ಮಾಡಲಗೇರಿ ಕ.ಸಾ.ಪ.ಸದಸ್ಯರಿಂದ ವಿವೇಕಾನಂದಗೌಡ ಪಾಟೀಲರಿಗೆ ಸನ್ಮಾನ

Must Read

ಗದಗ: ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ವಿವೇಕಾನಂದಗೌಡ ಪಾಟೀಲ ಅವರನ್ನು ಗದಗ ಲೇಕ್ ವ್ಯೂ ಹೋಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಡಲಗೇರಿ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರುಗಳಾದ ಹಾಗೂ ಯುವ ಸಾಹಿತಿ ಡಾ.ವ್ಹಿ.ಬಿ. ಸಣ್ಣಸಕ್ಕರಗೌಡರ, ಬಸವರಾಜ ಹಡಪದ, ಬಸವರಾಜ ಪೂಜಾರ, ಯುವ ಧುರೀಣ ಸಿದ್ಧಲಿಂಗಪ್ಪ ನವಲಗುಂದ ಅವರುಗಳು ನೂತನ ಅಧ್ಯಕ್ಷರನ್ನು ಸನ್ಮಾನಿಸಿ, ಸಿಹಿಹಂಚಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಡಾ.ಅರ್ಜುನ ಗೊಳಸಂಗಿ, ಡಾ.ಶಿವಪ್ಪ ಕುರಿ, ಹಿರಿಯ ಶಿಕ್ಷಕರಾದ ಪಿ.ಎಚ್.ಕಡಿವಾಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Latest News

ತಾಲೂಕಿನ ಜನರಿಗೆ ನ್ಯಾಯ ದೊರಕಿಸಲು ಅನುಕೂಲ – ನ್ಯಾ. ಮೂ. ಮುದಗಲ್ಲ

ಮೂಡಲಗಿ: -ಪಟ್ಟಣದಲ್ಲಿ ಹೊಸದಾಗಿ ನ್ಯಾಯಾಲಯ ಪ್ರಾರಂಭ ಆಗುವುದರಿಂದ ತಾಲೂಕಿನಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯದ...

More Articles Like This

error: Content is protected !!
Join WhatsApp Group