ಸಿಂದಗಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರ ನೀಡುವ ಮೂಲಕ ಶಾಂತಿಯಿಂದ ಸಹಬಾಳ್ವೆ ನಡೆಸಿ ಎಂದು ಎಡಿಜಿಪಿ ಅಲೋಕಕುಮಾರ ಕಿವಿಮಾತು ಹೇಳಿದರು.
ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮಸ್ಥರು ಗ್ರಾಮದ ವತಿಯಿಂದ ನೆರವೇರಿಸಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ ಅವರು ಶಾಲು ಹಾರ ಹಾಕಿ ಸನ್ಮಾನಿಸಿದರು.
ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ, ರಾಜಕೀಯ ಮುಖಂಡ ಶ್ರೀಮಂತಗೌಡ ನಾಗೂರ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಗ್ರಾಪಂ ಅದ್ಯಕ್ಷ ಬಸವರಾಜ ಹೀರಾಪೂರ, ಉಪಾಧ್ಯಕ್ಷೆ ರೂಪಾ ನಂದಿ, ಬಸವರಾಜ ತಾವರಖೇಡ, ಷಣ್ಮುಖಪ್ಪ ಸೋಮನಾಯ್ಕ, ಮುತ್ತುರಾಜ ಕಲಶೆಟ್ಟಿ, ನಿಂಗಪ್ಪ ಅಳ್ಳಗಿ, ಶಂಕರಲಿಂಗ ನಡುವಿನಕೇರಿ, ಗಾಲಿಬ ಸೋಮನಾಯ್ಕ, ಸಿದ್ದಾರ್ಥ ಮೇಲಿನಕೇರಿ, ಪರಶುರಾಮ ಕುರುಮಲ್, ನಾಗೇಶ ಹಿಂಚಗೇರಿ, ಅಶೋಕ ಗಂಗನಳ್ಳಿ, ಪ್ರದೀಪ ಗಾಣಿಗೇರ, ದತ್ತಾತ್ರೆಯ ಸೊನ್ನ ಇದ್ದರು.