spot_img
spot_img

ಶುಭೋದಿ ಪ್ರೌಢಶಾಲೆಯಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮ

Must Read

spot_img

ಸಿಂದಗಿ: ಹಿಂದಿನ ಕಾಲದಲ್ಲಿ ಸಮಯಕ್ಕನುಸಾರ ಕಾಲ ಕಾಲಕ್ಕೆ ಮಳೆಗಳು ಧೋಧೋ ಸುರಿಯುತ್ತಿದ್ದರಿಂದ ಯಾವುದೇ ರಸ ಗೊಬ್ಬರವಿಲ್ಲದೇ ನೈಸರ್ಗಿಕವಾಗಿ ಬೆಳೆಗಳು ಬೆಳೆಯುತ್ತಿದ್ದರು ಆದರೆ ಇಂದು ಹವಾಮಾನ ವೈಪರಿತ್ಯದಿಂದ ಕಾಲ ಕಾಲಕ್ಕೆ ಮಳೆಗಳಾಗದೇ ನೂರೆಂಟು ರಸಗೊಬ್ಬರಗಳನ್ನು ನೀಡಿ ಬೆಳೆಗಳು ಹಾಳಾಗುತ್ತಿವೆ ರೈತರು ಭಾರತದ ಬೆನ್ನೆಲುಬು ಹಾಗೂ ಹಳ್ಳಿ ಸೊಗಡಿನ ಸಂಸ್ಕೃತಿ ಇವತ್ತು ಮನೆಯಿಂದಲೇ ಬಂದಾಗ ಮಾತ್ರ ಹಳ್ಳಿಯ ಸೊಗಡು ಉಳಿಸಲು ಸಾಧ್ಯ  ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಶುಭೋದಿ ಪ್ರೌಢಶಾಲೆಯಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಮಸಾಲಿ ಸಮಾಜದ ಎಂ.ಎಂ.ಹಂಗರಗಿ ಮಾತನಾಡಿ, ರೈತರು ದಿನವಿಡೀ ಹೊಲಗದ್ದೆಗಳಲ್ಲಿ ದುಡಿದು ಆಯಾಸ ಪಡೆಯಲು ಎಲ್ಲೆಂದರಲ್ಲಿ ಗಿಡಗಂಟಿಗಳ ಪೊದರಿನಲ್ಲಿ ವಿಶ್ರಾಂತಿ ಕಳೆಯುತ್ತಿದ್ದರು ಅವರ ಜೀವನ ಹಚ್ಚ ಹಸರಾಗಿತ್ತು ಹಬ್ಬ ಹರಿದಿನ ಮತ್ತು ನಿತ್ಯ ರಾತ್ರಿ ಗ್ರಾಮೀಣ ಬಾಗದಲ್ಲಿ ಬೇಸರ ಕಳೆಯಲು ಬಯಲು ರಂಗ ಮಂದಿರದಲ್ಲಿ ನಾಟಕ, ಭಜನೆ, ಗೀಗಿಪದ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿ ಜೀವನದ ಎಡರು ತೊಡರುಗಳನ್ನು ನೀಗಿಸಿಕೊಳ್ಳುತ್ತಿದ್ದರು ಅದರೆ ಇಂದು ಹಳ್ಳಿಯ ಸೊಗಡು ಮಾಯವಾಗಿ ದೃಶ್ಯ ಮಾಧ್ಯಮಕ್ಕೆ ಅಂಟಿಕೊಂಡು ಯುವ ಜನತೆ ಹಾಳಾಗುತ್ತಿದ್ದಾರೆ ಅಂದಿನ ಚಿತ್ರಗಳಿಂದ ಜೀವನ ಶೈಲಿಯ ಸಾಮರಸ್ಯ ಹೊರಸೂಸುತ್ತಿತ್ತು ಇಂದಿನ ಚಿತ್ರೀಕರಣದಿಂದ ಸಮಾಜ ಹಾಳಾಗುತ್ತಿದೆ ಕಾರಣ ಹಳ್ಳಿ ಸೊಗಡಿನ ಕಡೆ ವಾಲುವುದರಿಂದ ಸುಂದರ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಆಲಮೇಲ ತಾಲೂಕು ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ. ಮಾತನಾಡಿ, ಟಿವಿ ಮಾಧ್ಯಮ ಬಂದಮೇಲೆ ಧಾರಾವಾಹಿ ಇವೆಲ್ಲವೂ ಬಂದಮೇಲೆ ಹಳ್ಳಿ ಸೊಗಡಿನ ಕಾರ್ಯಕ್ರಮ ನಿಂತುಹೋಗಿವೆ ಜನರು ಎಲ್ಲವನ್ನೂ ಮರೆತು ಸಿಟಿ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಕಾರ್ಯಕ್ರಮ ನಡೆಸಿದ್ದು  ಅದ್ಭುತ ಎಂದು ಹೇಳಿದರು.

ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಮಾತನಾಡಿ ಹಿಕ್ಕನಗುತ್ತಿ ಗ್ರಾಮದ ಇತಿಹಾಸ ಹಾಗೂ ಪರಂಪರೆಯ ಕುರಿತು ವಿವರಿಸಿದರು.

ಅಧ್ಯಕ್ಷತೆಯನ್ನು ಶರಣಬಸಪ್ಪ ಚಂದ್ರಪ್ಪ ಗೋಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೆಲ್ಯೂಟ್ ತಿರಂಗಾ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ,  ಪಿ. ಹೆಚ್. ಬಿರಾದಾರ. ಎಂ.ಎ.ಗೊಟಗುಣಕಿ, ವ್ಹಿ. ವಾಯ್. ಬಿರಾದಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಮಾದರ, ಬಸವರಾಜ ಬಾಗೆವಾಡಿ ಸೆರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಹಳ್ಳಿ ಸೊಗಡಿನ ವೇಷಭೂಷಣಗಳನ್ನು ಧರಿಸಿ ಖಾರ ಕುಟ್ಟುವ ಬೀಸುಕಲ್ಲು ಎತ್ತಿನಗಾಡಿ ಹೊಡೆಯುವ ರೈತ ಹಲವಾರು ವೇಷಗಳನ್ನು ಧರಿಸಿದ್ದರು ಜೊತೆಗೆ ಹಳ್ಳಿ ಸೊಗಡಿನ ರೀತಿಯಲ್ಲಿ ಊಟದ ತಯಾರಿಸಿ ಸಹಬೋಜನ ನಡೆದಿದ್ದು ಹಳ್ಳಿಯ ಸೊಗಡನ್ನು ವಿಜೃಂಭಿಸುವಂತ್ತಿತ್ತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!