- Advertisement -
ಗುರ್ಲಾಪೂರ – ದೇಶದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಗ್ರಾಮದ ಹನುಮಾನ ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿ ಸಿಹಿ ವಿತರಿಸಿದರು ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೋದಿಯವರ ಬಾವಚಿತ್ರಹಿಡಿದು ಜೈಕಾರ ಹಾಕುತ್ತಾ ಸಕಲ ವಾದ್ಯ ವೃಂದಗಳೊಂದೊಗೆ ಗ್ರಾಮದಲ್ಲಿರುವ ದೇವಾಲಯಗಳಿಗೆ ತೆರಳಿ ಪೂಜೆ ಮಾಡಿದರು. ಗ್ರಾಮದಲ್ಲಿ ಸಂಜೆ ಒಂದು ಹಬ್ಬದ ವಾತಾವರಣದಂತೆ ಕಾಣುತ್ತಿತು.
ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಮತ್ತು ಗ್ರಾಮದ ಯುವಕರು ಬಿಜೆಪಿ ಕಾರ್ಯಕತರು ಮಕ್ಕಳು ಆಗಮಿಸಿ ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು.