spot_img
spot_img

ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ಸಮಾವೇಶ

Must Read

ಸಿಂದಗಿ; ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಲಾಪುರ ಹಂಪಿ, ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತ್ರಿವಳಿ ಸಂಸ್ಥೆಯಿಂದ ತಾಲೂಕಾ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಹಮ್ಮಿಕೊಂಡಿರುವ ಅ. 08 ಮತ್ತು 09 ಎರಡು ದಿನಗಳಕಾಲ ವಿಶ್ವಕರ್ಮ ಯುವಬರಹಗಾರರ ಹಾಗೂ ಸಂಶೋಧಕರ 4ನೇ ಸಮಾವೇಶ ಸಿಂದಗಿಯ ಅನುಗ್ರಹ ಕಲ್ಯಾಣ ಮಂಟಪದಲ್ಲಿ ನೆರವೇರಲಿದೆ.

ಯುವ ಬರಹಗಾರರು, ಲೇಖಕರು ತಮ್ಮ ಲೇಖನಗಳನ್ನು ಪ್ರಕಟಿಸಲು ಅವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದಯಾನಂದ ಪತ್ತಾರ ಹೇಳಿದರು.

ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೂಜ್ಯ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಮೂರುಝಾವಾಧೀಶ್ವರ ಮಠ ಆಲಮೇಲ ಮತ್ತು ಸಿಂದಗಿ ಮಠ, ಹಾಗೂ ಪೂಜ್ಯರಾಗಿರುವ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು ಸಾರಂಗಮಠ ಪಾವನ ಸಾನ್ನಿಧ್ಯದಲ್ಲಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ತಾಲೂಕು ಸಮಿತಿ ಹೊತ್ತುಕೊಂಡಿದೆ ಈ ಕಾರ್ಯಕ್ರಮವನ್ನು ಶಾಸಕ ರಮೇಶ ಬಾ. ಭೂಸನೂರ ಉದ್ಘಾಟಿಸಲಿದ್ದಾರೆ.

ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ಕೆ. ತುಳಸಿಮಾಲಾ ಅವರು ‘ಪಂಚಾನನ ಸಂಪುಟ-2’ ಹಾಗೂ ‘ಬಸವಣ್ಣ ಹಾಗೂ ಅವನ ಪರಂಪರೆ ಪುನರಾವಲೋಕನ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ಸಂಚಾಲಕ ಬಸವರಾಜ ಬೋರಗಿ ಮಾತನಾಡಿ, ಇದೊಂದು ಐತಿಹಾಸಿಕ ಸಮಾವೇಶವಾಗಿದೆ. ಸಿಂದಗಿಯ ವಿಶ್ವಕರ್ಮ ಸಮಾಜದ ಬಂಧುಗಳು ಇದರಲ್ಲಿ ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಸಮಾವೇಶಕ್ಕಾಗಿ ಬರುವ ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಊಟ ಉಪಹಾರ, ನೆನಪಿನ ಸ್ಮರಣಿಕೆಗಳು, ಪ್ರಮಾಣ ಪತ್ರಗಳು, ಆವ್ಹಾನಪತ್ರಗಳು, ಗೌರವ ಸತ್ಕಾರಕ್ಕೆ ಬೇಕಾದ ಶಾಲು, ಹೂವಿನ ಹಾರ, ಹಣ್ಣು, ಸ್ಮರಣಿಕೆಗಳು ಹೀಗೆ ಎಲ್ಲವೂ ಸಮಾಜದ ಗಣ್ಯರು, ಸುತ್ತಮುತ್ತಲಿನ ಬಂಧುಗಳು ದಾನದ ರೂಪದಲ್ಲಿ ನೀಡಿ ಈ ಕಾರ್ಯಕ್ರಮ ಆಯೋಜಿಸಿರುತ್ತಾರೆ ಎಂದರು.

ಕಲಬುರಗಿಯ ದತ್ತಾತ್ರೇಯ ವಿಶ್ವಕರ್ಮ ಮಾತನಾಡಿ, ರೈತರ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಮುದಾಯವು ಹಲವು ತಲೆಮಾರುಗಳಲ್ಲಿ ಹಲವು ಹೋಳುಗಳಾಗಿ ಸೀಳಿಹೋಗಿದೆ “ಹೊರಗಿನ ಸಮಸ್ಯೆಗಳಲ್ಲದೇ ತನ್ನೊಳಗಿನ ಸಮಸ್ಯೆಗಳಿಂದಲೂ ಹೈರಾಣಾಗಿದೆ.” “ಸಾಂಸ್ಕøತಿಕವಾಗಿ ಬಹುದೊಡ್ಡ ಪರಂಪರೆಬೆನ್ನಿಗಿದ್ದರೂ ಪ್ರಯೋಜನವಿಲ್ಲವಾಗಿದೆ.” ಇಂದಿಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಧಾರ್ಮಿಕ ಹಾಗೂ ರಾಜಕೀಯ ದಾಳಗಳಿಗೆ ತುತ್ತಾದವರು. ಸಾಹಿತ್ತಿಕವಾಗಿಯೂ, ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಕಡೆಗಣಿಸಲ್ಪಟ್ಟವರು. “ಬದಲಾಗುತ್ತಿರುವ ಕಾಲಗತಿಗನುಗುಣವಾಗಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಮತ್ತು ಬೆಳಸಿಕೊಳ್ಳುವ ನಿಟ್ಟಿನಲ್ಲಿ ಯುವ ಜನಾಂಗ ಸಾಗಬೇಕಾಗಿದೆ ಅಲ್ಲದೆ ಬಡವ ಶ್ರೀಮಂತ ಎನ್ನುವ ಭೇದಭಾವಗಳನ್ನು ಅರಿವಿನ ವಿವೇಕದಿಂದ ತೊಡೆದು ಹಾಕುವದು. ಸಂವೇದನಾ ಶೀಲ ಯುವಮನಸ್ಸುಗಳನ್ನು ಒಂದುಗೂಡಿಸುವುದು. ಸಾಹಿತ್ಯಕ ಸಾಂಸ್ಕೃತಿ ಬಲದಿಂದ ನಮ್ಮನ್ನು ನಾವು ಗುರುತಿಸಿಕೊಳ್ಳುವುದು. ಯುವ ಸಮುದಾಯಕ್ಕೆ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸುವುದು. ವಿಶ್ವಕರ್ಮ ಮಹಿಳಾ ಯುವ ಘಟಕಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಿಂತನೆಗಳತ್ತ ಕೊಂಡೊಯ್ಯಲು ವಿಚಾರ ಸಂಕೀರ್ಣಗಳನ್ನು ಏರ್ಪಸಿ ಆ ಮೂಲಕ ಅವರನ್ನು

ಸಬಲಗೊಳಿಸುವುದು, ಶಿಲ್ಪಕಲೆ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು, ಶಿಲ್ಪಕಲಾ ಕೇಂದ್ರಗಳಿಗೆ ಪೆÇ್ರೀತ್ಸಾಹ ನೀಡುವುದು. ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಯುವಮನಸ್ಸುಗಳಿಗೆ ಪ್ರಬುದ್ಧ ಚಿಂತನೆಯಲ್ಲಿ ತೊಡಗಿಸುವುದು. ಶೈಕ್ಷಣಿಕ, ಸಾಮಾಜಿಕ, ಅಭಿವೃದ್ಧಿ ಹೊಂದಲು ಐತಿಹಾಸಿಕವಾಗಿ ಮೂಲೆಗುಂಪಾಗಿಸಿರುವ ನಮ್ಮ ಪರಂಪರೆಯನ್ನು ಮನರುತ್ಥಾನಕ್ಕೆ ಪ್ರಯತ್ನಿಸುವುದು. ವಿಶ್ವಬ್ರಾಹ್ಮಣ ಸಾಹಿತ್ಯಕ್ಕೆ ಇ-ತಂತ್ರಜ್ಞಾನದ ರೂಪದ ಮೂಲಕ ಪುನರ್ ಮುದ್ರಣಗೊಳಿಸುವುದು. ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮರು ನೀಡಿರುವ ಕೊಡುಗೆಗಳನ್ನು ಸಂವಾದ, ಸಮಾವೇಶ, ಹಾಗೂ ಸಂಘಟನೆಗಳ ಮೂಲಕ ಪ್ರಚುರಪಡಿಸುವುದು.

ಈ ಸಂದರ್ಭದಲ್ಲಿ ಸೋಮನಾಥ ಈರಣ್ಣ ಹಂಚಿನಾಳ, ಪ್ರಭಾಕರ್ ಅಶೋಕ ಹಂಚಿನಾಳ, ಗಂಗಾಧರ ದೇವಿಂದ್ರಪ್ಪ ವಿಶ್ವಕರ್ಮ ನಾಗಾವಿ, ಈರಣ್ಣ ಶಂಕ್ರಪ್ಪ ಪತ್ತಾರ ಕಡಣಿ ಆಲಮೇಲ, ದೇವೇಂದ್ರ ದೇಸಾಯಿಕಲ್ಲೂರ, ವೀರಭದ್ರಪ್ಪ ಕಾಳಪ್ಪ ಬಡಿಗೇರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!