ಸಿಂದಗಿ; ಬದಲಾವಣೆ ಜಗದ ನಿಯಮ ಅನ್ನುವಂತೆ ಒಬ್ಬ ಬೇಡ ಕುಲದಲ್ಲಿ ಜನಿಸಿದ ರತ್ನಾಕರ ಬೇಟೆಗಾರರಾಗಿ, ದರೋಡೆಕೊರರಾಗಿದ್ದ ವಾಲ್ಮಿಕಿಯವರು ನಾರದ ಮುನಿಗಳ ಮಾತಿಗೆ ಕಟ್ಟುಬಿದ್ದು ೧೨ ವರ್ಷ ರಾಮ ನಾಮ ಜಪಿಸಿ ರಾಮಾಯಣ ಕೃತಿಗೆ ಕಾರಣಿಕರ್ತರಾಗಿ ಇಡೀ ಜಗತ್ತಿಗೆ ರಾಮ, ಸೀತೆಯರ ಪರಿಚಯವನ್ನು ತಿಳಿಸಿಕೊಟ್ಟಿದ್ದಾರೆ ಅದಕ್ಕೆ ನಾವೆಲ್ಲ ಗ್ರಂಥವನ್ನು ಪೂಜಿಸುತ್ತಿದ್ದೇವೆ ಎಂದು ಆರ್.ಡಿ.ಪಿಯು ಕಾಲೇಜಿನ ಉಪನ್ಯಾಸ ಶಶಿಧರ ಅವಟಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ವಾಲ್ಮೀಕಿ ಅನ್ನುವದು ಒಂದು ಹೆಸರಾಗದೇ ಒಂದು ಶಕ್ತಿಯಾಗಿದೆ. ವಾಲ್ಮಿಕಿ, ವ್ಯಾಸ, ಡಾ. ಅಂಬೇಡ್ಕರ ಅವರು ದಲಿತ ಕುಟುಂಬದಲ್ಲಿ ಹುಟ್ಟಿದರು ಕೂಡಾ ಈ ದೇಶಕ್ಕೆ ಒಂದೊಂದಾಗಿ ಗ್ರಂಥ ಬರೆದು ದೇಶದ ಚರಿತ್ರೆಯನ್ನೇ ಬದಲಾವಣೆ ಮಾಡಿದ್ದಾರೆ. ರಾಮಾಯಣ ಗ್ರಂಥವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಮಹರ್ಷಿ ವಾಲ್ಮೀಕಿಯವರು ಅವರು ಸಣ್ಣ ಸಮುದಾಯವರು ಎಂದು ಗುರುತಿಸದೇ ಸಮ ಸಮಾಜ ಕಟ್ಟುವಲ್ಲಿ ಶ್ರಮಿಸಿದಂತವರ ಆದರ್ಶಗಳನ್ನು ನಾವೆಲ್ಲರು ಪಾಲಿಸಿದ್ದಾದರೆ ಜಯಂತಿ ಆಚರಿಸಿದಕ್ಕೆ ಸ್ವಾರ್ಥಕವಾಗುತ್ತದೆ ಮುಂದಿನ ಪೀಳಿಗೆಗೆ ಅವರ ಚರಿತ್ರೆಯನ್ನು ತಿಳಿಪಡಿಸಯವ ಕಾರ್ಯದಲ್ಲಿ ತೊಡಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಅದ್ಯಕ್ಷ ಶಾಂತವೀರ ಬಿರಾದಾರ, ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಅಧಿಕಾರಿ ರಾಮು ಅಗ್ನಿ, ವಾಲ್ಮಿಕಿ ಸಮಾಜದ ತಾಲೂಕು ಅಧ್ಯಕ್ಷ ಸಿದ್ದಲಿಂಗ ನಾಯ್ಕೋಡಿ ಮಾತನಾಡಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಬಿಇಓ ಮಹಾಂತೇಶ ಯಡ್ರಾಮಿ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ವೇದಿಕೆ ಮೇಲಿದ್ದರು.
ಡಿ.ಎಸ್‌ಎಸ್ ಜಿಲ್ಲಾ ಸಂ. ಸಂಚಾಲಕ ವೈ.ಸಿ.ಮಯೂರ, ವಾಲ್ಮೀಖಿ ಸಮಾಜದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಪೀರು ಕೇರೂರ, ಈರಣ್ಣಾ ಕುರಿ, ಪುರಸಭೆ ಸದಸ್ಯ ಸಂದೀಪ ಚೌರ, ಶರಣಪ್ಪ ಸುಲ್ಪಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಆರ್.ಎಸ್.ಬನ್ನೆಟ್ಟಿ ವಂದಿಸಿದರು.