ಬೆಳಗಾವಿ: ನಗರದ ಹಿರಿಯ ಸಾಹಿತಿಗಳು, ಕವಿ, ಕಲಾವಿದರು, ಬಹುಮುಖ ಪ್ರತಿಭೆಯ,ಸರಕಾರಿ ಪ್ರಾಥಮಿಕ ಮಾದರಿ ಕನ್ನಡ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪುಂಡಲೀಕ ಪಾಟೀಲ (ವಯಸ್ಸು 88) ರವರು ಇಂದು ಸಂಜೆ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.
ಮೃತರು ಧರ್ಮ ಪತ್ನಿ, ಇಬ್ಬರು ಸುಪುತ್ರಿಯರು, ಓರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗ, ನಾಡಿನಾದ್ಯಂತ ಶಿಷ್ಯ ಬಳಗ ಅಗಲಿರುವರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ಹಲವು ಪ್ರಶಸ್ತಿ ಗಳಿಗೆ ಭಾಜನ ರಾಗಿದ್ದರು ಮೂವತ್ತಕ್ಕೂ ಹೆಚ್ಚು ಮಕ್ಕಳ ಸಾಹಿತ್ಯದ ಕೃತಿಗಳನ್ನು ಹೊರತಂದಿರುವರು.
ಬೀದಿ ನಾಟಕ ರಚಿಸಿ ಅದನ್ನು ಆಡಿಸಿ ಜನ ಜಾಗೃತಿ ಮೂಡಿಸಿ ಜಿಲ್ಲಾಡಳಿತ ದಿಂದ ಪ್ರಶಸ್ತಿ ಸನ್ಮಾನಕ್ಕೆ ಪಾತ್ರರಾಗಿದ್ದರು.
ರವಿವಾರ 10ಘಂಟೆಗೆ ಅವರ ದೇಹದಾನವನ್ನು ಕುಟುಂಬದವರು ಮಾಡುವರು.
ಸಂತಾಪ:
ಸಾಹಿತಿ ಪುಂಡಲೀಕ ಪಾಟೀಲರ ನಿಧನಕ್ಕೆ ಹಸಿರುಕ್ರಾಂತಿ ದಿನಪತ್ರಿಕೆಯ ಬಳಗ ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಸುಣಗಾರ ರವರು ತೀವ್ರ ಶೋಕ ವ್ಯಕ್ತ ಪಡಿಸಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದ್ದಾರೆ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.