- Advertisement -
ಸಿಂದಗಿ; ವಾಲ್ಮಿಕಿಯವರು ಇಡೀ ಮನುಕುಲಕ್ಕೆ ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಬಹುದೊಡ್ಡ ಸಂದೇಶ ನೀಡಿದ್ದಾರೆ. ಅವರು ಸಾರಿದ ಬದುಕಿನ ಮೌಲ್ಯಗಳು ಎಂದಿಗೂ ಅಗತ್ಯ ಎಂದು ನಿವೃತ್ತ ಪ್ರಾಚಾರ್ಯ ಆಯ್.ಬಿ. ಬಿರಾದಾರವರು ಹೇಳಿದರು.
ಸ್ಥಳೀಯ ಪಿ.ಇ.ಎಸ್. ಪ.ಪೂ. ಕಾಲೇಜಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಾಯನ್ ಕೆ.ಎಚ್. ಸೋಮಾಪೂರ, ಪಿ.ಎಂ. ಮಡಿವಾಳರ, ಪ್ರಚಾರ್ಯ ಜಿ.ಎಸ್. ಕಡಣಿ, ಆರ್.ಬಿ. ಗೋಡಕರ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿಯವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಅಮೀರ ಮೋಪಗಾರ ಸ್ವಾಗತಿಸಿದರು.