spot_img
spot_img

ಶರಣರ ವಚನಗಳು ದಾರಿ ದೀಪವಾಗಿವೆ – ಸುನೀತಾ ನಂದೆಣ್ಣವರ

Must Read

spot_img
- Advertisement -

ವಿವೇಕಾನಂದರ ದೇಶಪ್ರೇಮ ಜಗತ್ತಿಗೆ ಮಾದರಿ. ಅಣು ಅಣುವಿನಲ್ಲಿ ಜೀವವಿದೆ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಎತ್ತಿ ತೋರಿಸುವುದರ ಜೊತೆಗೆ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಹರಡಿದರು. ಭಾರತವನ್ನು ಮತ್ತು ಭಾರತದ ಎಲ್ಲರನ್ನು ಪ್ರೀತಿಸಿ, ಗೌರವಿಸಿ ಎಂದು ಹೇಳುತ್ತಿದ್ದರು. ನಮ್ಮ ನೆಲದ ಶ್ರೀಮಂತ ಸಂಸ್ಕೃತಿಯನ್ನು ನಾವು ಅಳವಡಿಸಿಕೂಳ್ಳಬೇಕು. ಇಂದು ಯುವ ಜನಾಂಗ ದಾರಿ ತಪ್ಪಿ ನಡೆಯುತ್ತಿದ್ದಾರೆ ಅವರನ್ನು ತಿದ್ದಿ ಸರಿ ದಾರಿಗೆ ತರಬೇಕಾಗಿದೆ ಅದು ನಮ್ಮೆಲ್ಲರ ಜವಾಬ್ದಾರಿಯು ಆಗಿದೆ. ಜೀವತ್ಮನಲ್ಲಿ ಪರಮಾತ್ಮನ ಅಂಶ ಇರುವುದರಿಂದ ವಿಶ್ವದ ಜನರೆಲ್ಲ ಒಂದೇ ಎಂದು ವಿವೇಕಾನಂದರು ಸಾರಿದರೆ ಬಸವಣ್ಣನವರು ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದನಿಸಯ್ಯಾ ಎಂದರು ಜ್ಞಾನವು ನಮ್ಮೊಳಗೆ ಇದೆ ಏಳಿ ಎದ್ದೆಳೆ ಜಾಗ್ರತರಾಗಿರಿ ಸೋಮಾರಿಗಳಾಗದೆ ಕೆಲಸ ಮಾಡಿ ಸತ್ಯವನ್ನು ಎಂತಹ ಪರಿಸ್ಥಿತಿಯಲ್ಲಿಯೂ ಬಿಡಬೇಡಿ ಎಂದು ವಿವೇಕಾನಂದರು ಹೇಳಿದರೆ ಶರಣರು ಕಾಯಕ, ದಾಸೋಹ, ಅನುಭವ ಮಂಟಪದಲ್ಲಿ ತಮ್ಮ ಜ್ಞಾನದ ಅನುಭಾವವನ್ನು ಹಂಚಿಕೊಳ್ಳುತ್ತಿದ್ದರು. ಕೊರಲುಗನೆ ಗೈದು ಸಧ್ಭಕ್ತರಾದರು. ಮೂರ್ತಿ ಪೂಜೆಯನ್ನು ವಿವೇಕಾನಂದರು ವಿರೋದಿಸಿದರು ದೇಹವೇ ದೇವಾಲಯ ಎಂದುರು ಶರಣರು. ಹೀಗೆ ವಿವೇಕಾನಂದರ ವಾಣಿಗಳು ಶರಣರ ವಚನಗಳು ತುಂಬಾ ನಿಕಟವಾಗಿವೆ ಇವು ಬದುಕಿಗೆ ಸನ್ಮಾರ್ಗ ತೊರಿಸುವ ದಾರಿ ದೀಪಗಳಾಗಿವೆಯೆಂದು ಸುನಿತಾ ನಂದೆಣ್ಣವರ ಹೇಳಿದರು.

ವಚನ ಪಿತಾಮಹ ಡಾ ಫ ,ಗು, ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ, 5-1-2025 ರಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಶರಣೆ ಸುನೀತಾ ನಂದೆಣ್ಣವರ ಅವರು ಶರಣರ ವಚನಗಳು ಮತ್ತು ವಿವೇಕ ವಾಣಿ ಕುರಿತು ಉಪನ್ಯಾಸ ನೀಡಿದರು.

ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿಕೊಟ್ಟರು,ಸುರೇಶ ನರಗುಂದ, ಆನಂದ ಕರ್ಕಿ ವಿ ಕೆ ಪಾಟಿಲ್ , ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಶೋಭಾ ಮುನವಳಿ, ಬಸನಗೌಡ , ಬಸವರಾಜ ಬಿಜ್ಜರಗಿ, ಶರಣೆ ಶರಣರು ವಚನ ವಿಶ್ಲೇಷಣೆ ಮಾಡಿದರು.

- Advertisement -

ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು ಹಾಗೂ ನಿರೂಪಣೆ ಸಂಗಮೇಶ ಅರಳಿ ಅವರು ಮಾಡಿದರು ಸಚಿನ ಶಿವಣ್ಣವರ ಪ್ರಸಾದ ದಾಸೋಹ ಸೇವೆಗೈದರು.ಸಿದ್ದಪ್ಪ ಸಾರಾಪುರಿ,ಸೊಮಶೇಖರ ಕತ್ತಿ,ಬಸವರಾಜ ಮತ್ತಿಕಟ್ಟಿ, ಬಸವರಾಜ ಕರಡಿಮಠ,ಮಹದೇವ ಕೆ೦ಪಿಗೌಡರ,ವಿರುಪಾಕ್ಷ , ಎಸ್‌.ಎಸ್‌.ಪೊಜಾರ್, ಗುರಸಿದ್ದಪ್ಪಾ, ಅನೀಲ ರಘಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಶಾಂತಾ ಕ೦ಬಿ,ಮಹಾದೇವಿ ಘಾಟಿ,ನ೦ದಾ ಬಗಲಿ,ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಸದಾಶಿವ ದೇವರಮನಿ, ಶಾಂತಾ ತಿಗಡಿ, ಇತರರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group