಣೆ ಮಾಡಿದರು ಅವರು ಮಾಡದೆ ಇರುವುದು ಶರಣ ಫ ಗು ಹಳಕಟ್ಟಿ ಸಂಶೋಧನೆ ಮಾಡದೇ ಇದ್ದರೆ ವಚನ ಸಾಹಿತ್ಯದ ಬಗ್ಗೆ ತಿಳಿಯುತ್ತಿರಲಿಲ್ಲ ಅಂಥ ಮಹಾಶರಣರ ಹಾಕಿ ಕೊಟ್ಟ ದಾರಿಯಲ್ಲಿ ಸಾಗೋಣ ವೆಂದು ತಿಳಿಸಿದರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಿದ್ನಾಳರು ವಹಿಸಿದ್ದರು ಶರಣರಾದ ಕುಂದ್ರಾಳ,ಶೆಟ್ಟಿ,ಕಟ್ಟಿಮನಿ,ಗುರುವಣ್ಣವರ, ಹಾವಣ್ಣಗೋಳ, ಬಾಳಿ,ಮುನವಳ್ಳಿ ದಂಪತಿಗಳು ಶೋಭಾ ಶಿವಳ್ಳಿ ಶೋಭಾ, ಲತಾ,ತ್ರೀವೇಣಿ ,ಶಾಂತಾ, ಶಾರದಾ ಇನ್ನೂ ಶರಣರು ಶರಣೇಯರು ಉಪಸ್ಥಿತರಿದ್ದರು.