spot_img
spot_img

ವಚನಗಳು ಮುಕ್ತ ಛಂದಸ್ಸುಗಳು – ನಾಗರಾಜ ಮತ್ತಿಹಳ್ಳಿ

Must Read

spot_img
- Advertisement -

ಶರಣ ನಾಗರಾಜ ಮತ್ತಿಹಳ್ಳಿ ಅವರು ವಚನಗಳು ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ಮುಕ್ತ ಛಂದಸ್ಸುಗಳು. ಒಳಸತ್ವದಲ್ಲಿ ಸಂಪೂರ್ಣ ಭಿನ್ನತೆಯನ್ನು ಹೊಂದಿರುವಂಥವು ಎಂದು ಹೇಳುತ್ತಾ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 19 ನೆಯ ದಿವಸ ಅವರು ಮಾತನಾಡಿದರು.

ವಚನಗಳಲ್ಲಿ ಭಕ್ತಿ, ಸಾಮಾಜಿಕ ಕಳಕಳಿ, ವೈಯಕ್ತಿಕ ಅನುಭಾವ, ಸುತ್ತ -ಮುತ್ತ ನಡೆಯುತ್ತಿರುವ ಅನ್ಯಾಯಗಳಿಗೆ ಸ್ಪಂದಿಸುವ, ತಿಳಿಸಿಹೇಳುವ ನುಡಿಗಳು ಹೀಗೆ ವೇದನೆ -ನಿವೇದನೆಯ ಮೂಲಕ ಅಂತರಂಗದ ಭಾವಗಳಿಗೆ ಶರಣರು ವೈಯಕ್ತಿಕವಾಗಿ ವಚನಗಳ ಮೂಲಕ ಸಮಾಜಕ್ಕೆ ಹೇಗೆ ಮಿಡಿದರು ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾ ಹೋದರು.

- Advertisement -

ಶರಣರು ಪುರೋಹಿತ ವರ್ಗವನ್ನು ಖಂಡಿಸಿ, ಹೇಗೆ ತಮ್ಮದೇ ಆದ ನೆಲೆಯಲ್ಲಿ ಫಲವತ್ತಾದ ವ್ಯಾಖ್ಯಾನಗಳನ್ನು ಕಟ್ಟಿಕೊಟ್ಟರು ಎಂದು ಹೇಳುತ್ತಾ, ಶರಣರು ಮಾಡಿದ ವಚನ ಆಂದೋಲನವನ್ನು ಸ್ಮರಿಸಿ, ಮೆರೆಮಿoಡಯ್ಯನವರು, ಅಂಬಿಗರ ಚೌಡಯ್ಯನವರು,ಏಲೇಶ್ವರ ಕೇತಯ್ಯನವರು ತಮ್ಮ ವಚನಗಳ ಮೂಲಕ ಸುತ್ತಲಿನ ಜನರ ಇಲ್ಲಸಲ್ಲದ ವ್ಯವಹಾರ ವನ್ನು ನೋಡಿ ಹೇಗೆ ಛೇಡಿಸುತ್ತಿದ್ದುದು, ಆಗಿನ ಕಾಲದ ಶರಣೆಯರೂ ಸಹ ಹೇಗೆ ನಿರ್ಭೀತಿ ಮತ್ತು ನಿರ್ಭಿಡೆಯಿಂದ ವಚನ ರಚಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಮಧ್ಯೆ ಮಧ್ಯೆ ವಚನಗಳ ಉಲ್ಲೇಖವನ್ನು ಮಾಡುತ್ತ, ಅನುಭವ ಮಂಟಪದ ಚರ್ಚೆ, ಸಾಮಾಜಿಕ ಅಸಮಾನತೆಯನ್ನು ಅಳಿಸಿ, ಕಾಯಕಕ್ಕೆ ಮಹತ್ವ ಕೊಟ್ಟು, ದುಡಿದದ್ದನ್ನು ಹಂಚಿ ಉಣ್ಣುವ ಸಾರವನ್ನು ತಿಳಿಸುತ್ತಾ, ವಚನ ಸಾಹಿತ್ಯವು ದಾರ್ಶನಿಕರ ಮೀಮಾoಸೆ, ವಿಚಾರ ಮಂಥನದ, ಆದರ್ಶ ಮಾನವೀಯತೆಯ ಕಿರಣಗಳಾಗಿದ್ದವು ಎಂದು ಹೇಳುತ್ತಾ, ಆ ಕಾಲದಲ್ಲಿ ನಡೆದ ಕ್ರಾಂತಿ ವಿವಿಧ ಸ್ಥರಗಳಿಗೆ ಹಬ್ಬಿದ ಬಗೆ, ಕೆಳವರ್ಗದವರಿಗೆ ಶಿಕ್ಷಣ ಕೊಟ್ಟು, ಮಾನಸಿಕವಾಗಿ ದೈಹಿಕವಾಗಿ, ತಯಾರು ಮಾಡಿದ ರೀತಿ ಅನನ್ಯವಾದುದೆಂದು ಹೇಳಿ, ಇನ್ನೂ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿ, ತಮ್ಮ ಉಪನ್ಯಾಸ ಮುಗಿಸಿದರು.

ಶರಣೆ ಪ್ರೇಮಾ ಅಣ್ಣಿಗೇರಿ ಅವರು ವಚನಗಳು ಜಾಗತಿಕ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿವೆ, ವಚನರಚನೆ ಇದು ಪ್ರಜ್ಞಾಪೂರ್ವಕ ಮತ್ತು ಗಂಭೀರ ಕಲೆ. ಇವು ರಚನಾಶಿಲ್ಪದ ಉಕ್ತಿಗಳು, ಆಣಿ ಮುತ್ತುಗಳು, ಬಸವಣ್ಣನವರು ಶಬ್ದಶಿಲ್ಪಿ ಎನ್ನುವ ಉಪನ್ಯಾಸಕರ ಮಾತನ್ನು ಉಲ್ಲೇಖಿಸುತ್ತಾ ತಮ್ಮ ಮಾರ್ಗದರ್ಶನದ ನುಡಿಗಳನ್ನು ಕಟ್ಟಿಕೊಟ್ಟರು.

- Advertisement -

ಡಾ. ಶಶಿಕಾಂತ ಪಟ್ಟಣ ಅವರು ಮಾತನಾಡಿ, ಉಪನ್ಯಾಸಕರು ವಚನಗಳ ಕಾವ್ಯಮೀಮಾoಸೆಯ ದೃಶ್ಯಗಳನ್ನು ಕಟ್ಟಿಕೊಟ್ಟರು ಎಂದು ಹೇಳುತ್ತಾ, ಬಸವಧರ್ಮ, ಬಸವಾಯತ, ಲಿಂಗಾಯತ, ಜಂಗಮ, ಶರಣರು ಪದ ಬಳಸಿ ಎಂದು ಒತ್ತಿ ಹೇಳಿದರು. ವಚನಗಳು ಅನುಭಾವದ ಅಭಿವ್ಯಕ್ತಿ, ಕಾಯಕದ ಪಾರಿಭಾಷಿಕ ಭಾಷೆ, ವಚನ ಸಾಹಿತ್ಯ ಪ್ರಭಲವಾದ ಸಾಹಿತ್ಯ, ಶರಣರು ಸಾರ್ವಕಾಲಿಕ ಸಮಾನತೆಯನ್ನು ಸಾರಿದರು, ವರ್ಣ ಭೇದ -ಲಿಂಗಭೇದ, ಸುಲಿಗೆ -ಶೋಷಣೆ, ಅಂಧಶ್ರದ್ಧೆ ಎಲ್ಲವನ್ನೂ ಮೀರಿ ನಿಂತರು ಎಂದು ಅತ್ಯಂತ ಅಭಿಮಾನದಿಂದ ನುಡಿದರು.

ಶರಣೆ ಭಾಗ್ಯ ಕೋಟಿ ಅವರ ವಚನ ಪ್ರಾರ್ಥನೆ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಸ್ವಾಗತ -ಪ್ರಾಸ್ತಾವಿಕ, ಪರಿಚಯ, ಶರಣೆ ಶಕುಂತಲಾ ಸಿಂಧೂರ ಅವರ ಶರಣು ಸಮರ್ಪಣೆ, ಶರಣೆ ಬಬಿತಾ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಶರಣೆ ಸಾವಿತ್ರಿ ಕಮಲಾಪುರ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group