spot_img
spot_img

ಬದುಕಿನ ಮೌಲ್ಯಗಳನ್ನು ವಾಲ್ಮೀಕಿ ರಾಮಾಯಣದ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ಎಸ್.ಸಿ.ಕರೀಕಟ್ಟಿ

Must Read

ಸವದತ್ತಿಃ ವಾಲ್ಮೀಕಿ ರಾಮಾಯಣದಲ್ಲಿ ಬದುಕಿನ ಮೌಲ್ಯಗಳು ಸಮ್ಮಿಳಿತಗೊಂಡಿವೆ. ರಾಮಾಯಣದಲ್ಲಿನ ಮೌಲ್ಯಗಳ ನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಇಂಥ ಆಚರಣೆಗಳ ಸಾರ್ಥಕತೆ ಬರುವುದು. ನಾವು ನಮ್ಮ ನಿತ್ಯದ ಬದುಕಿನಲ್ಲಿ ರಾಮಾಯಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಕರೆ ನೀಡಿದರು.

ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಆರ್.ಮಾರಾ, ಶಿಕ್ಷಣ ಸಂಯೋಜಕರಾದ ಎಂ. ಡಿ. ಹುದ್ದಾರ, ಗುರುನಾಥ ಕರಾಳೆ, ಪತ್ರಾಂಕಿತ ವ್ಯವಸ್ಥಾಪಕರಾದದ ಐ.ಎಂ.ಮಕಾನದಾರ, ಪ್ರಥಮ ದರ್ಜೆ ಸಹಾಯಕರಾದ ಎನ್.ಎಸ್.ವಗೆನ್ನವರ,ಕೊಟ್ರೇಶ ಗೊಲ್ಲಾರಟ್ಟಿ, ಎಫ್.ಎಚ್.ಮಾವುತ, ದ್ವಿತೀಯ ದರ್ಜೆ ಸಹಾಯಕರಾದ ಪ್ರಶಾಂತ, ಮೋಟೆಕರ, ವಿದ್ಯಾಶ್ರೀ ಗಾಣಗಿ, ಡಿ.ದರ್ಜೆ ನೌಕರರಾದ ಆಯೇಷಾ ಜಾಗೀರದಾರ, ರಾಜು ಹನಸಿ,ದೈಹಿಕ ಶಿಕ್ಷಕರಾದ ಪಿ.ಎನ್.ದೊಡಮನಿ, ಮಲ್ಲೇಶ ಕೊಪ್ಪದ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮಯ್ಯ ಡಿ. ಟಿ. ಮರಕುಂಬಿ, ಬಿ.ಆರ್.ಸಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರತ್ನಾ ಸೇತಸನದಿ, ವ್ಹಿ.ಸಿ.ಹಿರೇಮಠ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ದುರಗಪ್ಪ ಭಜಂತ್ರಿ ಸೇರಿದಂತೆ ಇಲಾಖೆಯ ಸಿಬ್ಬಂದಿಯವರು ಹಾಜರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿಯವರಿಂದ ವಾಲ್ಮೀಕಿ ಯವರ ಕುರಿತು ಪ್ರಾರ್ಥನಾ ಗೀತೆ ಜರುಗಿತು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಡಿ ಹುದ್ದಾರ ವಂದಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!