spot_img
spot_img

ವಚನಗಳು ಮಕ್ಕಳ ಭವಿಷ್ಯದ ದಾರಿದೀಪಗಳಾಗಿವೆ- ಶಿಕ್ಷಕಿ ಲತಾ ಮಹಾಜನಶೆಟ್ಟಿ ಅಭಿಮತ

Must Read

- Advertisement -

ಲಿಂಗಾಯತ ಸಂಘಟನೆ ವತಿಯಿಂದ ‘ಶಿಕ್ಷಕರ ದಿನಾಚರಣೆ’ ಮತ್ತು ಹೂಗಾರ ಮಾದಯ್ಯನವರ ಜಯಂತಿ ಉತ್ಸವ 

ಶಿಕ್ಷಣದ ಪಠ್ಯದ ಜೊತೆಗೆ ಮಕ್ಕಳಿಗೆ ವಚನಗಳನ್ನು ರೂಢಿಸಿದ್ದೇ ಆದರೆ ಮಕ್ಕಳ ರೀತಿ,ನೀತಿ ಆಚಾರ ವಿಚಾರಗಳಲ್ಲಿ ಆಗಾಧ ಪ್ರಮಾಣದ ಬದಲಾವಣೆಯಾಗುವುದು ಎಂದು ಸೇವಾ ಪ್ರಶಸ್ತಿ ಪಡೆದ ಶಿಕ್ಷಕಿ ಲಲಿತಾ ಮಹಾಜನಶೆಟ್ಟಿ ಹೇಳಿದರು.

ರವಿವಾರ ದಿ 22 ರಂದು ಲಿಂಗಾಯತ ಸಂಘಟನೆಯ ವತಿಯಿಂದ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿಕ್ಷಕರ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

- Advertisement -

ಶರಣರ ವಚನಗಳು ಜೀವನದ ಸಾರ್ವತ್ರಿಕ ಸತ್ಯದ ಎಲ್ಲಾ ಆಯಾಮಗಳನ್ನು ಒಳಗೊಂಡಿವೆ. ಮಕ್ಕಳು ಶಾಲಾ ಹಂತದಲ್ಲಿಯೇ ಶರಣರ ವಚನಗಳನ್ನು ಮನನ ಮಾಡಿಕೊಳ್ಳುವುದರ ಜೊತೆಗೆ ಶಿಕ್ಷಕರಾದ ನಾವು ಅವುಗಳನ್ನು ಆಚರಣೆಯಲ್ಲಿ ತರುವತ್ತ ಶ್ರಮಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತ ಶಿಕ್ಷಕರಾದ ಶ್ರೀದೇವಿ ನರಗುಂದ, ಶೋಭಾ ಪಾಶ್ಚಾಪೂರ, ಸಿ. ಟಿ. ತುಬಾಕಿ , ಎ. ಬಿ. ಮಡಿವಾಳರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಮಾಡಿ ತಾಲೂಕು ಮತ್ತು ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಅಂಜನಾ ಅಗಸಿಮನಿ, ಲಕ್ಷ್ಮಿ ಬಹದ್ದೂರಿ ಮತ್ತು ಭೀಮಾಶಂಕರ ಕುಂಬಾರರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಹೂಗಾರ ಮಾದಯ್ಯನವರ ಜಯಂತಿ ಪ್ರಯುಕ್ತ ಶಿಕ್ಷಕಿ ಸುಶೀಲಾ ಗುರವ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ಸದಾಶಿವ ದೇವರಮನಿ, ವಿ.ಕೆ ಪಾಟೀಲ,ಶಶಿಭೂಷಣ ಪಾಟೀಲ,ಬಸವರಾಜ ಕರಡಿಮಠ, ಆನಂದ ಕರ್ಕಿ, ಅಶೋಕ ಖೋತ,ಬಸವರಾಜ ಬಿಜ್ಜರಗಿ,ಶಂಕರಪ್ಪ ಮೆಣಸಿನಕಾಯಿ,ಮಹಾಂತೇಶ ಇಂಚಲ,
ಮಹೇಶ ಅಕ್ಕಿ,ಸುನೀಲ ಸಾಣಿಕೊಪ್ಪ, ವಿರೂಪಾಕ್ಷ ದೊಡ್ಡಮನಿ, ವಿಜಯ ಕಿಳ್ಳಿಕೇತರ ಸೇರಿದಂತೆ ಸಂಘಟನೆ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.

- Advertisement -

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು.ಸಂಗಮೇಶ ಅರಳಿ ಸ್ವಾಗತಿಸಿದರು ಎಮ್ ವೈ ಮೆಣಸಿನಕಾಯಿ ಪರಿಚಯಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು ಕೊನೆಯಲ್ಲಿ ಸುರೇಶ ನರಗುಂದ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group