spot_img
spot_img

ವಚನ ಸಾಹಿತ್ಯವನ್ನು ಪ್ರಜ್ಞಾಪೂರ್ವಕ ವಿರೂಪಗೊಳಿಸಿದ್ದಾರೆ – ಡಾ. ಪಟ್ಟಣ

Must Read

- Advertisement -

ವಚನಸಾಹಿತ್ಯವು ಒಮ್ಮೊಮ್ಮೆ ಉದ್ದೇಶಪೂರಿತವಾಗಿ, ಪ್ರಜ್ಞಾಪೂರ್ವಕವಾಗಿ ವಿಸ್ತೃತವಾಗಿ ಇತ್ಯರ್ಥ ಆಗದೆ ಉಳಿದ ಸಂದರ್ಭದಲ್ಲಿ, ವೈಭವೀಕರಣಗೊಳಿಸಲು ಹೋಗಿ,ಪದಗಳ ಆಶಯವನ್ನು ಗುರುತಿಸುವಲ್ಲಿ, ವಿರೂಪಗೊಳಿಸಿದ್ದಾರೆ ಅಥವಾ ದಿಕ್ಕುತಪ್ಪಿಸಿದ್ದಾರೆ ಎನ್ನುವ ಕಳಕಳಿಯ ನುಡಿಗಳೊಂದಿಗೆ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ ಇದರ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ  ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 15 ನೆಯ ದಿವಸ ಗೂಗಲ್ ಮೀಟ್ ನಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯವು ಗದ್ಯ, ಪದ್ಯ, ಹಾಡುಗಳ ರೂಪದಲ್ಲಿ ಆತ್ಮನಿವೇದನೆಯ ಕುರುಹಾಗಿ ಹೊರಹೊಮ್ಮಿದವು ಮತ್ತು ಇದು ತಾನು ಒಳಗೆ ಕಂಡoಥ ಸತ್ಯವನ್ನು ಹೇಳಿದ ಭವ್ಯವಾದ ಕ್ರಿಯೆ ಎಂದು ಹೇಳುವ ಮೂಲಕ ಮೊದಲಿನ ಕಾಲಘಟ್ಟಗಳನ್ನು ಉಲ್ಲೇಖಿಸುತ್ತಾ, 200 ವರ್ಷಗಳ ನಂತರ ಎರಡನೆಯ ಪ್ರೌಢದೇವರಾಯನ ಕಾಲದಲ್ಲಿ, ಆದ ವಚನ ಅಧ್ಯಯನದ ಕಾರ್ಯ, ಲಕ್ಕಣ್ಣ ದಂಡೇಶ, ಭೀಮಕವಿ, ಚಾಮರಸ, ಸಿಂಗಿರಾಜರು ಮುಂತಾದವರು ಬರೆಯುವಾಗ ವೀರಶೈವ ಪದ ಬಳಕೆಯಾಯಿತು ಎನ್ನುವುದರ ಮಾಹಿತಿ ಮತ್ತು ಅದನ್ನು ಸಂಕಲನ ಯುಗ ಎಂದು ಕರೆಯಬಹುದು ಎನ್ನುವ ಅಭಿಪ್ರಾಯ ಪಟ್ಟರು.

- Advertisement -

ಶೂನ್ಯ ಸಂಪಾದನೆಯು ಹಲವು ಶರಣರ ಸಂವಾದವಾಗಿದ್ದು, ಸುಂದರವಾದ ಹೆಣಿಕೆಯೊಂದಿಗೆ ಅನುಭವ ಮಂಟಪದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಪುಸ್ತಕ. ಇದು ಹಲಗೆ ಆರ್ಯ ಸಂಪಾದಿಸಿ ರಚಿಸಿದ ಕೃತಿ ಸಂಪೂರ್ಣವಾಗಿ ವೈಭವೀಕರಣಗೊಂಡು ವಿರೂಪಗೊಂಡಿತು, 1883 ರಲ್ಲಿ ಪ್ರಕಟಣೆಗೊಂಡ ಅಪ್ರಮಾಣ ಕೂಡಲ ಸಂಗಮದೇವ ಮತ್ತು 86-87 ರಲ್ಲಿ ಬಂದ ವೀರಶೈವ ಚಂದ್ರಿಕೆಯಲ್ಲಿ ಕೃತಕ ಸಾಹಿತ್ಯ ಹಾಗೂ ವಾಸ್ತವಿಕ ನೆಲೆಗಟ್ಟು ಮೀರಿ ಪವಾಡಗಳನ್ನು ಹುಟ್ಟುಹಾಕಿದರು,ಏಸುಕ್ರಿಸ್ತ, ಬುದ್ಧ, ಪೈಗಂಬರ್ ಅವರ ಹಾಗೆ ನಾವು ಬಸವಣ್ಣನವರ ಅನುಭಾವದ ಸೂಳ್ನುಡಿಗಳನ್ನು ಧರ್ಮಗ್ರಂಥ ಮಾಡಲಿಲ್ಲ ಎನ್ನುವ ಮನದ ಮಾತನ್ನು ಹಂಚಿಕೊಂಡರು.

1924 ರಲ್ಲಿ ಫ. ಗು. ಹಳಕಟ್ಟಿ ಅವರು ವಚನ ಶಾಸ್ತ್ರ 1 ಮತ್ತು 2 ಪ್ರಕಟಮಾಡಿದ್ದು, ಇದಕ್ಕೆ ಕಳಶ ಇಟ್ಟ ಹಾಗೆ ಶಿ. ಶಿ ಬಸವನಾಳ ಅವರು ಐವತ್ತು ಪರಿಭಾಷೆ, ಅಡಿಟಿಪ್ಪಣಿ, ಆಕರ ಗ್ರಂಥ, ಅರ್ಥದೊಂದಿಗೆ ಅದರ ಆಳಕ್ಕಿಳಿದು ತಿಳಿದುಕೊಂಡು ಬರೆದರು, ತಪೋವನದ ಶ್ರೀ ಕುಮಾರ ಸ್ವಾಮಿಗಳ ಕಾರ್ಯವನ್ನು, ಅರ್. ಸಿ. ಹಿರೇಮಠ ಅವರ ಸಂಕಲನ, ಸಂಪಾದನೆ, ಪರಿಷ್ಕರಣೆ ಕಾರ್ಯ, ಅಥಣಿ ಮಹಾಂತ ಶಿವಯೋಗಿಗಳು ಇದರ ಸಲುವಾಗಿ ದುಡಿದದ್ದು, ಎಂ. ಎಂ. ಕಲ್ಬುರ್ಗಿ ಅವರ ಹೆಚ್ಚಿನ ಸಂಶೋಧನಾ ಕಾರ್ಯಗಳು, ಎನ್ . ಜಿ. ಮಹಾದೇವಪ್ಪ, ಮಲ್ಲಾಪುರ ಸರ್, ಎಂ. ಎಸ್. ಸುಂಕಾಪುರ, ಚೆನ್ನಕ್ಕ ಎಲಿಗಾರ, ಹನುಮಾಕ್ಷಿ ಗೋಗಿ ..ಹೀಗೆ ಪ್ರತಿಯೊಬ್ಬರ ಕೆಲಸ ಕಾರ್ಯಗಳನ್ನು ತುಂಬು ಹೃದಯದಿಂದ ನೆನೆದರು.

ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಒಂದೇ ಎಂಬ ಗೊಂದಲ, ಒಂದೊಂದು ಕಡೆ ಮೂಲ ವಚನಾಂಕಿತದ ಸರಿಯಾದ ಬಳಕೆ ಆಗದಿರುವುದು, ಪುಣ್ಯಸ್ತ್ರಿ ಅಥವಾ ಪುಣ್ಯಾoಗನೆ ಶಬ್ದದ ಬಳಕೆ, ಕದಂಬ ಮಾರಿತಂದೆ ಮತ್ತು ಕಂಬದ ಮಾರಿತಂದೆ.. ಯಾವುದು ಸರಿ,
ಗಾಣದ ಕಣ್ಣಪ್ಪ- ಗಾಳದ ಕಣ್ಣಪ್ಪ.. ಯಾವುದು ಸರಿ ಹೀಗೆ ಪ್ರತಿಯೊಂದನ್ನು ತಿಳಿಸಿಕೊಟ್ಟರು.

- Advertisement -

ಮುಕ್ತಿ ಕಂಠಾಭರಣ, ಬಿಜ್ಜಳನ ವಿಜಯಪುರಾಣ, ಮಹಾಚೈತ್ರ, ಧರ್ಮಕಾರಣ, ಹೀಗೆ ಇನ್ನೂ ಹಲವಾರು ಕೃತಿಗಳಲ್ಲಿ ಮತ್ತು ನಾಟಕಗಳಲ್ಲಿ ವಿಷಯವು ಸರಿಯಾಗಿ ಮೂಡಿಬಂದಿಲ್ಲ ಎನ್ನುವ ಕಳವಳವನ್ನು ವ್ಯಕ್ತಪಡಿಸಿದರು.

ಹೀಗೆ ಅತ್ಯಂತ ಪ್ರಬುದ್ಧವಾಗಿ, ಗಂಭೀರತೆಯಿಂದ, ವಿಷಯದ ಆಳ -ಅಗಲಗಳನ್ನು ತಮ್ಮ ತೂಕದ ಮಾತುಗಳ ಮೂಲಕ
ಡಾ. ಶಶಿಕಾಂತ ಪಟ್ಟಣ  ಅವರು ತಮ್ಮ ಉಪನ್ಯಾಸವನ್ನು ಸಮಾಪ್ತಿಗೊಳಿಸಿದರು.

ಸಂವಾದದಲ್ಲಿ ಶರಣ ಶಿವಾನಂದ ಅರಭಾವಿ, ಶರಣ ಶಿವಾನಂದ ಕಲಕೇರಿ, ಶರಣ ವಿಜಯಕುಮಾರ ತೇಲಿ, ಶರಣ ಕೆ. ಬಿ. ಮಹಾದೇವಪ್ಪ ಅವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. ಡಾ. ವೀಣಾ ಎಲಿಗಾರ ಅವರು ತಮ್ಮ ಸಂವಾದದಲ್ಲಿ ತಾವೊಬ್ಬ ಸಾಮಾನ್ಯ ಓದುಗ ಎನ್ನುವ ಭಾವನೆಯೊಂದಿಗೆ ಶರಣರ ಮೂಲ ಆಶಯಗಳನ್ನು ಆಧರಿಸಿ, ಪರಿಷ್ಕರಣಕ್ಕೆ ಒತ್ತು ಕೊಟ್ಟು ತಪ್ಪುಗಳ ಬಗೆಗೆ ಚರ್ಚೆ ಮಾಡಿದರು ಎಂದು ಪಟ್ಟಣ  ಅವರ ಮಾತನ್ನು ಉಲ್ಲೇಖಿಸುತ್ತ , ನಾವು ಇಲ್ಲಿಯವರೆಗೂ ವಚನಗಳನ್ನು ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿ, ಅನೇಕ ಅರ್ಥ ಸಂದಿಗ್ಧತೆ, ವ್ಯಾಖ್ಯಾನ ಸಂಯೋಜನೆಗಳ ಕ್ಲಿಷ್ಟತೆ ಇವುಗಳ ಗೊಂದಲದಲ್ಲಿ ಇದ್ದೇವೆ, ಇವುಗಳಿಂದ ಹೊರಬಂದು ಕೇವಲ ಮಾನವೀಯ ಹಿನ್ನೆಲೆಯಲ್ಲಿ ಶರಣರ ಆಶಯ ಅರ್ಥಮಾಡಿಕೊಂಡರೆ ಮಾತ್ರ ವಚನಗಳಿಗೆ ನ್ಯಾಯ ಕೊಡಲು ಸಾಧ್ಯ ಎನ್ನುವ ಮಾತನ್ನು ಹೇಳುತ್ತಾ, ಪಟ್ಟಣ ಅವರು ಶರಣರಲ್ಲಿ ಗಣಾಚಾರಿಗಳು ಇದ್ದ ಹಾಗೆ ನಮ್ಮ ಮಧ್ಯ ಇದ್ದಾರೆ, ಸತ್ಯವನ್ನು ನಿರ್ಭಿಡೆಯಿಂದ ಮಾತನಾಡುವವರು ಕಡಿಮೆ, ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಎನ್ನುವ ಆಶ್ವಾಸನೆಯ ನುಡಿಗಳನ್ನಾಡಿದರು.

ಶರಣ ಮೃತ್ಯುಂಜಯ ಶೆಟ್ಟರ ಅವರ ವಚನ ಪ್ರಾರ್ಥನೆ,ಶರಣ ಮಂಜು ಮಡಿವಾಳ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣ ರುದ್ರಮೂರ್ತಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group