Homeಸುದ್ದಿಗಳುಇಂದಿನಿಂದ ಮಸಗುಪ್ಪಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ

ಇಂದಿನಿಂದ ಮಸಗುಪ್ಪಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ

ಮೂಡಲಗಿ :ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಟ್ಟಡ ಉದ್ಘಾಟನಾ ಸಮಾರಂಭ ಜರುಗಿ ೩ ವರ್ಷ ತುಂಬಿದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಜೂ. ೨ ರಿಂದ ೩ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ ಕಮಿಟಿಯವರು ತಿಳಿಸಿದ್ದಾರೆ.

ಜೂ.೨ ರಂದು ಸಾಯಂಕಾಲ ೭ಗಂಟೆಗೆ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿಗಳ ಆಗಮನವಾಗುವದು.
ಜೂ.೩ ರಂದು ಮುಂಜಾನೆ ೫ ಗಂಟೆಗೆ ಶ್ರೀ ಸೂಕ್ತ ಹೋಮ, ನವಗೃಹ ಹೋಮ, ಮೃತ್ಯುಂಜಯ ಹೋಮ, ಶಾಂತಿ ಹೋಮ, ಗಣಪತಿ ಹೋಮ ಜರುಗುವದು.

ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಉಪ್ಪಾರಟ್ಟಿ ಶ್ರೀ ಸಿದ್ದಾರೂಢ ಮಠದ ವಿದ್ವಾನ್ ಶ್ರೀ ನಾಗೇಶ್ವರ ಸ್ವಾಮಿಗಳು, ಹುಣಶ್ಯಾಳ ಪಿಜಿ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು, ಕಪರಟ್ಟಿ-ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಶ್ರೀ ಬಸವರಾಜ ಸ್ವಾಮಿಗಳು, ತಪಶಿ ಕ್ರಾಸ್ ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ಸುರೇಶ ಮಹಾರಾಜರು ಇವರು ಸಾನ್ನಿಧ್ಯ ವಹಿಸುವರು.

ನಂತರ ೧೦-೩೦ ಗಂಟೆಗೆ ಶ್ರೀ ಮಹಾಲಕ್ಷ್ಮಿ ದೇವಿ ಗದ್ದುಗೆ ಗುಡಿಯ ಅಡಿಗಲ್ಲು ಸಮಾರಂಭ ಜರುಗುವದು.
ಈ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಅರಬಾವಿ ಕ್ಷೇತ್ರದ ಶಾಸಕ ಬಾಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group