ಸಿಂದಗಿ: ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾನ್ವಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಆರ್ಎಂಎಸ್ಎ ಮತ್ತು ಕ್ರೈಸ್ ಮೂಲಕ ಆದರ್ಶ ಮತ್ತು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ತೆರೆದು ಶಿಕ್ಷಣದ ದಾಹ ನೀಗಿಸುತ್ತಿವೆ ಅದರ ಉತ್ತೇಜನಕ್ಕೆ ಜನಪ್ರತಿನಿಧಿಗಳು ಸರಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರ ಅಹವಾಲನ್ನು ಸ್ವೀಕರಿಸಿ ಅವರು ಮಾತನಾಡಿ, ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಈ ಶಾಲೆ ನನ್ನ ಕನಸಿನ ಕೂಸಾಗಿತ್ತು ಅದನ್ನು ಪ್ರಾರಂಭಿಸಲು ಸಾಕಷ್ಠು ಶ್ರಮ ಪಟ್ಟಿದ್ದೇನೆ ಇನ್ನೂ ಈ ಶಾಲಾ ಸುಧಾರಣೆಗೆ ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ರವಿ ಬಮ್ಮಣ್ಣಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 74 ಸರಕಾರಿ ಆದರ್ಶ ವಿದ್ಯಾಲಯಗಳಿವೆ ಅವುಗಳಲ್ಲಿ ನಮ್ಮ ಶಾಲೆ ಅತ್ಯುನ್ನತ ಸ್ಥಾನದಲ್ಲಿದೆ. ಕಾರಣ ನಿಮ್ಮ ಅಧಿಕಾರಾವಧಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದ್ದೀರಿ ಇನ್ನುಳಿದ ಸಣ್ಣ ಪುಟ್ಟ ಕಾಮಗಾರಿಗಳು ನಿಮ್ಮಿಂದಲೇ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಆದಷ್ಟು ಬೆಗನೇ ಶಾಲಾ ಆವರಣದಲ್ಲಿ ಗಟ್ಟು ಜೋಡಣೆ ಮತ್ತು ಶಾಲೆಯ ಸುತ್ತಲು ಕಂಪೌಂಡ ನಿರ್ಮಿಸಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಒಂದು ಬೋರವೆಲ್ ಕೊರೆಸುವಂತೆ ಮನವಿ ಮಾಡಿಕೊಂಡರು.
ಪ್ರಬಾರಿ ಮುಖ್ಯೋಪಾದ್ಯಾಯ ರಮೇಶ ಚಟ್ಟರಕಿ ಮಾತನಾಡಿ, ಈ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು ಎಲ್ಲ ವಿದ್ಯಾರ್ಥಿಗಳು ಪ್ರತಿಭಾನ್ವಿತ ಗ್ರಾಮೀಣ ಬಡ ಮಕ್ಕಳೆ ಇಲ್ಲಿರುವುದು. ಕಾರಣ 2 ವರ್ಷಗಳಿಂದ ಓರ್ವ ಶಿಕ್ಷಕಿ ಶಾಲೆಗೆ ಬಂದಿಲ್ಲ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದಾಗ್ಯೂ ಯಾವುದೇ ಪ್ರಯೋಜನೆ ಕಂಡಿಲ್ಲ ಕೂಡಲೇ ಈ ಸಮಸ್ಯೆಯನ್ನು ನಿಗಿಸಿ ಶಿಕ್ಷಕರ ಕೊರತೆಯನ್ನು ನಿವಾರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ, ಬಸವರಾಜ ಸಜ್ಜನ್, ಪಂಡಿತ ಯಂಪೂರೆ ವೇದಿಕೆ ಮೇಲಿದ್ದರು. ಎಸ್ಡಿಎಂಸಿ ಸದಸ್ಯರಾದ ಸಾವಿತ್ರಿಬಾಯಿ ತಳವಾರ, ಶ್ರೀಶೈಲ ಕಡಣಿ, ಅಶೋಕ ಕೊರಳ್ಳಿ, ಸಲೀಂ ನದಾಫ್, ಎಸ್ ಆರ್.ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ರಾಘವೇಂದ್ರ ಬಜಂತ್ರಿ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕುಂಬಾರ ವಂದಿಸಿದರು.