- Advertisement -
ಮೂಡಲಗಿ: ತಾಲೂಕಿನ ಸುಣಧೋಳಿ ಪಿಯು ಕಾಲೇಜಿನಲ್ಲಿ ರವಿವಾರ ಮಕರ ಸಂಕ್ರಾಂತಿಯ ದಿನದಂದು ಹಳ್ಳಿ ಹಬ್ಬವನ್ನು ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಜೀಗಳ ಸಾನ್ನಿಧ್ಯದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಹಳೆಯ ಕಾಲದ ಉಡುಗೆ ಧರಿಸಿ ಆಚರಿಸಿದರು.
ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಮಾತನಾಡಿ, ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಭಾರತ ದೇಶವು ಮುಂಚೂಣಿಯಲ್ಲಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಳ್ಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದ ಅವರು ಹಳೆಯ ಕಾಲದ ಗೀಗಿ ಪದಗಳು, ಸೋಬಾನ ಪದಗಳು, ಜನಪದ ಗೀತೆಗಳನ್ನು ನೆನಪಿಸಿ ಅವುಗಳ ಮಹತ್ವ ತಿಳಿಸಿದರು,
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಂಜು ವಾಲಿ, ಗಿರೀಶ ನರಗುಂದ, ಎಚ್.ಎಮ್.ಹತ್ತರಕಿ, ಎ.ಕೆ.ಬಡಿಗೇರ್, ಎಸ್.ಆರ್.ತಿಗಡಿ ಉಪಸ್ಥಿತರಿದ್ದರು. ಉಪನ್ಯಾಸಕ ಉದ್ದನ್ನವರ ನಿರೂಪಿಸಿ, ವಂದಿಸಿದರು.