spot_img
spot_img

ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾದ ವೀರಶೈವ ಪದ ಬಳಕೆ ಹಾಗೂ ಸಿದ್ಧಾಂತ ಶಿಖಾಮಣಿಯ ಪ್ರಸ್ತಾಪ

Must Read

- Advertisement -

ಹನ್ನೆರಡನೆಯ ಶತಮಾನದ ಕಲ್ಯಾಣ ಶರಣರು ಬಸವಣ್ಣನವರ ದಿಟ್ಟ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಯ ಆಂದೋಲನವನ್ನು ಆರಂಭಿಸಿದರು.
ಇಡೀ ವೈದಿಕ ಸನಾತನ ವ್ಯವಸ್ಥೆಗೆ ಪರ್ಯಾಯವಾದ ಬಡವರ ಮಹಿಳೆಯರ ಅಸ್ಪ್ರಶ್ಯರ ದಲಿತರ ಶೋಷಿತರು ಕೂಡಿ ಕಟ್ಟಿದ ಮೊದಲನೆಯ ಕನ್ನಡದ ಧರ್ಮವೇ ಲಿಂಗಾಯತ ಧರ್ಮವಾಗಿದೆ.

ವರ್ಗ ವರ್ಣ ಲಿಂಗ ಆಶ್ರಮ ಭೇದ ಅಳಿದು ಸಾರ್ವಕಾಲಿಕ ಸಮಾನತೆಯ ಸಾರಿದ ಎಲ್ಲ ಶ್ರೇಣೀಕೃತವಾದ ವ್ಯವಸ್ಥೆಯನ್ನು ಕಿತ್ತು ಹಾಕಿದ ಬಸವಣ್ಣ ಸಮತೆ ಶಾಂತಿ ಪ್ರೀತಿ ಸಹ ಬಾಳ್ವೆ ಹೀಗೆ ಮಾನವೀಯ ಮೌಲ್ಯಗಳ ಬದುಕಿನ ಸರಳ ಸೂತ್ರಗಳನ್ನು ಜನತೆಗೆ ಸಮೂಹಕ್ಕೆ ಪರಿಚಯಿಸಿದರು. ಆಡು ಭಾಷೆಯಾದ ಕನ್ನಡವೇ ದೇವ ಭಾಷೆಯಾಯಿತು.
ಪೌರೋಹಿತ್ಯವು ಧರ್ಮದ ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಅನ್ಯಾಯ ವಂಚನೆಗಳನ್ನು ತೊಡೆದು ಹಾಕಿ ,ಜಾತಿ ಅಸ್ಪ್ರಶ್ಯತೆಯನ್ನು ಬೇರು ಸಮೇತ ಸುಟ್ಟು ಸುಂದರ ಸಹಜ ಧಾರ್ಮಿಕ ಆಧ್ಯಾತ್ಮಿಕ , ಸಾಮಾಜಿಕ, ಆರ್ಥಿಕ, ನೈತಿಕ, ಮಾನಸಿಕ, ತಾತ್ವಿಕ ವಿಷಯಗಳನ್ನು ಶರಣರು ಪ್ರತಿಪಾದಿಸಿದರು.

ಕಾಯಕ ದಾಸೋಹ ಕಡ್ಡಾಯವಾಗಿತ್ತು .ಕಾಯಕವೆಂದರೆ ಮತ್ತೆ ಸತ್ಯ ಶುದ್ಧವಾದ ಕಾಯಕ ಪರಿಶ್ರಮದಿಂದ ಕೂಡಿದ ವೃತ್ತಿಯಾಗಿತ್ತು. ಕಲ್ಯಾಣ ಕ್ರಾಂತಿಗೆ ವರ್ಣ ಸಂಕರ, ಕಳಚೂರ್ಯರ ಚಾಲುಕ್ಯರ ಆಂತರಿಕ ಕಲಹ,ಸನಾತನಿಗಳ ಅಸೂಹೆ ,ವಿಪ್ಲವಕ್ಕೆ ಕಾರಣವಾಗಿತ್ತು. ಗುಡಿ ಗುಂಡಾರಗಳ ಸಂಸ್ಕೃತಿ ವಿರೋಧಿಸಿ ಜಂಗಮ ಸಂಸ್ಕೃತಿಯನ್ನು ಶರಣರು ಬೆಂಬಲಿಸಿದರು.

- Advertisement -

ಶರಣರದು ಅನುಭಾವ ಧರ್ಮ – ಹಂಚಿಕೊಳ್ಳುವ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸುವ ಉದಾರ ಗುಣಗಳನ್ನು ನಾವು ಶರಣರಲ್ಲಿ ಕಾಣಬಹುದು.
ಜಗತ್ತಿನ ಹಲವು ತಾತ್ವಿಕ ಸಂದೇಶಗಳಲ್ಲಿ ದರ್ಶನಗಳಲ್ಲಿ ಬಸವಣ್ಣ ಸ್ಥಾಪಿಸಿದ ಸಾರಿದ ಲಿಂಗಾಯತ ಧರ್ಮಗಳ ತತ್ವಗಳು ಉನ್ನತಸ್ಥಿತಿಯಲ್ಲಿವೆ.
ಹೀಗಿದ್ದರೂ 15 -16 ನೇ ಶತಮಾನದಲ್ಲಿ ಆಂಧ್ರ ಮೂಲದ ಆಗಮ ಆರಾಧ್ಯರ ಸಂಸ್ಕೃತಿಯಲ್ಲಿ ಅರಳಿ ಬಂದ ಶೈವ ಸಂಸ್ಕೃತಿಯ ಅಂಗವಾದ ವೀರಶೈವವು ಒಂದು ಆಚರಣೆ ಮಾತ್ರವು.

ಅವರ ನಂಬಿಕೆ ಮತ್ತು ಸಿದ್ಧಾಂತದಂತೆ ಅವರು ಆಂಧ್ರದ ಕೊಲ್ಲಿಪಾಕಿಯಲ್ಲಿ ಕಲ್ಲಿನಿಂದ ಉದ್ಭವವಾದ ಪೂಜ್ಯರು. ಅದು ಪೌರಾಣಿಕ ಕಲ್ಪನೆ. ಅದನ್ನು ಸಮರ್ಥಿಸುವ ,ವಿರೋಧಿಸುವ ಗೋಜಿಗೆ ಲಿಂಗಾಯತರು ಹೋಗಲೇ ಬಾರದು.ಅದು ಲಿಂಗಾಯತರಿಗೆ ಸಂಬಂಧವಿಲ್ಲದ ವಿಷಯವು.
ವೀರಶೈವ ಒಂದು ಆಚರಣೆ ಮಾತ್ರವು.. ಲಕುಲೀಶ ಕಾಳಾಮುಖಿಯಂತೆ ಇದು ಒಂದು ಶೈವ ಪಂಥದ ಪ್ರಭೇದವು.
ಆದರೆ ಲಿಂಗಾಯತ ತತ್ವ ಧರ್ಮಗಳ ಆಚರಣೆಯನ್ನು ಅನುಕರಿಸಿ ಬಸವ ಪೂರ್ವ ಯುಗದಲ್ಲಿ ಇಷ್ಟಲಿಂಗ ಪೂಜೆ ಇತ್ತು ವೀರಶೈವ ಪ್ರಾಚೀನತೆಯ ಬಗ್ಗೆ
ಡಾ.ಸಂಗಮೇಶ ಸವದತ್ತಿಮಠ ಅಂತಹ ಜ್ಞಾನಿಗಳು ಸುಳ್ಳು ಹೇಳುತ್ತಿರುವುದನ್ನು ಕಂಡರೆ ಮನಸಿಗೆ ನೋವೆನಿಸುತ್ತದೆ.
ಕಾಲಕಾಲಕ್ಕೆ ಲಿಂಗಾಯತ ಧರ್ಮವು ಅನಾಥ ಪ್ರಜ್ಞೆಯಲ್ಲಿಯೂ ತನ್ನ ತತ್ವ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ.
16 ನೆ ಶತಮಾನದ ಸಂಕಲನದ ಕಾರ್ಯದಲ್ಲಿ ಪ್ರಕ್ಷಿಪ್ತತೆ ನಡೆದು ಹೋಯಿತು .

ಕೊಂಡುಗುಳಿ ಕೇಶರಾಜನ ಕೃತಿಗಳಲ್ಲಿ ದೊಡ್ಡ ಪ್ರಮಾಣದ ಪ್ರಕ್ಷಿಪ್ತತೆ ಕಂಡು ಬರುತ್ತದೆ.ಅದರ ಕಾಲ ನಿರ್ಣಯಗಳ ಬಗ್ಗೆ ಇತ್ಯರ್ಥವಾಗಿಲ್ಲ. ತದ ನಂತರ ಯೋಗಿ ಶಿವಾಚಾರ್ಯನೆಂಬ ಕಾಲ್ಪನಿಕ ವ್ಯಕ್ತಿ ರಚಿಸಿದನೆನ್ನಲಾದ ಸಿದ್ಧಾಂತ ಶಿಖಾಮಣಿಯ ಕಾಲ ಇತ್ಯರ್ಥವಾಗಿದೆ ಅದು 14 – 15 ನೇ ಶತಮಾನದಲ್ಲಿ ರಚಿತ ಗೊಂಡಿದೆಯೆಂದು ಕುಂದಕೂರು ಡಾ. ಇಮ್ಮಡಿ ಶಿವ ಬಸವ ಸ್ವಾಮಿಗಳು ಈಗಾಗಲೇ ರುಜುವಾತು ಮಾಡಿದ್ದಾರೆ.
ವೀರಶೈವವಾದಿಗಳು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಅವರಲ್ಲಿ ಡಾ ಎಂ ಚಿದಾನಂದ ಮೂರ್ತಿ ಮತ್ತು ಡಾ ಗೊರುಚ .

- Advertisement -

ಸುಮಾರು 200 ಅಧಿಕ ಕನ್ನಡದ ವಚನಗಳು ಸಂಸ್ಕೃತಕ್ಕೆ ತರ್ಜುಮೆಯಾಗಿವೆ. ಸಿದ್ಧಾಂತ ಶಿಖಾಮಣಿಯ ಆರಂಭದಲ್ಲಿಯೇ ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂದು ನಮೂದಿಸಲಾಗಿದೆ . ಲಿಂಗಾಯತ ಎಂಬ ಪದವು ಜನಪದಿಗರ ರಕ್ತನಾಡಿಯಲ್ಲಿ ಸಮಷ್ಟಿಯ ಚೈತನ್ಯವಾಗಿ ಮೂಡಿ ಬಂದಿದೆ. ಇಲ್ಲದ ವೀರಶೈವವು ನಮ್ಮ ಮೇಲೆ ಯಜಮಾನಿಕೆ ಮಾಡದಿರಲಿ. ಕೆಲ ನಾಜೂಕಯ್ಯನವರು ಅತ್ತಲೂ ಸಹಿ ಇತಲೂ ಸಹಿ ಎಂದು ತಮ್ಮ ದ್ವಂದ್ವ ಆಷಾಢಭೂತತನವನ್ನು ಪ್ರದರ್ಶಿಸುತ್ತಿದ್ದಾರೆ.
ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾದ ವೀರಶೈವ ಪದ ಬಳಕೆ ಹಾಗೂ ಸಿದ್ಧಾಂತ ಶಿಖಾಮಣಿಯ ಪ್ರಸ್ತಾಪಗಳು. ಮತ್ತೆ ಮತ್ತೆ ಅಂತಹ ವಾದಗಳು ಗೊಂದಲಗಳು ಏಳುವುದು ಸಾಮಾನ್ಯ. ಚರ್ಚೆಗೂ ಬಾರದ, ಸತ್ಯಾಸತ್ಯವನ್ನು ಒಪ್ಪಿಕೊಳ್ಳದ ಸಂಶೋಧಕರು ಆಚಾರ್ಯರು ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾಗದಿರಲಿ. ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮವಾಗಿದೆ. ಇದು ನಮ್ಮೆಲ್ಲರ ಹಕ್ಕಾಗಲಿ ಭಿಕ್ಷೆಯಲ್ಲ. ಹೋರಾಟ ಸಂಘರ್ಷ ಕಾನೂನು ಚೌಕಟ್ಟಿನಲ್ಲಿ ಪ್ರಜಾಸತ್ತಾತ್ಮಕವಾಗಿದ್ದಲ್ಲಿ ಖಂಡಿತ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಮಾನ್ಯತೆ ದೊರೆಯುವಲ್ಲಿ ಎರಡು ಮಾತಿಲ್ಲ.

ಅಖಿಲ ಭಾರತ ವೀರಶೈವ ಮಹಾ ಸಭೆ ಕೇವಲ ಮಂತ್ರಿಗಳ ಆಯ್ಕೆಗೆ ರಾಜಕೀಯ ನಿರ್ಧಾರಕ್ಕೆ ನಿಲ್ಲುವ ಸ್ವಾರ್ಥತನದ ವೇದಿಕೆಯಾಗಿದೆ, ವೀರಶೈವ ಜೊತೆ ಲಿಂಗಾಯತ ಧರ್ಮವು ಕಲಬೆರಕೆಯಾಗಬಾರದು. ಇಂತಹ ಸ್ವತಂತ್ರ ಮಟ್ಟದ ಜನಾಂದೋಲನದಲ್ಲಿ ಪಾಲ್ಗೊಳ್ಳುವವರು ನಿಷ್ಟುರ ತತ್ವಪರವಾಗಿರಲು ಬಿನ್ನಹ
ಜೈ ಬಸವೇಶ.
————————————————–
ಡಾ.ಶಶಿಕಾಂತ,ಪಟ್ಟಣ -ಪೂನಾ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group