ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಊರಮ್ಮನ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಶಾಲಾ ಮಕ್ಕಳು ಹೋಬಳಿ ಘಟಕ ಅಧ್ಯಕ್ಷರಾದ ಮೆಹಬೂಬ್ ಬಾಷಾ ಹಾಗೂ ಪದಾಧಿಕಾರಿಗಳು ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಬಾನು ಬಿ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪ ವಕೀಲರು ಹೊಸಪೇಟೆ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಧರ್. ಹೊಸಪೇಟೆ ತಾಲೂಕು ಅಧ್ಯಕ್ಷರು ಈಡಿಗರ ರಮೇಶ್ ಆರೆಂಜ್ ಕೋಂಟಿ ಪ್ರತಿನಿಧಿಗಳು ಪುರಸಭೆ ಕಾರ್ಯಾಲಯ ನಾಮಿನಿ ಸದಸ್ಯರು ಪ್ರತಿನಿಧಿಗಳು ಪದಾಧಿಕಾರಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಮಲಾಪುರ ಹೋಬಳಿ ಘಟಕ ಹಾಗೂ ಜಿಲ್ಲಾ ಘಟಕ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ಪದಾಧಿಕಾರಿಗಳು ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಈ ಪ್ರಯುಕ್ತ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವೆಂಕಟೇಶ ಬಡಿಗೇರ ಕನ್ನಡ ಉಪನ್ಯಾಸಕರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾಡು ನುಡಿ ಸಂಸ್ಕೃತಿ, ಸಂಸ್ಕಾರಗಳು ನಮ್ಮ ಅಸ್ಮಿತೆಯ ಸಂಕೇತಗಳು ಭಾಷೆ ನಮ್ಮ ಭಾವನೆಗಳನ್ನು ನಮ್ಮ ಕನಸು ನಮ್ಮ ಹೃದಯದ ಅಂತರಾಳದ ಹುಟ್ಟಿದ್ದೇಳುವ ಕನ್ನಡದ ತರಂಗಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರನ್ನು ಅದ್ದೂರಿಯಾಗಿ ಸನ್ಮಾನ ಪುರಸ್ಕಾರಗಳೊಂದಿಗೆ ಅಭಿನಂದಿಸಲಾಯಿತು. ಕಮಲಾಪುರ ಗ್ರಾಮದ ಹಿರಿಯರು ಹಾಗೂ ನಿಜ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ನೆರವೇರಿತು