spot_img
spot_img

ಬಸವದರ್ಶನ ಪ್ರವಚನ ಮಂಗಲ ಸಮಾರಂಭದಲ್ಲಿ ಪೂಜ್ಯರುಗಳಿಗೆ ‘ವಂದೇ ಗುರುಪರಂಪರಾಮ್’ ಹಾಗೂ ‘ ಸತ್ಸಂಗ ಸಂಪದ’ ಕೃತಿಗಳ ಅರ್ಪಣೆ 

Must Read

ಬೆಳಗಾವಿಯ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ನಡೆದ ಬಸವದರ್ಶನ ಪ್ರವಚನ ಮಂಗಲ ಸಮಾರಂಭದಲ್ಲಿ ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಸಂಸ್ಕೃತಿ ಚಿಂತಕ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವ ಸಾರುವ ವಿಶೇಷ ಹೊತ್ತಗೆ ‘ವಂದೇ ಗುರುಪರಂಪರಾಮ್’ ಹಾಗೂ ಸದ್ವಿಚಾರಗಳ ಅಂಕಣ ಬರಹ ಸಂಕಲನ  ‘ ಸತ್ಸಂಗ ಸಂಪದ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ವೇದಿಕೆ ಮೇಲೆ ಉಪಸ್ಥಿತರಿದ್ದ ಡಂಬಳ ಗದಗ ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ,ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ, ಅಲ್ಲಮಪ್ರಭು ಸ್ವಾಮಿಗಳು , ಅಥಣಿ ಮೋಟಗಿ ಮಠದ ಪ್ರಭು ಚೆನ್ನ ಮಹಾಸ್ವಾಮಿಗಳು,  ಮಮ್ಮಿಗಟ್ಟಿ ಡಾ. ಬಸವಾನಂದ ಸ್ವಾಮಿಗಳು, ವಾಗ್ದೇವಿ ತಾಯಿ ,ಕುಮುದಿನಿ ತಾಯಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್ಎಂ ಜಾಮದಾರ ರವರುಗಳಿಗೆ ಕೃತಿಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಪುಸ್ತಕ ಪ್ರಚಾರ ಸಮಿತಿ ಅಧ್ಯಕ್ಷ ರಾಜು ನಾಶಿಪುಡಿ ಮತ್ತು  ಸಂಚಾಲಕರಾದ ಯಮಕನಮರಡಿಯ ಸೋಮಶೇಖರ ಹೊರಕೇರಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!