spot_img
spot_img

ಹಾಸನದಲ್ಲಿ ಕವಿ ಕಾವ್ಯ ಕುಂಚ ಗಾಯನ ನೃತ್ಯ ವಿಮಶೆ೯ ಕಾಯ೯ಕ್ರಮ

Must Read

spot_img
- Advertisement -

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ, ಹಾಸನ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ ಉಡುವಾರೆ ಇವರ ಸಾರಥ್ಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ಮೂರರಂದು ಭಾನುವಾರ ಹಾಸನ ನಗರ ಸಾಲಗಾಮೆ ರಸ್ತೆ ಅರಳಿಕಟ್ಟೆ ಸರ್ಕಲ್ ಬಳಿ ಇರುವ ಸಂಸ್ಕೃತ ಭವನದಲ್ಲಿ ಕವಿ ಕಾವ್ಯ ಕುಂಚ ಗಾಯನ, ನೃತ್ಯ ವಿಮರ್ಶೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಡಿಆರ್‌ಡಿಓ ಬೆಂಗಳೂರು ಸ್ವಾಮಿ ನಾಯಕ್ ಉದ್ಘಾಟಿಸುವರು. ಹಾಸನ ಆಕಾಶವಾಣಿ ನಿರ್ದೇಶಕರು ವಿಜಯ ಅಂಗಡಿಯವರಿಂದ ಪ್ರಧಾನ ಭಾಷಣ ಸಾಹಿತಿ ಗೊರೂರು ಅನಂತರಾಜು ಅವರಿಂದ ಪ್ರಾಸ್ತಾವಿಕ ಭಾಷಣ ಇರುವುದು. ಕಾರ್ಯಕ್ರಮದಲ್ಲಿ 37 ಕವಿಗಳ ಸ್ವರಚಿತ ಕವಿತೆಗಳನ್ನು ಗಾಯಕರು ರಾಗ ಸಂಯೋಜಿಸಿ ಹಾಡುವರು ಮತ್ತು ಚಿತ್ರ ಕಲಾವಿದರು ಚಿತ್ರ ಬಿಡಿಸುವರು ನಂತರ 9 ವಿಮರ್ಶಕರು ತಲಾ ನಾಲ್ಕು ಕವಿತೆ, ಗಾಯನ ಚಿತ್ರಗಳ ಕುರಿತಾಗಿ ವಿಮರ್ಶೆ ಮಾಡುವರು. ಈ ನಡುವಿನಲ್ಲಿ ಭರತನಾಟ್ಯ ಕಲಾವಿದೆಯರಿಂದ ನೃತ್ಯ ಪ್ರದರ್ಶನ ಇರುವುದು. ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಗಾಯಕರು ಚಿತ್ರ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group