spot_img
spot_img

ಸಂಭ್ರಮದ ಕಾರ ಹುಣ್ಣಿಮೆ; ಕರೋನ ನಿಯಮ ಉಲ್ಲಂಘನೆ ಮಾಡಿದ ಗ್ರಾಮಸ್ಥರು

Must Read

- Advertisement -

ಬೀದರ್- ಜಿಲ್ಲೆಯ ಔರಾದ ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದ ಗ್ರಾಮಸ್ಥರು ಆದರೆ ಕೋರೋನ ನಿಯಮಗಳನ್ನು ಉಲಂಘನೆ ಮಾಡಿದರು.

ರಾಜ್ಯದಲ್ಲಿ ಕೋರೋನಾ ಹತೋಟಿಗೆ ತರಲು ರಾಜ್ಯ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಆದರೆ ಹಬ್ಬದ ಸಂದರ್ಭದಲ್ಲಿ ಗ್ರಾಮಸ್ಥರು ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದರು. ರೈತರು ಕರೋನಾ ನಿಯಮ ಪಾಲನೆ ಮಾಡಿ ಕಾರಹುಣ್ಣಿಮೆ ಮಾಡಿದರೆ ಒಳ್ಳೆಯದು ಎಂದು ಸಾರ್ವಜನಿಕರ ಅಭಿಪ್ರಾಯ. ಆದರೆ ನೇಗಿಲ ಯೋಗಿಯಿಂದ ಅಲಂಕೃತ ಜೋಡೆತ್ತುಗಳ ಸಂಭ್ರಮದ ಮೆರವಣಿಗೆ, ಟ್ರಾಕ್ಟರ್ ಮೆರವಣಿಗೆ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಸನ್ನಿಧಿಯಲ್ಲಿ ವಾದ್ಯಮೇಳ ಸಮೇತ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

- Advertisement -

ಪ್ರತೀ ವರ್ಷದಂತೆ ಈ ವರ್ಷ ಕೂಡಾ ಅನೇಕ ಪ್ರಗತಿಪರ ರೈತರು ಮೆರವಣಿಗೆಗೂ ಮುನ್ನ ಎತ್ತುಗಳಿಗೆ ಸ್ನಾನ ಮಾಡಿಸಿ, ಭಾಸಿಂಗ, ಮತಾಟಿ, ಮುಗ್ರಾಣಿ, ಕೊರಳ ಗಂಟೆ ಜೊತೆಯಲ್ಲಿ ಎತ್ತಿನ ಮೈ ಹಾಗೂ ಕೊಂಬಿಗೆ ಬಗೆ ಬಗೆಯ ಬಣ್ಣ ಬಳಿದು ನಗರದ ಪ್ರಮುಖ ಮಾರ್ಗಗಳಲ್ಲಿ ಹಲಗೆ ಮತ್ತಿತರ ವಾದ್ಯಮೇಳ ಸಮೇತ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ವಾಂಜ್ರಿ ಬಡಾವಣೆಯ ಹಿರಿಯ ಬಸರೆಡ್ಡಿ ಮಾಮಾಶ್ರಿ ಅವರ ಲಾಠಿ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

- Advertisement -

ಕಾರ ಹುಣ್ಣಿಮೆ ಮಹೋತ್ಸವದಲ್ಲಿ ಗ್ರಾಮದ ಶ್ರೀಮಂತ ಪಾಟೀಲ್, ಶಿವಲಿಂಗ ಚಿಟ್ಟ, ವಿಜಯಕುಮಾರ್, ದತ್ತುವಡಿಯರ್, ಕಾಶಿನಾಥ್ ಮಚಿಂದ್ರ ನಿಟ್ಟೂರು, ಮನೋಹರ್ ಬೋಗಾರ್, ಕುಶಾಲ್ ಪಾಟೀಲ್, ಬಸವರಾಜ ರಾಮಶೆಟ್ಟಿ, ಹನುಮಂತ ಚಂಡಕಾಪುರೆ, ಸಂಗಯ್ಯ ಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಅಪ್ಪಾರಾವ್ ಪಾಟೀಲ್ ಹಾಗೂ ಗ್ರಾಮದ ಮುಖ್ಯಸ್ಥರು ಕಾರ ಹುಣ್ಣಿಮೆ ಸಂಭ್ರಮದಲ್ಲಿ ಪಾಲ್ಗೊಂಡರು


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group