ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಹಾಸನ ಹಾಗೂ ಶ್ರೀ ಶಾರದಾ ಕಲಾಸಂಘ (ರಿ) ವಿಜಯನಗರ ಬಡಾವಣೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ದಿ. 6-6-2024ರ ಗುರುವಾರ ಮದ್ಯಾಹ್ನ 3ಕ್ಕೆ ಹಾಸನ ತಾ. ಶ್ರೀ ಗುರು ಬೂದೇಶ್ವರಸ್ವಾಮಿ ಪುಣ್ಯ ಕ್ಷೇತ್ರ, ಬಿಡಾರದಹಳ್ಳಿ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಾಸನ ತಾ. ವಿಧಾನ ಸಭಾ ಕ್ಷೇತ್ರದ ಶಾಸಕರು ಹೆಚ್.ಕೆ.ಸ್ವರೂಪ್‍ರವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಈ.ಕೃಷ್ಣೇಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಡಾ.ಎಂ.ಡಿ. ಸುದರ್ಶನ್‍ರವರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು, ಡಾ. ತಾರಾನಾಥ್, ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ, ಹಾಸನ, ಎನ್.ಉದಯಕುಮಾರ್, ದರ್ಶನ್ ವೆಂಕಟೇಶ್ ಕಲಾವಿದರು ಉಪಸ್ಥಿತರಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀಮಠದ ಅಧ್ಯಕ್ಷರು ರಮೇಶ್ ಹೊನ್ನಾವರ, ದೇವರಾಜ್ ಉಪಾಧ್ಯಕ್ಷರು ದುದ್ಧ, ತಮ್ಮಣಗೌಡರು ವಕೀಲರು ಲಿಂಗರಸನಹಳ್ಳಿ, ಗುರುರಾಜ್ ಕಾರ್ಯದರ್ಶಿಗಳು ಹರುವನಹಳ್ಳಿ, ಎಲ್.ಪಿ.ಕುಮಾರ್ ಧರ್ಮದರ್ಶಿಗಳು, ರವಿಕುಮಾರ್, ಅಧ್ಯಕ್ಷರು ಕಲಾವಿದರ ಹಿತರಕ್ಷಣಾ ಸಮಿತಿ, ನಾಯಕರಹಳ್ಳಿ ಮಂಜೇಗೌಡರು, ರವಿ ನಾಕಲಗೊಡು, ಹೆತ್ತೂರು ನಾಗರಾಜ್, ಸಮುಖ ರಘುಗೌಡರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕಲಾವತಿ ಮಧುಸೂಧನ್ ಮತ್ತು ಹೆಚ್.ಜಿ.ರೂಪಾದೇವಿ ಅವರಿಂದ ವೀಣಾವಾದನ ಭಾವಗೀತೆ, ಸಾವಿತ್ರಮ್ಮ ತಂಡ ಸೋಬಾನೆ ಪದಗಳು, ಬೂದೇಶ್ವರ ತಂಡ ತತ್ವಪದಗಳು, ಶಶಿಕಲಾ ತಂಡ ನೃತ್ಯ ರೂಪಕ, ವಿರೂಪಾಕ್ಷ ತಂಡ ಕೋಲಾಟ, ಶಾರದ ಕಲಾತಂಡ ಸುಗಮ ಸಂಗೀತ, ಹೆಚ್.ಜಿ.ವಿಜಯಕುಮಾರ್ ತಂಡ ರಂಗಗೀತೆಗಳು, ಉಮೇಶ್ ತಂಡ ಜಾನಪದ ಗೀತೆ, ಯಶೋಧಮ್ಮ ತಂಡದಿಂದ ಗಂಗೆ ಗೌರಿ ನಾಟಕ, ಗ್ಯಾರಂಟಿ ರಾಮಣ್ಣ ತಂಡದಿಂದ ಬಾಡದ ಬದುಕು ಸಾಮಾಜಿಕ ನಾಟಕ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖೈಯಲ್ಲಿ ಕಲಾಪ್ರೇಮಿಗಳು ಆಗಮಿಸಬೇಕೆಂದು ಶ್ರೀ ಶಾರದಾ ಕಲಾಸಂಘದ ಅದ್ಯಕ್ಷರು ಹೆಚ್.ಜಿ.ಗಂಗಾಧರ್ ಕೋರಿದ್ದಾರೆ.