ವೆಂಟಿಲೇಟರ್ ಕದ್ದ ಕಳ್ಳರು ; ಬ್ರಿಮ್ಸ್ ಆಸ್ಪತ್ರೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬೀದರ – ಕಳೆದ ರಾತ್ರಿ ಬೀದರಿನ ಬ್ರಿಮ್ಸ್ ಆಸ್ಪತ್ರೆಯ ಎರಡು ವೆಂಟಿಲೇಟರ್ ಗಳು ಕಳುವಾಗಿವೆ ಎಂದು ಬ್ರಿಮ್ಸ್ ಆಡಳಿತ ಅಧಿಕಾರಿಗಳು ಪೋಲಿಸರಿಗೆ ದೂರು ನೀಡಿದ್ದು ಜೀವನಾಡಿಯಾದ ವೆಂಟಿಲೇಟರಗಳನ್ನೇ ರಕ್ಷಿಸಲಾರದಷ್ಟು ಆಸ್ಪತ್ರೆಯ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತಾಳಿದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಕರೋನಾ ದಿಂದ ಉಸಿರಾಟಕ್ಕೆ ತೀವ್ರ ತೊಂದರೆ ಆದಾಗ ಸೋಂಕಿತರ ಪ್ರಾಣವನ್ನು ಉಳಿಸುವಲ್ಲಿ ಮಹತ್ವ ಪಾತ್ರವಹಿಸುವ ಪ್ರಮುಖವಾದ ವೆಂಟಿಲೇಟರ್ ಗಳನ್ನೇ ಕಳ್ಳರು ತೆಗೆದು ಕೊಂಡ ಹೋಗಿದ್ದನ್ನೇ ಗಮನಿಸದ ಆಸ್ಪತ್ರೆಯ ಸಿಬ್ಬಂದಿಗಳು ತೀವ್ರ ತೊಂದರೆಗೊಳಗಾದ ರೋಗಿಗಳ ಕಡೆ ಗಮನ ಕೊಡಲು ಹೇಗೆ ಸಾಧ್ಯ? ಆದುದರಿಂದಲೇ ಕಳೆದ ಎರಡು ತಿಂಗಳಿದ ಕರೋನಾ ಸೋಂಕಿನಿಂದ ಸಾವಿನ ಸಂಖ್ಯೆ ಇಷ್ಟೊಂದು ಹಚ್ಚಾಗಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

- Advertisement -

ಏಕೆಂದರೆ ಆಸ್ಪತ್ರೆಯ ICU ವಾರ್ಡ್ ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳನ್ನು ಬಿಟ್ಟು ಬೇರೆ ಯಾರೂ ಇರುವುದಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ಹಗಲಿರುಳು ಎಚ್ಚೆತ್ತು ರೋಗಿಗಳ ಆರೋಗ್ಯದ ಕಡೆ ಗಮನ ಹರಿಸಬೇಕು ಆದರಿಂದ ಅಲ್ಲಿ ಯಾರೂ ಬರುವ ಹಾಗಿಲ್ಲ ಆದರೂ ಆಸ್ಪತ್ರೆ ಒಳಗೆ ಕಳ್ಳರು ಬಂದು ಎರಡೆರಡು ವೆಂಟಿಲೇಟರ್ ತಗೆದು ಕೊಂಡು ಹೋಗವಷ್ಟು ಸಿಬ್ಬಂದಿ ಗಳು ನಿರ್ಲಕ್ಷ ವಹಿಸಿದ್ದಾರೆ ಎಂದರೆ ರೋಗಿಗಳ ಗತಿ ಏನಾಗಿರಬೇಡ ಎಂಬ ಭಯ ಹಾಗೂ ಅನುಮಾನ ಜನರನ್ನು ಕಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರು ಎಚ್ಚೆತ್ತು ನಿರ್ಲಕ್ಷ್ಯ ತೋರುತಿರುವ ಬ್ರಿಮ್ಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಬ್ರಿಮ್ಸ್ ಆಸ್ಪತ್ರೆ ರೋಗಿಗಳ ಸಾವಿಗೆ ಕಡಿವಾಣ ಹಾಕುವರೋ ಅಥವಾ ಅಧಿಕಾರಿಗಳ ಲಾಬಿಗೆ ಮಣಿದು ತನಿಖೆಯ ನೆಪದಲ್ಲಿ ಜನರ ಎದುರು ಮೊಸಳೆ ಕಣ್ಣಿರು ಸುರಿಸುವರೋ ಕಾದು ನೋಡಬೇಕು

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!