spot_img
spot_img

ವೀರ ರಾಣಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರವಾಗಬೇಕು – ಯ. ರು. ಪಾಟೀಲ

Must Read

ಯರಗಟ್ಟಿ: “ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ವೀರ ರಾಣಿ ಕಿತ್ತೂರ ಚನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಹೆಮ್ಮೆ, ಸರ್ಕಾರ ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚಿಸಬೇಕು.ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದ್ದು ಬೆಳವಡಿ ಮಲ್ಲಮ್ಮ. ವಿಶ್ವದಲ್ಲೇ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ್ದು ಮಲ್ಲಮ್ಮ. ಅಂದು ೨೦೦೦ ಮಹಿಳೆಯರನ್ನು ಒಳಗೊಂಡ ಮಹಿಳಾ ಸೈನ್ಯಪಡೆಯನ್ನು ಬೆಳವಡಿ ಮಲ್ಲಮ್ಮ ಸಂಘಟಿಸಿದ್ದಳು. ಹಾಗೆಯೇ ಕಿತ್ತೂರು ಚನ್ನಮ್ಮ ತನ್ನ ಸೈನ್ಯದಲ್ಲಿ ಭಂಟರ ಪಡೆಯನ್ನು ಹೊಂದಿದ್ದಳು. ಇಬ್ಬರೂ ಮಹಿಳೆಯರು ನಮಗಿಂದು ಸ್ಪೂರ್ತಿ ಎಂದು ಸಾಹಿತಿ ಯ ರು ಪಾಟೀಲ ಹೇಳಿದರು.

ಪಟ್ಟಣದ ಸಿ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಿ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ಕಿತ್ತೂರು ಮತ್ತು ಬೆಳವಡಿ ಸಂಸ್ಥಾನಗಳ ಚಾರಿತ್ರಿಕ ಒಳನೋಟಗಳು” ಎಂಬ ವಿಷಯದ ಕುರಿತು ಸರಣಿ ಉಪನ್ಯಾಸದಲ್ಲಿ ಅವರು ಮಾತನಾಡುತ್ತಾ, ದತ್ತಕ ಪುತ್ರ ಹಕ್ಕಿನ ವಿರುದ್ದ ಕಿತ್ತೂರಿನ ಯುದ್ದ ಸಂಭವಿಸಿದರೆ ತಪ್ಪು ತಿಳುವಳಿಕೆಯ ಘಟನೆಯಿಂದ ಬೆಳವಡಿ ಯುದ್ದ ಸಂಭವಿಸಿತು. ಸಹೋದರತ್ವದ ಭಾವವನ್ನು ಬೆಳವಡಿ ಯುದ್ಧ ಮೂಡಿಸಿತು.ಚನ್ನಮ್ಮಳ ಸೈನ್ಯದಲ್ಲಿ ಸಂಗೊಳ್ಳಿ ರಾಯಣ್ಣ ಅಮಟೂರ ಬಾಳಪ್ಪರಂತಹ ಶೌರ್ಯವಂತರಿದ್ದರು. ಇಂದಿನ ಪ್ರಾಥಮಿಕ ಪಠ್ಯದಲ್ಲಿ ಬೆಳವಡಿ ಮತ್ತು ಕಿತೂರಿನ ಹೋರಾಟದ ವೀರರ ಕುರಿತು ಪಾಠಗಳು ಬರುವಂತಾದರೆ ಮಕ್ಕಳಲ್ಲಿ ಹೋರಾಟದ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಬಹುದು ಎಂದರು.

ಬೆಳವಡಿ ಮಲ್ಲಮ್ಮಳ ಜೀವನ ಚರಿತ್ರೆಯನ್ನು ಪ್ರಾಥಮಿಕ ಶಿಕ್ಷಣ ಪಠ್ಯದಲ್ಲಿ ಅಳವಡಿಸಬೇಕು ಎಂದು ಪಾಟೀಲ ನುಡಿದರು.

ಕಾಲೇಜಿನ ಪ್ರಾಚಾರ್ಯರಾದ ಮಹಾಂತೇಶ ತಂಬಾಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ತಮ್ಮ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಎನ್.ಎಸ್.ಎಸ್ ಶಿಬಿರಗಳ ಆಯೋಜನೆವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು ಈಗ ಸರಣಿ ಉಪನ್ಯಾಸಗಳಡಿಯಲ್ಲಿ ಕಿತ್ತೂರು ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮರ ಕುರಿತ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು. ಇತಿಹಾಸದ ಸ್ಮರಣೀಯ ಸಂಗತಿಗಳು ವಿದ್ಯಾರ್ಥಿಗಳು ಅರಿಯುವ ಮೂಲಕ ನಮ್ಮ ಸುತ್ತಮುತ್ತಲಿನ ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿಯನ್ನು ಹೊಂದಬೇಕು ಎಂದು ನುಡಿದರು.

ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ.ಎಸ್.ಎಂ.ಗಂಗಾಧರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ನಿಜಕ್ಕೂ ಚನ್ನಮ್ಮಳ ಹೋರಾಟ ಮತ್ತು ಬೆಳವಡಿ ಮಲ್ಲಮ್ಮಳ ಹೋರಾಟ ದೇಸಗತಿ ಸಂಸ್ಥಾನಗಳ ಅಧ್ಯಯನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜರುಗಬೇಕಿದೆ. ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಸಹೋದರತ್ವ ಬೆಳೆಸಿಕೊಳ್ಳುವ ಚರಿತ್ರೆ ಪುನರಚಿಸಿಕೊಳ್ಳುವ ಪ್ರಯತ್ನ ಸಾಗಿದೆ. ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಲಾವಣಿಗಳ ಸಂಪುಟ. ಕಿತ್ತೂರು ಕುರಿತು ಇದುವರೆಗೂ ಬಂದಿರುವ ನಾಟಕಗಳ ಸಂಪುಟ ಪ್ರಕಟಣೆ ಕೈಗೆತ್ತಿಕೊಂಡಿದೆ. ಇಂದಿಗೂ ಕೂಡ ಈ ಮಣ್ಣಿನ ಪ್ರಭಾವ ಮಹಿಳೆಯರಲ್ಲಿ ಬೆಳವಡಿ ಮಲ್ಲಮ್ಮ ಮತ್ತು ಕಿತ್ತೂರು ಚನ್ನಮ್ಮಳ ಹೋರಾಟ ದೈರ್ಯ ಸಾಹಸದ ಗುಣಗಳು ಹೊಂದಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ವಿವಿಧ ದಾನಿಗಳು ನೀಡಿದ ಗ್ರಂಥಗಳನ್ನು ಹೊಂದಿದ ಕನ್ನಡ ವಿಭಾಗದ ‘ತೆರೆದ ಗ್ರಂಥಾಲಯ’ವನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ. ಗಜಾನನ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮನ್ನವರ, ಸಾಹಿತಿ ವಾಯ್.ಬಿ.ಕಡಕೋಳ, ದೇವೇಂದ್ರ ಕಮ್ಮಾರ, ಎನ್.ಕೆ.ಹುಚರಡ್ಡಿ, ಆರ್.ಎಲ್.ಜೂಗನವರ, ಎಂ.ಬಿ.ಬಿರಾದಾರಗೌಡರ, ಡಾ.ರಾಜಶೇಖರ ಬಿರಾದಾರ, ಕಲ್ಲಪ್ಪ ಹಂದಿಗುಂದ, ಬಸವರಾಜ ಬೀಳಗಿ, ಡಾ. ಗುರುಪ್ರಸಾದ ಗಣೇಶಕರ, ಡಾ.ಪತ್ರೆಪ್ಪ ಸಿಂಗಾರಗೊಪ್ಪ, ದಯಾನಂದ ರಡ್ಡಿ, ಶಂಕರಗೌಡ ಪಾಟೀಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಜರುಗಿತು. ಡಾ.ರಾಜಶೇಖರ ಬಿರಾದಾರ ನಿರೂಪಿಸಿದರು. ಸಿದ್ಲಿಂಗಪ್ಪ ಗಾಳಿ ಸ್ವಾಗತಿಸಿದರು. ಚಂದ್ರಪ್ಪ ತಳವಾರ ವಂದಿಸಿದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!