spot_img
spot_img

ಮೌಲ್ಯಯುತ ಕೃತಿಗಳು ಸಾಹಿತ್ಯದ ಮೌಲ್ಯಮತ್ತು ಸಾಹಿತಿಗಳ ಹಿರಿಮೆ ಹೆಚ್ಚಿಸುವವು. ಡಾ. ಸರಜೂ ಕಾಟಕರ

Must Read

ಇತ್ತೀಚಿನ ದಿನಗಳಲ್ಲಿ ಅನೇಕ ಕೃತಿಗಳು ಹೊರಬರುತ್ತಿವೆ. ಮೌಲ್ಯಯುತ ಕೃತಿಗಳ ರಚನೆಯಿಂದ ಸಾಹಿತ್ಯದ ಕೀರ್ತಿ ಹೆಚ್ಚುವುದರ ಜೊತೆಗೆ ಮಹಿಳಾ ಸಾಹಿತಿಗಳ ಹಿರಿಮೆ ನಾಡಿನಾಚೆಗೂ ಹಬ್ಬುವುದು. ಆ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ಆಗಲಿ ಎಂದು ‘ಆದರ್ಶ ತಂದೆ ದತ್ತಿ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಪತ್ರಕರ್ತ ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಂಘದ ‘ವಾರ್ಷಿಕೋತ್ಸವ’ ಮತ್ತು ‘ದತ್ತಿನಿಧಿ ಕಾರ್ಯಕ್ರಮ’ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಆಶಾ ಕಡಪಟ್ಟಿ ಮಾತನಾಡಿ, ಸಂಘದ ನಿರಂತರ ಚಟುವಟಿಕೆಗಳು ಜಿಲ್ಲೆಯ ಮಹಿಳೆಯರಲ್ಲಿ ಬರೆಯುವ ಆಶಾಭಾವನೆಯನ್ನು ಮೂಡಿಸುತ್ತಿವೆ. ಇದೇ ರೀತಿಯಲ್ಲಿ ಸಂಘದ ಚಟುವಟಿಕೆಗಳು ಮುಂದುವರೆಯಲಿ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೊಳ್ಳಿ, ಕಳೆದೆರಡು ವರ್ಷದ ಅವಧಿಯಲ್ಲಿ ಸಾಹಿತಿಗಳ, ಮತ್ತು ದತ್ತಿ ದಾನಿಗಳ ಆರ್ಥಿಕ ಸಹಕಾರ, ಹಿರಿಯರ ಪ್ರೋತ್ಸಾಹದಿಂದ ಅನೇಕ ಕ್ರಿಯಾಶೀಲ ಚಟುವಟಿಕೆಗಳು ನಡೆದಿವೆ. ಇದೇ ರೀತಿ ಸಂಘದ ಚಟುವಟಿಕೆಗಳು ನಿರಂತರವಾಗಿ ಸಾಗುವವು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಜಿಲ್ಲಾ ಮಹಿಳೆಯರು ಸಾಹಿತ್ಯದ ಎಲ್ಲಾ ಆಯಾಮಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಸಂಘದ ಪ್ರೋತ್ಸಾಹವೇ ಬರೆಯಲು ಪ್ರೇರಣೆಯಾಗಿದೆ ಎಂದರು. ಅತಿಥಿಗಳಾದ ದೀಪಿಕಾ ಚಾಟೆ ಮಾತನಾಡಿ, ಭರವಸೆಯಿಂದ ಜೀವಿಸಿದರೆ ಬೇಕಾದ್ದನ್ನು ಸಾಧಿಸಬಹುದು. ಆ ನಿಟ್ಟಿನಲ್ಲಿ ಸಾಹಿತ್ಯ ಬೆಳೆಸುವ ಭರವಸೆಯನ್ನು ಲೇಖಕಿಯರ ಸಂಘ ಜಿಲ್ಲೆಯ ಮಹಿಳೆಯರಿಗೆ ನೀಡಿದೆ. ಇದು ಹೀಗೇ ಮುಂದುವರೆಯಲಿ ಎಂದರು.

ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ಹಲವುವರ್ಷಗಳ ಹಿಂದೆ ಹುಟ್ಟು ಹಾಕಿದ ಈ ಸಂಘ ಇಂದು ಜಿಲ್ಲೆಯಾದ್ಯಂತ ಹೆಸರು ಮಾಡಿದೆ. ದತ್ತಿನಿಧಿಗಳು ಜೀವಾಳವಾಗಿರುವ ಸಂಘಗಳಿಗೆ ಆರ್ಥಿಕವಾಗಿ ಇನ್ನೂ ಸಬಲತೆ ಬಂದರೆ ಹೆಚ್ಚಿಗೆ ಬೆಳೆಯಲು ಸಾಧ್ಯ ಆ ನಿಟ್ಟಿನಲ್ಲಿ ಎಲ್ಲರೂ ಸಂಘದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಾ ಮುಂದುವರೆಸೋಣ ಎಂದರು.

ಇದೇ ಸಂದರ್ಭದಲ್ಲಿ ದತ್ತಿ ದಾನಿಗಳ ಹೆಸರಿನಲ್ಲಿ ಇಟ್ಟಿರುವ ದತ್ತಿ ಪ್ರಶಸ್ತಿ ಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೃತಿ ರಚಿಸಿದ ಸಂಘದ ಲೇಖಕಿಯರಾದ ರಂಜನಾ ನಾಯಿಕ,ಡಾ ಶೋಭಾ ನಾಯಕ, ರೇಣುಕಾ ಜಾಧವ, ರಾಜನಂದಾ ಘಾರ್ಗಿ ರವರಿಗೆ ನೀಡಿ ಗೌರವಿಸಲಾಯಿತು. ಸಂಘದ ವತಿಯಿಂದ ದತ್ತಿ ದಾನಿಗಳಾದ ಜ್ಯೋತಿ ಬದಾಮಿ,ಸುಧಾ ಪಾಟೀಲ, ವಿಜಯಲಕ್ಷ್ಮಿ ಪುಟ್ಟಿ, ವಿದ್ಯಾ ಹುಂಡೇಕಾರ, ಪ್ರಭಾ ಪಾಟೀಲ ಇಂದಿರಾ ಮೋಟೆಬೆನ್ನೂರ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ದತ್ತಿ ದಾನಿಗಳು ತಮ್ಮ ಹಿರಿಯರ ಹೆಸರಿನಲ್ಲಿ ಇಟ್ಟಿರುವ ದತ್ತಿ ಮತ್ತು ಅವರ ವಿಶೇಷ ಸಾಧನೆಗಳನ್ನು ನೆನೆದು ವಿವರಿಸಿದರು.

ಈ ಸಂದರ್ಭದಲ್ಲಿ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಪುಷ್ಕಲಾ ನೃತ್ಯ ತಂಡದವರಿಂದ ನೃತ್ಯ ಮತ್ತು ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಸದಸ್ಯೆಯರಾದ ಜಯಶೀಲಾ ಬ್ಯಾಕೋಡ, ಜ್ಯೋತಿ ಮಾಳಿ,ವಾಸಂತಿ ಮೇಳೆದ, ಸುನಂದಾ ಎಮ್ಮಿ,ಆಶಾ ಯಮಕನಮರಡಿ,ಸುಶೀಲಾ ಗುರವ, ಅಕ್ಕಮಹಾದೇವಿ ಹುಲಗಬಾಳಿ, ನೀತಾ ರಾವ, ಸಾಹಿತಿಗಳಾದ ಬಿ.ಎಸ್.ಗವಿಮಠ, ಯ.ರು.ಪಾಟೀಲ,ಬಸವರಾಜ ಗಾರ್ಗಿ, ಸ. ರಾ. ಸುಳಕೂಡೆ, ಮುತಾಲಿಕ ದೇಸಾಯಿ, ಶಿ. ಗು.ಕುಸುಗಲ್, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ ರಮೇಶ್ ಮಗದುಮ್ಮ ಸೇರಿದಂತೆ ಇತರ ಸಾಹಿತ್ಯಾಸಕ್ತರು ಭಾಗಿಯಾಗಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುನಂದಾ ಮುಳೆ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರು ವರದಿ ವಾಚಿಸಿದರು, ಕಾರ್ಯದರ್ಶಿ ರಾಜನಂದಾ ಘಾರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು ಕೊನೆಯಲ್ಲಿ ಭಾರತಿ ಮಠದ ವಂದಿಸಿದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!