ಸಿಂದಗಿಯಲ್ಲಿ ವೀರಶೈವ ಧರ್ಮ ಜಾಗೃತಿ ಸಭೆ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಹಂಗಾಮಿ ಸಮಿತಿ ವತಿಯಿಂದ ವೀರಶೈವ ಧರ್ಮ ಜಾಗೃತಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ವೀರಶೈವ ಧರ್ಮದ ಆಚಾರ-ವಿಚಾರಗಳು, ಜನಜೀವನದಲ್ಲಿ ನೆಲೆಗೊಳ್ಳಬೆಕು ನಮ್ಮ ಶಿವಾಚಾರ್ಯರ ಬಳಗ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತ ನಮ್ಮ ಧರ್ಮದ ಆಚಾರ-ವಿಚಾರಗಳನ್ನು ಜನರ ಬದುಕಿನಲ್ಲಿ ಅಳವಡಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮ ಶಿವಾಚಾರ್ಯರ ಬಳಗ ಕಾರ್ಯ ತತ್ಪರರಾಗಬೇಕೆಂಬ ಧ್ಯೇಯೋದೇಶದಿಂದ ಸಿಂದಗಿಯ ಸಾರಂಗಮಠದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಶಿವಾಚಾರ್ಯರು ಸೇರಿ ಚರ್ಚಿಸಿದರು.

ಇದೇ ಸಭೆಯಲ್ಲಿ ಬರುವ ಡಿಸೆಂಬರ 20 ರಂದು ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಹೊಟಗಿ ಮಠದಲ್ಲಿ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯ ತೆಗೆದುಕೊಂಡು ಅಲ್ಲಿ ಮೂರು ದಿನಗಳವರೆಗೆ ಜನಜಾಗೃತಿ ಪಾದಯಾತ್ರೆ, ಸಧ್ಬಾವಗೋಷ್ಠಿ, ಲಿಂಗಾರ್ಚಣೆ, ಶಿವಪೂಜಾ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

- Advertisement -

ಪಂಚಪೀಠಗಳ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ನೇತೃತ್ವ ವಹಿಸಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಸಭೆಯ ಅಧ್ಯಕ್ಷತೆಯನ್ನು, ತುಮಕೂರ ಜಿಲ್ಲೆಯ ಯಡೇಯೂರು ಮಠದ ಪೂಜ್ಯರು, ಸೊಲ್ಲಾಪೂರದ ಹೊಟಗಿ ಮಠದ ಪೂಜ್ಯರು ವಹಿಸಿದ್ದರು.

ಸಭೆಯ ಪ್ರಾರಂಭದಲ್ಲಿ ಕೆಲವು ದಿನಗಳ ಹಿಂದೆ ಲಿಂಗೈಕ್ಯರಾದ ಕುಪ್ಪೂರಗದ್ದಿಗೆ, ಮಾಜಲಗಾಂವ್, ಬಸವನಹಟ್ಟಿ, ಸಿಂದಗಿ ವೀರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಜಿ ಮತ್ತು ನೂಲ ಶ್ರೀಗಳಿಗೆ ಶ್ರದಾಂಜಲಿ ಸಲ್ಲಿಸಲಾಯಿತು.

ನಾಡಿನ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಜನ ಮಠಾಧೀಶರು ಭಾಗವಹಿಸಿದ್ದರು. ನಂತರದಲ್ಲಿ ಎಲ್ಲಾ ಪೂಜ್ಯರು ಗುಡ್ಡಾಪುರ ದಾನಮ್ಮ ದೇವಿಯ ಪೂಜೆ ಮತ್ತು ಮುತೈದೆಯರ ಉಡಿತುಂಬುವ ಕಾರ್ಯಕ್ರಮ ನೆರವೇರಿಸಿಕೊಟ್ಟರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!