spot_img
spot_img

ಜು 9-10 ರಂದು ವಿಜಯನಗರದಲ್ಲಿ ವಿಪ್ರ ಸಾಧನಾ ಸಮಾವೇಶ

Must Read

spot_img

ಬೆಂಗಳೂರು – ಬೆಂಗಳೂರಿನ ವಿಜಯನಗರ ವಿಪ್ರವೃಂದದ ವತಿಯಿಂದ ವಿಪ್ರರಲ್ಲಿ ಸಾಧನೆಯ ಅರಿವು ಮೂಡಿಸಲು ಜು. 9-10ರಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವಿಪ್ರ ಸಾಧನಾ ಸಮಾವೇಶ ಆಯೋಜಿಸಲಾಗಿದೆ.

ಜು.9 ಶನಿವಾರ ಬೆಳಿಗ್ಗೆ ಶ್ರೀ ಚಂಡಿಕಾ ಹೋಮ, ಆವನಿ ಶೃಂಗೇರಿ ಶಾರದಾ ಪೀಠದ ಶ್ರೀ ಶಾಂತಾನಂದ ಭಾರತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ಸಂಜೆ 4.30ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ರವರು ಉದ್ಘಾಟಿಸುವರು.

ವಸತಿ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಸ್.ಸುರೇಶ ಕುಮಾರ್, ಉದಯ ಗರುಡಾಚಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವಿಪ್ರ ಸಾಧಕರನ್ನು ಸನ್ಮಾನಿಸಲಾಗುವುದು.

ಮಾಜಿ ಬಿ.ಬಿ.ಎಂ.ಪಿ. ಸದಸ್ಯರಾದ ವಾಗೀಶ್ ಮತ್ತು ಮೋಹನ್ ಕುಮಾರ್ ಉಪಸ್ಥಿತರಿರುವರು.

ಜು. 10 ಭಾನುವಾರ ಬೆಳ್ಳಿಗ್ಗೆ 9.00ರಿಂದ ವಿಪ್ರ ಚಿಂತನಾ ಗೋಷ್ಠಿಯಲ್ಲಿ ಹಿರಿಯ ಚಿಂತಕರಾದ ಡಾ.ಎ.ವಿ.ಪ್ರಸನ್ನ, ಡಾ.ಕೆ.ಪಿ.ಪುತ್ತೂರಾಯ, ಡಾ.ವಿ.ಬಿ.ಆರತಿ ಪಾಲ್ಗೊಳ್ಳವರು, ನಂತರ ಧಾರ್ಮಿಕ ಗೋಷ್ಠಿಯಲ್ಲಿ ಡಾ.ಹ.ರಾ.ನಾಗರಾಜಾಚಾರ್ಯ, ಡಾ.ಸೋಮಸುಂದರ ದೀಕ್ಷಿತ್, ಅರವಿಂದ ಎಂ ಅನಂತನಾರಾಯಣ ಭಾಗವಹಿಸುವರು. ಶ್ರೀರಾಮಾನುಜ ಮಠದ ಶ್ರೀ ತ್ರಿದಂಡಿ ವೆಂಕಟರಾಮಾನುಜ ಜೀಯರ್ ಉಪಸ್ಥಿತರಿರುವರು.

ಸಂಜೆ 4.00 ಕ್ಕೆ ನಡೆಯುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನೆರವೇರಿಸುವರು.

ಗೌರವಾನ್ವಿತ ಅತಿಥಿಗಳಾಗಿ ಶಾಸಕ ಎಂ.ಕೃಷ್ಣಪ್ಪ ಆಗಮಿಸಿ ಹಿರಿಯ ಸದಸ್ಯರಿಗೆ ಅಭಿನಂದಿಸುವರು. ವಿಜಯನಗರ ವಿಪ್ರವೃಂದದ ಅಧ್ಯಕ್ಷ ಹರದನಹಳ್ಳಿ ಅಶ್ವಥನಾರಾಯಣ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ರವಿ ಸುಬಹ್ಮಣ್ಯ, ದಿನೇಶ ಗುಂಡೂರಾವ್, ಮಾಜಿ ಶಾಸಕ ಪ್ರಿಯಕೃಷ್ಣ, ವಿಶ್ರಾಂತ ಕುಲಪತಿ ಡಾ.ಎಸ್.ಸಿ ಶರ್ಮ ಉಪಸ್ಥಿತರಿರುವರು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಪ್ರೋ. ಎಸ್.ಲಕ್ಷ್ಮಿನಾರಾಯಣರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!