ಸಿಂದಗಿ: ದೇಶದ ಬೆನ್ನೆಲುಬು ರೈತನಾದರೆ, ರೈತರ ಸಾಧನೆಗಳಿಗೆ ಪ್ರೇರಣೆ ವಿಶ್ವಕರ್ಮ ಸಮಾಜ ಎಂದು ಸಿಂದಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ತಾಲೂಕಿನ ದೇವಣಗಾಂವ ಗ್ರಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾಣಿಯಂತೆ ಕಾಯಕವೇ ಜೀವನ ಎಂದು ಜೀವನ ಸಾಗಿಸುವವರು ವಿಶ್ವಕರ್ಮ ಜನಾಂಗ ರೈತರ ಮೂಲಭೂತ ಸಲಕರಣೆಗಳನ್ನು ನೀಡಿ ರೈತರ ಸಾಧನೆಯಲ್ಲಿ ಕೈಗೂಡಿಸುವ ಸಮಾಜವಾಗಿದೆ ಎಂದರು.
ಯುವ ಮುಖಂಡ ಸಿದ್ದಾರ್ಥ ಮೇಲಿನಕೇರಿ ಮಾತನಾಡಿ, ವಿಶ್ವಕರ್ಮ ಸಮಾಜದ ಬಾಂಧವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು, ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪಿಡಿಓ ಶರಣಗೌಡ ಕಡ್ಲೇವಾಡ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಮಾಜಿಸದಸ್ಯ ಕಾಶಿನಾಥ ಗಂಗನಳ್ಳಿ, ಕೊಲಿ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ, ಸಿದ್ದಾರಾಮ ಹಂಗರಗಿ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ದವಲಪ್ಪ ಬಡದಾಳ, ವಿಠ್ಠಲ ಯರಗಲ್, ಶಂಕರಲಿಂಗ ನಡುವಿನಕೇರಿ, ರಮೇಶ ಸೊಡ್ಡಿ, ಸುರೇಶ ಗಂಗನಳ್ಳಿ, ಮುನೀರ ಮುಜಾವರ, ಸಿದ್ದು ಹೀರಾಪುರ, ನಿಂಗಪ್ಪ ಅಳ್ಳಗಿ, ಅಬ್ದುಲ್ಗನಿ ನಾಗಾವಿ, ಸಂಗನಬಸು ಸುತಾರ, ಅನೀಲ ಸಿಂದಗಿ, ಪುಂಡಲಿಕ ನಡುವಿನಕೇರಿ, ಮಲ್ಲಯ್ಯ ಮಠಪತಿ, ಕೃಷ್ಣಾಜಿ ಜೋಶಿ, ಶರಣಪ್ಪ ಹರಗೋಲ, ಷಣ್ಮುಖಪ್ಪ ಸೋಮನಾಯಕ, ಪ್ರಭುಗೌಡ ಕಡ್ಲೇವಾಡ, ವಿಠೋಬಾ ಕಲಬಾ, ಶಿವು ಕಾಟಕರ, ಪ್ರಕಾಶ ಸಿಂಪಿ, ಯಲ್ಲಪ್ಪ ಅಳ್ಳಗಿ, ಮನೋಹರ ಸುತಾರ, ಅಣವೀರಪ್ಪ ಸುತಾರ, ಈರಪ್ಪ ಸುತಾರ, ವಿಠೋಬಾ ಸುತಾರ, ಶರಣಪ್ಪ ಸುತಾರ, ಜಗನ್ನಾಥ ಸುತಾರ, ಕಾಶಿನಾಥ ಸುತಾರ ಇದ್ದರು.