spot_img
spot_img

ವಚನ ಧರ್ಮ ಅರಿವಿನ ಬೆಳಗು

Must Read

- Advertisement -

ವಚನಧರ್ಮ ಎಂದರೆ ಅರಿವಿನ ಬೆಳಗು,ಅರಿವಿನ ಬೆಡಗು, ಅರಿವಿನ ಬೆರಗು ಎನ್ನುವ ಭಾವ ವಿಸ್ತಾರದ ಅರ್ಥವನ್ನು ಹೇಳುತ್ತಾ,ಅದು ಶರಣರ ಚಳವಳಿ ಕನ್ನಡ ಚಳವಳಿ. ನಮ್ಮ ಚಿಂತನೆ ಯಾವಾಗಲೂ 12ನೆಯ ಶತಮಾನದ ಕಡೆಗೆ ಯಾಕೆ ಹೊರಳುತ್ತದೆ, ಎಂದು ಹೇಳುತ್ತಾ, ಅದು ದ್ರಾವಿಡ ಚಳವಳಿ.
ಅರಿವನ್ನು ಹೊಸತು ಮಾಡುವಂತೆ ಮಾಡುವುದೇ ಧರ್ಮ. ನಮ್ಮ ತಿಳಿವಳಿಕೆಯನ್ನು ಹೊಸತು ಮಾಡುವುದೇ ಧರ್ಮ .ಶರಣರು ಸನಾತನ ಧರ್ಮವನ್ನು ಒಪ್ಪಲಿಲ್ಲ ಅವರು ಪುರಾತನ ಧರ್ಮವನ್ನು ಒಪ್ಪಿದರು. ಧರ್ಮವು ಜಡರೂಪದ ವ್ಯವಸ್ಥೆ. ಚಲನಶೀಲತೆ ಇರಲಾರದ್ದು. ಅದರ ವಿಚಾರದೊಳಗೆ ಜಡತ್ವ ತುಂಬಿದೆ ಜಾತಿ ವ್ಯವಸ್ಥೆಯೊಳಗೆ ಕಟ್ಟಿ ಹಾಕಿದೆ. ಶ್ರೇಷ್ಠ ಅಸ್ಪೃಶ್ಯ ಎನ್ನುವ ವರ್ಣಭೇದವಿದೆ. ಶರಣರು ವೈದಿಕ ಪಠ್ಯಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎಂದು ಪ್ರೊ. ಎಸ್ ಜಿ ಸಿದ್ಧರಾಮಯ್ಯ ಹೇಳಿದರು

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊಫೆಸರ್ ದೀಪಾ ಜಿಗಬಡ್ಡಿ -ಬದಾಮಿ ಇವರು ಡಾಕ್ಟರ್ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅವರ ಹುಟ್ಟು ಹಬ್ಬದ ನಿಮಿತ್ಯ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 33 ನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮಗೆ ಕಲಿಸಿದ ಗುಂಡೂರಾವ ಸರ್, ಹೊಯ್ಸಳಾಚಾರ್ಯ ಸರ್,ಮುಗಳಿ ಸರ್, ರಾಜರತ್ನಂ ಸರ್ , ಮರುಳಸಿದ್ದಪ್ಪ ಸರ್, ಚಂದ್ರಶೇಖರ್ ಕಂಬಾರ್ ಸರ್ ಹೀಗೆ ಇನ್ನೂ ಹಲವಾರು ಜನರ ತಮ್ಮ ಗುರುವೃಂದವನ್ನು ಮನದಲ್ಲಿ ಸ್ಮರಿಸುತ್ತಾ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

- Advertisement -

ಚಾತುರ್ವರ್ಣ ವ್ಯವಸ್ಥೆ ಈಗಲೂ ಜೀವಂತವಾಗಿದೆ ಅದು ದೇಶವನ್ನು ಆಳುವ ವ್ಯಾಪ್ತಿಗೆ ವಿಸ್ತರಿಸಿದೆ. ನಮ್ಮ ಮನಸ್ಥಿತಿ ಮತ್ತು ನಡಾವಳಿಕೆಗಳ ಮೇಲೆ ಎಲ್ಲವನ್ನೂ ನೋಡುತ್ತಿದ್ದೇವೆ. ಆತ್ಮವಿಮರ್ಶಾತ್ಮಕ ರೀತಿಯಲ್ಲಿ ನೋಡುತ್ತಿಲ್ಲ. ಮೂರ್ಖರು ಸತ್ಯ ನೋಡುತ್ತಿರುತ್ತಾರೆ ಅವರಿಗೆ ಗೊತ್ತಿರುತ್ತದೆ ಆದರೂ ನಂಬುವುದು ಸುಳ್ಳೇ. ಇಂದು ನಾವೆಲ್ಲ ಒಂದು ಎಂಬ ನಂಬಿಸಲ್ಪಟ್ಟ ಸ್ಥಿತಿಯಲ್ಲಿದ್ದೇವೆ. ಚಾರುವಾಕರು ಸಿದ್ದರು ನಾಥರು ವಾರ್ಕರಿಗಳು ಹೇಗೆ ಹೇಗೆ ತಮ್ಮದೇ ಆದ ಪಂಥವನ್ನು ಕಟ್ಟಿಕೊಂಡರು.ಜೈನ ,ಸಿಖ್ಖ, ಬೌದ್ಧ ಧರ್ಮ ಇದ್ದ ಹಾಗೆಯೇ ಲಿಂಗಾಯತ ಧರ್ಮವೂ ಒಂದು. ಜೈನರು ಪ್ರಾಕೃತದಲ್ಲಿ , ಬೌದ್ಧ ಧರ್ಮದವರು ಪಾಲಿಯಲ್ಲಿ, ಸಿಖ್ ಧರ್ಮದವರು ಪಂಜಾಬಿಯಲ್ಲಿ, ಲಿಂಗಾಯತ ಧರ್ಮದವರು ಕನ್ನಡದಲ್ಲಿ ವಿಚಾರಗಳನ್ನು ಪ್ರಸ್ತುತಪಡಿಸಿದರು ಎನ್ನುವುದನ್ನು ಹೇಳಿದರು.

ನಮ್ಮದು ಏಕವ್ಯಕ್ತಿ ಪ್ರಣೀತ ಅಲ್ಲ ,ಸಂಘಟನಾತ್ಮಕ ಧರ್ಮ. ಯಾವುದೇ ಕಾರ್ಯದಲ್ಲಿ ದಿಕ್ಕು ದಿಸೆ ನಿರ್ದೇಶಿಸುವ ನಾಯಕ ಬೇಕು. ಗಾಂಧೀಜಿ ಹೇಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ವಹಿಸಿದ್ದರು ಹಾಗೆ ಶರಣರು ಚದುರಿದಂತಹ ವಚನ ಚಳವಳಿಗೆ ಸಂಘಟನಾತ್ಮಕ ರೂಪರೇಷೆಗಳನ್ನು ಕೊಟ್ಟರು.

ಶರಣ ಧರ್ಮ ಪ್ರಜಾಸತ್ತಾತ್ಮಕ ಕ್ರಿಯಾಶೀಲದಲ್ಲಿ ಹುಟ್ಟಿಕೊಂಡಿತು. ಇದೇ ಅರಿವಿನ ಬೆಳಗು. ಇಲ್ಲಿ ಏಕವ್ಯಕ್ತಿ ಪ್ರತಿಪಾದನೆ ಇಲ್ಲ ಅನುಭವ ಮಂಟಪದ ಸಂವಾದದ ಪ್ರತಿಫಲದೊಂದಿಗೆ ಪ್ರಶ್ನೆ ಉತ್ತರಗಳೊಂದಿಗೆ ನಮ್ಮ ತಿಳಿವಳಿಕೆಗಳು ಮೂಡಿಬಂದಿವೆ ಎನ್ನುವುದನ್ನು ತಿಳಿಸಿದರು.ವಚನ ಧರ್ಮಸಾರ ಮತ್ತು ಎಂ ಎಂ ಕಲ್ಬುರ್ಗಿ ಅವರ ಹೆಸರನ್ನು ನೆನಪು ಮಾಡಿ ಕೊಡುತ್ತ, ಬರೀ ಭಜನೆ ಮಾಡದೇ ವೈಚಾರಿಕ ಎಚ್ಚರ ಮೂಡಿಸುವುದೇ ಅರಿವಿನ ಬೆಳಗು. ವಚನಗಳು ಸಮುದಾಯದ ಸಂಘರ್ಷದಿಂದ,ಚಳುವಳಿಯ ಸ್ಪರ್ಶದಿಂದ, ಅವರ ಅನುಭವದಿಂದ ಮೂಡಿ ಬಂದ ಸಾಲುಗಳು. 15 ನೆಯ ಶತಮಾನದಲ್ಲಿ ಮೂಡಿ ಬಂದ ವಚನಗಳೆಲ್ಲ ಛಾಯಾ ರಚನೆಗಳು ಎನ್ನುವುದನ್ನು ವಿವರಿಸಿದರು.

- Advertisement -

ಕನ್ನಡ ಭಾಷೆಗೆ ಮತ್ತು ಧರ್ಮ ಕ್ಕೆ ಹೊಸ ಸ್ವರೂಪವನ್ನು ಶರಣರು ಕೊಟ್ಟರು.ಅವ್ವಾ, ಅಕ್ಕಾ,ಎನ್ನುವ ಸ್ತ್ರೀ ಪರ ಸಂಬೋಧನೆಯನ್ನು ತಮ್ಮ ವಚನಗಳಲ್ಲಿ ಬಳಸಿದರು. ಕ್ರಿಯೆಯಿಲ್ಲದ ಅರಿವು ವ್ಯರ್ಥ ಎನ್ನುವುದನ್ನು ತೋರಿಸಿಕೊಟ್ಟರು.ಬಾಳಿನ ದರ್ಶನ ಮತ್ತು ಬದುಕಿನ ದರ್ಶನವನ್ನು ಮಾಡಿಸಿದರು. ಭಾಷೆಗೆ ಹೊಸ ಶಕ್ತಿ ಕೊಟ್ಟರು. ವೈದಿಕಕ್ಕೆ ವಿರುದ್ಧವಾದ ಪರಿಭಾಷೆಯನ್ನು ಶರಣರು ಕಟ್ಟಿಕೊಟ್ಟರು. ವ್ಯಕ್ತಿ -ಸಮಷ್ಟಿಯ ಅರಿವನ್ನು ಮೂಡಿಸಿದರು. ಅಂತರಂಗದೊಳಗೆ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳುತ್ತಾ, ಅವರವರ ಕಾಯಕ ಅವರು ಮಾಡಬೇಕು ಎನ್ನುವುದನ್ನು ಶರಣರು ಅರುಹಿದರು ಎನ್ನುವುದನ್ನು ಸ್ಮರಿಸಿದರು.

ವರ್ಗ ದಾನ, ವರ್ಣ ದಾನದಲ್ಲಿ ಬರುವ ಭೂದಾನ, ಗೋದಾನ, ಹಯನ ದಾನ ಎಲ್ಲವನ್ನೂ ಶರಣರು ವಿರೋಧಿಸಿದರು.ಸೋಹಂ ಎನ್ನುವ ಅಂತರಂಗದ ಮದ ಬಿಟ್ಟು, ಶಿವೋಹಂ ಎನ್ನುವ ಬಹಿರಂಗದ ಮದ ಬಿಟ್ಟು ನಿರಹಂ ಎನ್ನುವ ನಿಸ್ವಾರ್ಥ ನಿಲುವೇ ದಾಸೋಹ. ವ್ಯಕ್ತಿ-ಸಮಷ್ಟಿ, ಹಕ್ಕು -ಬಾಧ್ಯತೆ ಒಳಗೊಂಡದ್ದೇ ದಾಸೋಹ ಎನ್ನುವ ತಿಳುವಳಿಕೆ ಕೊಟ್ಟರು ಎನ್ನುವದನ್ನು ಹಂಚಿಕೊಂಡರು.

ಲಿಂಗಾಯತ ಇದು ಪ್ರತ್ಯೇಕ ಧರ್ಮ. ಇದಕ್ಕೆ ತನ್ನದೇ ಆದ ಹೋರಾಟದ ಚಳುವಳಿಯ ಇತಿಹಾಸವಿದೆ. ಶರಣರು ವೈಚಾರಿಕ ದೃಷ್ಟಿಕೋನದೊಂದಿಗೆ ಅರ್ಥನೀತಿಯ ದೃಷ್ಟಿಯನ್ನೂ ಹೊಂದಿದ್ದರು.ಮಧ್ಯ ಮಧ್ಯ ಮಾರಿತಂದೆ, ಗೊಗ್ಗವ್ವೆ, ಸತ್ಯಕ್ಕ,ಅವರ ವಚನಗಳನ್ನು ಅವುಗಳ ಅರ್ಥವನ್ನು ಉಲ್ಲೇಖಿಸುತ್ತಾ .ನಮ್ಮಲ್ಲಿ ಮಡಿ-ಮೈಲಿಗೆ ಇಲ್ಲ, ಜನನ -ಮರಣ ಸೂತಕ ಇಲ್ಲ, ತಿಥಿ, ನಕ್ಷತ್ರ, ಜ್ಯೋತಿಷ್ಯ, ಇಲ್ಲ. ನಮ್ಮದು ನಿಸರ್ಗ ಧರ್ಮ,ಯಾರೂ ಬೇಕಾದರೂ ಶರಣರಾಗಬಹುದು, ಲಿಂಗ ಕಟ್ಟಿಕೊಳ್ಳಬಹುದು ಎನ್ನುವುದನ್ನು ಅಭಿಮಾನದಿಂದ ಹೇಳಿದರು.

12 ನೆಯ ಶತಮಾನದಲ್ಲಿ ಶರಣೆಯರಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇತ್ತು. ಅಸoಗ್ರಹ, ಅಪರಿಗ್ರಹದ ಬಗೆಗೆ ಹೇಳುತ್ತಾ, ಸತ್ಯಕ್ಕಳ ನೈತಿಕತೆಯ ಗುಣ ಮತ್ತು ಲಕ್ಕಮ್ಮಳ ನಿರಾಕರಿಸುವ ಪ್ರಜ್ಞೆಯನ್ನು ಅವರ ವಚನಗಳ ಮೂಲಕ ಅರ್ಥೈಸಿದರು.ಅವರಲ್ಲಿ ದಾಸೋಹ ಗುಣಕ್ಕೆ ಪೂರಕವಾಗುವ ಗುಣಗಳಿದ್ದವು ಎಂದು ಹೇಳುತ್ತಾ,
ಕನ್ನಡ ನೆಲದ ಬಸವ ಚಳುವಳಿ ಮಹಾ ಬೆಳಗು ಕೊಟ್ಟ ಚಳುವಳಿ ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.

ಡಾ. ವೀಣಾ ಎಲಿಗಾರ ಅವರು ಸಾಮಾಜಿಕ ಆಂದೋಲನದಲ್ಲಿ ಪಾರoಪರಿಕ ಪ್ರವೇಶ ಬದಿಗೊತ್ತಿ, ತಟ್ಟನೆ ತಮ್ಮನ್ನು ಬೇರ್ಪಡಿಸಿಕೊಂಡು ಮಾನವೀಯ ಕಳಕಳಿಯಿಂದ ವಚನ ಸಾಹಿತ್ಯದ ಚಳುವಳಿಯನ್ನು ಪ್ರಾರಂಭ ಮಾಡಿದರು ನಮ್ಮ ಶರಣರು ಎಂದು ಹೇಳುತ್ತಾ . ಅವರು ಬದುಕಿಗಾಗಿ ಸಾಹಿತ್ಯವನ್ನು ಕಟ್ಟಿ ಕೊಟ್ಟರು.ಮಾತು ಮಾಣಿಕ್ಯವೆನ್ನುವುದಕ್ಕೆ ಮಹತ್ವ ಕೊಟ್ಟದ್ದು, ಶರಣಸತಿ -ಲಿಂಗಪತಿ ಎನ್ನುವ ದೈವತ್ವ ಕಟ್ಟಿಕೊಟ್ಟದ್ದು, ಕ್ರಾಂತಿಯನ್ನು ಬದುಕಿನಲ್ಲಿ ಮತ್ತು ಬರಹದಲ್ಲಿ
ತರುವ ಕೆಲಸ ಮಾಡಿದರು. ತಮಗೆ ಬೇಡವಾದ ವಿಷಯಗಳಲ್ಲಿ ತಲೆಕೆಡಿಸಿಕೊಳ್ಳದೆ, ತಾವು ನಂಬಿದ ತತ್ವಗಳನ್ನು ಚಾಲನೆಗೆ ತಂದರು. ಸ್ತ್ರೀಪರವಾದ ಸಮಾಜವನ್ನು ಕಟ್ಟಿದರು. ಒಳ್ಳೆಯ ಮಾರ್ಗದಿಂದ ನಡೆಯುವ, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ, ಆತ್ಮಾವಲೋಕನ ಮಾಡಿಕೊಳ್ಳುವುದನ್ನು ತಮ್ಮ ಮಾರ್ಗದರ್ಶನದಲ್ಲಿ ತಿಳಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ನೆಲಮೂಲದ ಚಳವಳಿಯಿಂದ ಶರಣರು ಎಲ್ಲ ಗೊಂದಲಗಳಿಗೆ ಸ್ಪಷ್ಟತೆ ಕೊಟ್ಟರು ಎಂದು ಹೇಳುತ್ತಾ ಅಮುಗೆ ರಾಯಮ್ಮ ಮತ್ತು ಮಡಿವಾಳ ಮಾಚಿದೇವರ ವಚನಗಳನ್ನು ಉಲ್ಲೇಖಿಸುತ್ತಾ, ನನ್ನ ಕಾರ್ಯವನ್ನು ನಾನು ಮಾಡಬೇಕು, ಅದರ ಜೊತೆಗೆ ದಾಸೋಹವನ್ನು ಮಾಡಬೇಕು ಎನ್ನುವ ಶರಣತತ್ವವನ್ನು ನೆನಪು ಮಾಡಿಕೊಟ್ಟರು. ಕನ್ನಡ ಸಾಹಿತ್ಯದ ಕಾಳಜಿ ಶರಣರಿಗಿತ್ತು ಎಂದು ಹೇಳಿದರು.

ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ,ಶರಣೆ ಏoಜಲಿನಾ ಗ್ರೆಗರಿ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಶರಣೆ ಸುಧಾ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ಪೂಜಾ ಹಿರೇಮಠ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣೆ ಜಯಶ್ರೀ ಆಲೂರ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ -ಪುಣೆ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group