spot_img
spot_img

ವಿಶ್ವವಂದಿತ ವಿನಾಯಕ

Must Read

spot_img
- Advertisement -

ಈಗ ಎಲ್ಲರಿಗೂ ಬದಲಾವಣೆ ಬೇಕು . ಈ ಲಿಸ್ಟ್ ನಲ್ಲಿ ಗಣೇಶ ಕೂಡ ಇದ್ದಾನೆ, ಇದ್ಯಾವ ಗಣೇಶ ಅನ್ನಬೇಡಿ , ಇದು ಗಣೇಶ ದೇವರ ವಿಚಾರ, ಹೌದೂರಿ ,ಗಣೇಶ ಕೂಡ ಫುಲ್ ಗೆಟಪ್ ಬದಲಾಯಿಸಿ ನನ್ನ ಸ್ಟೈಲು ಬೇರೇನೆ, ನನ್ನ ಸ್ಪೀಡೂ ಬೇರೇನೇ ಅಂತಾ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾನೆ.

ಗಣಪತಿ ನಮಗೆ ಬಹಳ ಹತ್ತಿರದವನು ಕಾರಣ ನಾವು ಅವನ ಒಕ್ಕಲು, ಕುಳಿತೇ ದೇಶ ಕಾಲಗಳ ಜಾಲಾಡು ಮಕ್ಕಳು. 

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಕ್ಷೆಯಲ್ಲಿ ನಮ್ಮಿರುವಿನ ಅಚ್ಚು ಮೂಡಿಸಿದ್ದೇವೆ. ಈ ಹೆಚ್ಚುಗಾರಿಕೆಯೆಲ್ಲ ಅವನಿಂದಲೇ.

- Advertisement -

ಅವನೇ ನಮಗೆ ಕಲಿಸಿದ್ದು ಮಾತೃಪ್ರೇಮದ ಪರಿಯ , ಪಿತೃಭಕ್ತಿಯ ಪರಾಕಾಷ್ಠೆಯ ; ಮಣ್ಣಿನಲ್ಲಿ ಅರಳಿ ನೀರಿನ ಮೂಲಕ ಮತ್ತೆ ಮಣ್ಣಾಗುವ ಅವನು ಬದುಕಿನ ನಶ್ವರತೆಯನ್ನು ತೋರುವವ ಭಕ್ತರ ಮೇಲಿನ ಅವನ  ಮಮತೆಗೆ ಎಣೆಯುಂಟೆ, ? ಮೂಷಿಕ ವಾಹನನು , ಗಜಮುಖನು, ಡೊಳ್ಳುಹೊಟ್ಟೆಗೆ ಹಾವಿನ ಬೆಲ್ಟು ಕಟ್ಟಿಕೊಂಡು, ಬಿಗಿದುಕೊಂಡ ಮುಖದಲ್ಲಿ ನಗುವಿನ ಗೆರೆ ಮೂಡಿಸುವವನು. ಬೇರುಗಳತ್ತ ಬೆಟ್ಟು ಮಾಡುವವನು, ಜಾತಿಗಳ ಕಟ್ಟು ಮೀರಿದವನು ಅವನು 

ಅವನು ಪುರಾಣ, ಜಾನಪದ, ವರ್ತಮಾನವೂ ಹೌದು ಬಹುರೂಪಿ, ನಮ್ಮೊಳಗನ್ನು ಹೊರಗನ್ನು ವ್ಯಾಪಿಸಿಕೊಂಡಿರುವ ಗಣಪನೇ ನಿನಗೆ ಶತಕೋಟಿ ಪ್ರಣಾಮ. 

ಮತ್ತೊಂದು ಗಣೇಶ ಚತುರ್ಥಿ ಬಂದಿದೆ ; ಇದು ಮನುಷ್ಯನ ಮೂಲವನ್ನು ನೆನಪು ಮಾಡಿಕೊಡಲು ಸಕಾಲ ಎಂಬುದು ಕೆಲವರ ಅಭಿಪ್ರಾಯ ! 

- Advertisement -

ಅಚ್ಚರಿ ಎನಿಸಬಹುದು  ಆಗಿನ್ನೂ ಭೂಮಿ ತಣ್ಣಗಿತ್ತು ಎತ್ತ ನೋಡಿದರು ಹಿಮಾವೃತ ಪ್ರದೇಶ , ನಮ್ಮ ಪೂರ್ವಜರು ಆದಿ ಮಾನವರ ಅವತಾರದಲ್ಲಿ ಓಡಾಡುತ್ತಿದ್ದ ಕಾಲವದು. ಕಾಲದ ಬೆಳವಣಿಗೆಯಲ್ಲಿ ಪೂರ್ವಜರು ಕೂಡ ಬೆಳೆದರು , ಆದಿ ಮಾನವ ಶಿಲಾಯುಗಕ್ಕೆ  ಕಾಲಿಡುವ ಸಮಯದಲ್ಲಿ ಬುಡಕಟ್ಟುಗಳ ಆಕಾರ ಜನ್ಮ ತಾಳಿತು . 

ಅಲೆಮಾರಿಗಳಾಗಿದ್ದವರು ಒಂದು ಕಡೆಯಲ್ಲಿ ನೆಲೆ ನಿಂತು ತಮ್ಮದೇ ಆದ ಸಂಸ್ಕೃತಿಯೊಂದನ್ನು ಕಟ್ಟಿಕೊಂಡಿದ್ದರು. ಅವುಗಳನ್ನು ‘ಗಣ’ಗಳು ಎಂದು ಕರೆಯುವುದಾದರೆ ಅವುಗಳ ನಾಯಕನನ್ನು ಸಹಜವಾಗಿಯೆ ಗಣಪತಿ ಯಾದ , ಆ ಸಮಯದಲ್ಲಿ  ಪ್ರತಿಯೊಂದು ಗಣವನ್ನು ಗುರುತಿಸಲು ಪ್ರತ್ಯೇಕ ಸಂಕೇತಗಳಿದ್ದವು . ಇವತ್ತು ಕಂಪನಿಗಳು ಮಾರುಕಟ್ಟೆ ಉಪಯೋಗಕ್ಕೆ ತಮ್ಮದೇ ಆದ ಬ್ರಾಂಡ್ ಸಿಂಬಲ್ ನ್ನು ಚಲಾವಣೆಗೆ ಬಿಡುತ್ತವೆ, ಅವತ್ತಿನ ಗಣಗಳ ಸಂಕೇತಗಳನ್ನು ಅದಕ್ಕೆ ಹೋಲಿಸಿಕೊಳ್ಳಬಹುದು. ಒಂದು ಗಣಕ್ಕೆ  ಹಾವು ಬ್ರಾಂಡ್ ಸಿಂಬಲ್ ಆದರೆ ಇಲಿ, ನವಿಲು, ಸೂರ್ಯ, ಚಂದ್ರ ಹೀಗೆ  ನಾನಾ ಬಗೆಯ ಸಂಕೇತಗಳು ಇದ್ದವು.

ಇಷ್ಟೆಲ್ಲಾ ನಾಗರಿಕತೆ ಬೆಳೆದ ಮೇಲೂ ಯುದ್ದಗಳು ನಿಂತಿಲ್ಲ . ಅಂದ ಮೇಲೆ ಅವತ್ತು ಗಣಗಳ ನಡುವೆ ಯುದ್ದ ನಡೆಯುತ್ತಿದ್ದರೆ ಅಚ್ಚರಿಯ ವಿಷಯವೆನ್ನಲ್ಲ ಹಾಗೆ ಯುದ್ದಗಳಾಗುತ್ತಿದ್ದಾಗ ಒಬ್ಬ ಗೆಲ್ಲುತ್ತಿದ್ದರು, ಮತ್ತೊಬ್ಬರು ಸೋತ ನಂತರ ಅವರ ಬ್ರಾಂಡ್ ಸಿಂಬಲ್ ನ್ನು ಕಿತ್ತೊಗೆಯಲಾಗುತ್ತಿತ್ತು, ಅಥವಾ ಗೆದ್ದ ಗಣದ ನಾಯಕ ಅದನ್ನು ತನ್ನ ಗರ್ವದ ಅಭರಣವನ್ನಾಗಿ ಬಳಸಿಕೊಳ್ಳುತ್ತಿದ್ದ ,ಹೀಗೆ  ಗಣಪತಿಯ ಹೊಟ್ಟೆಯಲ್ಲಿ ಹಾವು, ಕಾಲಡಿಯಲ್ಲಿ ಇಲಿ ಪ್ರತೀತಿಗೆ ಬಂದಿರ ಬಹುದು, ಪ್ರಾಚೀನ ಭಾರತದ ಇತಿಹಾಸ ಕಾರರಾದ ಡಿ.ಡಿ.ಕೊಸಂಬಿ. ರಾಹುಲ ಸಾಂಕೃತ್ಯಾಯನ , ದೇವಿ ಪ್ರಸಾದ್ ಚಟ್ಟೋಪಾಧ್ಯಾಯ  ಮತ್ತಿತರರ ಅನ್ವೇಷಣೆಗಳು ನಮ್ಮ ಆರಾಧ್ಯ ದೇವ ಗಣಪತಿಯನ್ನು ಕುರಿತು ವಾದಿಸುವುದು  ಹೀಗೆ . 

    ತಾಯಿ ಮುದ್ದಿಗೆ , ತಂದೆ ಸಿಟ್ಟಿಗೆ , ಹುಣ್ಣಿಮೆಯ ಚಂದ್ರನ ಅಪಹಾಸ್ಯಕ್ಕೆ , ಇನ್ಯಾರದ್ದೊ ನಿರ್ಲಕ್ಷ್ಯಕ್ಕೆ ಒಳಗಾದವನು ಗಣಪತಿ. ಅಮ್ಮ ಗಿರಿಜಳ ಮೈ ಕೊಳೆಯಿಂದ ಹುಟ್ಟಿದ ಅವನ ಬದುಕೇ ತುಂಟತನದಿಂದ , ಮುದ್ದಿನಿಂದ ಕೂಡಿದ್ದು  ಈ ರೀತಿಯ ಮುಗ್ದತೆಯಲ್ಲೆ ದೈವತ್ವವನ್ನು ಕಾಣುವವರು ನಾವು . ಅದಕ್ಕೆ  ಗಣಪತಿ ವರ್ಷ ವರ್ಷ ನಮ್ಮ ಕಲ್ಪನೆಗಳಲ್ಲಿ ವಿಧ ವಿಧ ಅರಳುತ್ತಾನೆ. ಚಲನ ಶೀಲ ಸಮಾಜಕ್ಕೆ ಚಲನ ಶೀಲ ಮನಸ್ಸಿಗೆ ಗಣಪತಿ ಒಗ್ಗಿಕೊಂಡಷ್ಟು ಬೇರಾವ ದೇವರೂ ಒಗ್ಗಿಕೊಳ್ಳುವುದಿಲ್ಲ. 

      ಗಣಪತಿ ಯಲ್ಲಿ ಆರಾಧನೆಗಿಂತ ಆಪ್ತತೆಯ ನಂಟು  ಜಾಸ್ತಿ, ಬೇರೆಲ್ಲ ದೇವರುಗಳಿರುವಷ್ಟು ಆಧ್ಯಾತ್ಮಿಕ ಪ್ರಭಾವಳಿ ಈತನಿಗಿಲ್ಲ , ಅವನು ಎಲ್ಲರಿಗೂ ಸುಲಭದಲ್ಲಿ ದಕ್ಕುವವನು . 

    ಹಳ್ಳಿಯಲ್ಲೆ ಹುಟ್ಟಿಬೆಳೆದು ನಿರ್ಲಕ್ಷ್ಯಕ್ಕೆ ಒಳಗಾದ ಮುದ್ದುತನದಿಂದಲೆ ಎಲ್ಲರ ಪ್ರೀತಿಗೆ ಪಾತ್ರನಾದ ತುಂಟನ ಹಾಗೆ ಗಣಪ ಕಾಣಿಸುತ್ತಾನೆ.  ಅವನ ಕೃಷಿ ಸಂಸ್ಕೃತಿಯಿಂದ ಮೇಲೆದ್ದು ಬಂದವನು , ಕಬ್ಬು ಮೆಲ್ಲುತ್ತ, ಚಂದ್ರನ ಜೊತೆ ಜಗಳವಾಡುತ್ತ, ಉಂಡೆ , ಕಡುಬು, ಮೋದಕ ಪ್ರಿಯ,ಅವನ ಕೈಯಲ್ಲಿ ಪುಸ್ತಕವೂ ಇದೆ ಹೀಗೆ ತುಂಟತನದಲ್ಲಿ ಬೆಳೆದ ಹುಡುಗ ನಿಧಾನಕ್ಕೆ ವಿದ್ಯೆ ಕಡೆ ಬಾಗಿದ ತತ್ವ ಜ್ಞಾನಿಯ ತರ ಕಾಣಿಸುತ್ತಾನೆ, ಅವನ ಬದುಕು , ಬೆಳೆದ ರೀತಿ ಭಾರತೀಯ ಸಂಸ್ಕೃತಿಯ ಏಳುಬೀಳುಗಳಿಗೆ ಸೊಗಸಾದ ನಿದರ್ಶನ , ಇಂಥ ಒಬ್ಬನ ಬದುಕನ್ನು ದೈವತ್ವಕ್ಕೆ ಏರಿಸಿದ ಭಾರತೀಯನ ಮನಸ್ಸು ಅಚ್ಚರಿ ಹುಟ್ಟಿಸುತ್ತದೆ.

ಗಣಪತಿ ಎಂಬ ಶಬ್ದ ಕರ್ಣಪಟಲವನ್ನು  ಪ್ರವೇಶಿಸಿದೊಡನೆ, ಮನಃ ಪಟಲದಲ್ಲಿ ಮೂಡುವ ಚಿತ್ರ ಗಜಮುಖ- ಗಣಪತಿಯದೇ, ಧಾರ್ಮಿಕ ಶ್ರದ್ದೆಗಳ ಜೊತೆಗೆ ಗಣಪತಿಯೂ ಕೂಡ ಉದಯವಾಗಿದ್ದಾನೆ. ಗಣಪತಿಯ ಸೃಷ್ಟಿಸ್ಥಾನ ಕಾರಣಗಳ ಬಗ್ಗೆ ರೋಚಕವಾದ ಕಥೆಗಳು ಸರ್ವತ್ರ ನೆಲೆನಿಂತಿವೆ. ,ಜನಪದ ಕಥೆಗಳ ನೆಲೆಯನ್ನು ಮೀರಿ ,ಅಮೂರ್ತವಾದ ಗುಣಗಳ ಮೂಲಕ ಗಣಪತಿ ಲೋಕಹೃದಯದಲ್ಲಿ ಸ್ಥಾಪಿತನಾಗಿದ್ದಾನೆ, ‘ಏನು ಇರಲಿಲ್ಲ ; ಎಲ್ಲವೂ ಬಂತು’ ಎಂಬ ದರ್ಶನವಾದಕ್ಕನುಗುಣವಾಗಿ ಪ್ರಣವ, ಪ್ರಥಮ ಎಂದೆಲ್ಲ ಸ್ತುತಿಸಲ್ಪಡುವ ಗಣಪತಿಯು ದೇವತೆಗಳಲ್ಲಿ ಅಗ್ರಗಣ್ಯ. ವಿಷ್ಣುವಿಗೆ ಸಮನಾಗಿ’ಸುಮುಖ’ ಶಿವನಿಗೆ ಸಮನಾಗಿ  ಇವನು ‘ತ್ರಿಲೋಚನ’ ; ಬ್ರಹ್ಮನಿಗೆ ಸಮನಾಗಿ ಜನ್ಮದಿಂದಲೇ ‘ಪಂಚಮುಖ’ ಹೀಗಾಗಿ ತ್ರಿಮೂರ್ತಿಗಳ ಏಕರೂಪ. 

ಮೂಲಾಧಾರ ಚಕ್ರವು ಪೃಥ್ವಿತತ್ವ ಮೂಲದ್ದು , ಅದು ವಾಸನಾ (ಪರಿಮಳ) ಗ್ರಾಹಕ, ಜೀರ್ಣಾಂಗ ಮತ್ತು ಶುದ್ದೀಕರಣಾಂಗಗಳ ಮತ್ತು ಅನ್ನ ಮಯಕೋಶದ ಮೂಲ. ಇದು ಎಚ್ಚರ ಗೊಂಡಾಗ ಸಾಧಕನು ವೀರ್ಯವಂತನಾಗುತ್ತಾನೆ. ಅರ್ಥಾತ್ ಊಧ್ರ್ವರೇತಸಿಯಾಗುತ್ತಾನೆ. ಮೂಲಾಧಾರವು ಗುದಮೂಲದಿಂದ ಎರಡು ಬೆರಳು ಮೇಲೆ ಮತ್ತು ಉಪಸ್ಥಮೂಲದಿಂದ ಎರಡು ಬೆರಳು ಕೆಳಗೆ ಆಯಾಯ ವ್ಯಕ್ತಿಯ ಬೆರಳುಗಳ ಅಳತೆಯ ಭಾಗದಲ್ಲಿ ಇರುತ್ತದೆ.

ಇದರ ಮಧ್ಯದಿಂದ ಸುಷುಮ್ನಾ ನಾಡಿಯೂ (ಸರಸ್ವತಿ) , ಬಲದಿಂದ ಪಿಂಗಲಾ ನಾಡಿಯೂ(ಗಂಗಾ) ಹೊರಡುತ್ತದೆ. ಇದಕ್ಕಾಗಿಯೆ ಇದನ್ನು ಮುಕ್ತತ್ರಿವೇಣಿ ಎಂದು ಕರೆಯಲಾಗಿದೆ. 

ಗುದಸ್ಥಾನದಲ್ಲಿರುವ ಈ ಮೂಲಾಧಾರ ಚಕ್ರದ ಧ್ಯಾನದಿಂದ ,ವೀರಾನಂದ ಮತ್ತು ಯೋಗಾನಂದ ಗಳೆಂಬ ಎರಡು ವಿಧ ನೆಮ್ಮದಿಗಳು ದೊರೆಯುತ್ತವೆ. ಈ ಚಕ್ರದ ನಾಲ್ಕು ದಳಗಳು  ಲಲಿತಾ ಸಹಸ್ರ ನಾಮದಲ್ಲಿ ಬರುವ ಪರಾ, ಪಶ್ಯಂತಿ , ಮಧ್ಯಮಾ , ವೈಖರಿ ಎಂಬ ನಾಲ್ಕು ವಾಕ್ಯಗಳ ಪ್ರತೀಕವಾಗಿದೆ. ಮೂಲಾಧಾರ ಚಕ್ರದ ತತ್ವ – ಪೃಥ್ವೀ, ಬೀಜ – ಲಂ, ಮುಖ್ಯವಾಯು- ಅಪಾನ, ಗೌಣ ವಾಯು – ಕೂರ್ಮ, ಕೋಶ- ಅನ್ನಮಯ, ಲೋಕ – ಭೂಃ . ಈ ಮೂಲಾಧಾರ ಚಕ್ರದ ಶಿಥಿಲತೆಯಿಂದ  ಅಥವಾ ಜಾಗ್ರತೆ ಇಲ್ಲದಿರುವುದರಿಂದ ಸಂತಾನ ಹೀನತೆ , ಧಾತುರೋಗಗಳು ಉಂಟಾಗುತ್ತದೆ. ಇದನ್ನು ಜಾಗೃತ ಮಾಡಲು ಈ ತೊಂದರೆ ದೂರವಾಗುತ್ತದೆ,ಯೋಗಿಗಳು ಈ ಚಕ್ರವನ್ನು ತ್ರಿಕೋಣದ ಹೊರಗೆ ಆಯತಾಕಾರವು ವೃತ್ತದೊಳಗೆ ಸಂಲಗ್ನವಾಗಿದ್ದು ನಾಲ್ಕು ದಳಗಳ ಕಮಲದ ರೂಪದಲ್ಲಿ ದರ್ಶಿಸಿದ್ದಾರೆ.      

ಈ ಮೂಲಾಧಾರ ಚಕ್ರವು ನಮ್ಮ ಪೂರ್ವಜನ್ಮದ ಸಂಸ್ಕಾರದ ಕೇಂದ್ರವಾಗಿದೆ. ಪೃಥ್ವೀ ಮುದ್ರೆಯಲ್ಲಿ ಈ ಚಕ್ರದ ಸತತ ಧ್ಯಾನ ಮಾಡುವುದರಿಂದ ವ್ಯಕ್ತಿಗೆ ಪೂರ್ವಜನ್ಮ ಸ್ಮರಣೆ ಯಾಗುವುದೆಂದು ಮಹರ್ಷಿಗಳು ಉಲ್ಲೇಖಿಸಿದ್ಧಾರೆ. 

ಗಣಪನಿಗರಿಕೆ:

ಗಣಪತಿ ಕ್ಷಿಪ್ರವಾಗಿ ಒಲಿಯುವುದು ಅವನಿಗೆ ಅರ್ಪಿಸುವ ಗರಿಕೆ ಮತ್ತು ತೆಂಗಿನ ಕಾಯಿಂದ , ಇಂದಿನ ಕಾಲದಲ್ಲಿ ಸೋಮಾರಿಯಾಗಿರೋ ಈ ಪ್ಯಾಟೆ ಮಂದಿ ಗರಿಕೆ ತರಲು  ಕಷ್ಟವೆಂದು ಹೇಳಿ ಹೂ ಮಾರುವವನಿಗೆ ಗರಿಕೆ ತರಲು ಹೇಳುತ್ತಾರೆ. 

ಹಸಿರ ಪರಿಸರದಲ್ಲಿ ಯಾವುದೂ ಗೌಣವೂ ಅಲ್ಲ, ಯಾವುದೂ ಶ್ರೇಷ್ಠ ಎನ್ನುವಂತಿಲ್ಲ , ಮೇಲು ಕೀಳೆಂಬ ತರತಮ ಭೇದವಂತೂ ಮೊದಲೆ ಇಲ್ಲ. ಪ್ರಕೃತಿಯ ಆಯಾ ಘಟಕಗಳಿಗೆ ಅವುಗಳದೇ ಆದ ಪಾತ್ರವಿದೆ.

ಅಂತಹ ಅತ್ಯುಚ್ಛ ಭಾವನೆಯ ಗೌರವ ವೇದ ಕಾಲದಿಂದ ಯಕಶ್ಚಿತ್ ಹುಲ್ಲೊಂದಕ್ಕೆ ಸಂದಿದೆ. ದರ್ಭೆ, ಮುಂಜ ಮತ್ತು ಗರಿಕೆಗೆ ಅದರದ್ದೇ ಆದ ಮಹತ್ವವು ವೈದಿಕ ಮತ್ತು ವೇದೋತ್ತರ ಪುರಾಣಗಳಲ್ಲಿ ಸುಸ್ಪಷ್ಟ. ಗಣೇಶನನ್ನು ಆತನ ಪೂಜೆಯನ್ನು ಅರಿತ ನೀವು ಗರಿಕೆಯ ಮಹತ್ವವನ್ನು ಅರಿತಿರಾ? 

ಗರಿಕೆಯ ಬೇರು ಅಗೆಯುವ ಕೆಲಸ ಅಷ್ಟು ಸರಳ ಅಲ್ಲ . ಇದರ ಹಿಂದೆ ನಮ್ಮ ದೇಶದ ಸಂಸ್ಕೃತಿಯ ಮೇಲೆ ಪರಿಣಾಮ ಬೀರುವ ಒಂದು ದೊಡ್ಡ ಕತೆಯಿದೆ. ಇದು ನಡೆದು ಸಹಸ್ರ ವರ್ಷಗಳೇ ಕಳೆದಿರಬಹುದು , ಗರಿಕೆ ಹುಲ್ಲಿನಿಂದ ಆದ ಕ್ರಾಂತಿ ಅದು. 

ಪಾಟಲಿಪುತ್ರದ ಹೊರವಲಯ, ಅಲ್ಲಿ ಒಬ್ಬ ದಾರಿಹೋಕ ನಡೆದು ಹೋಗುತ್ತಿದ್ದ , ನಡು ಹರೆಯದ ವರ್ಚಸ್ವಿ ಆಳು. ದಾರಿಗುಂಟ ಬೆಳೆದಿದ್ದ ಒಂದು ಗರಿಕೆ ಬಳ್ಳಿ ಆತನ ಕಾಲಿಗೆ ತೊಡರಿಕೊಂಡಿತು. ಆತನ ಶಿಖೆಬಿಚ್ಚಿ ಹೋಯಿತು. ಆತ ಸಾವರಿಸಿಕೊಂಡ, ಎದ್ದು ನಿಂತ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಗಹಗಹಿಸಿ ನಕ್ಕರು . ದಾರಿ ಹೋಕನಿಗೆ  ಸಿಟ್ಟು ಬಂತು ಬಿಚ್ಚಿದ್ದ ಜುಟ್ಟು ನೇವರಿಸಿ ಒಂದು ಘೋರ ಪ್ರತಿಜ್ಞೆ ಕೈಗೊಂಡನು ‘ಎಲವೋ ಮಕ್ಕಳೆ , ನಿಮ್ಮ ಧಾಷ್ಟ್ರ್ಯಕ್ಕೆ ಧಿಕ್ಕಾರ. ಗರಿಕೆಗೆ ತೊಡರಿ ಬಿದ್ದ ನನ್ನನ್ನು  ಕಂಡು ನೀವು ಕೇಕೆ ಹಾಕಿ ನಕ್ಕಿರಿ ಈ ಗರಿಕೆಯ ಹುಲ್ಲು ಸಮೂಲವಾಗಿ ಕಿತ್ತೆಸೆಯುವನು. ಅಂತೆಯೇ ನಿಮ್ಮ ವಂಶ ನಿರ್ವಂಶಗೊಳಿಸುವೆನು, ಇದು ಚಾಣಕ್ಯ ಪ್ರತಿಜ್ಞೆ.”

ಮರು ದಿನ ಸೂರ್ಯೋದಯದ ಮೊದಲು ಕಾಲಿಗೆ ತೊಡರಿದ ಗರಿಕೆ ನಿರ್ಮೂಲನ ಮಾಡಿದನಾತ. ಅಷ್ಟೇ ಅಲ್ಲ ಪ್ರತಿಜ್ಞೆಯಂತೆ ಆ ಒಂಬತ್ತು ಮಕ್ಕಳನ್ನು  ಅವರ ಅಪ್ಪನ ಸಮೇತ ನಾಶ ಮಾಡಿದನು. ಅದು ನಂದರ ಸ್ವೇಚ್ಛಾಚಾರದ ರಾಜ್ಯ ವಂಶವಾಗಿತ್ತು. ಮಕ್ಕಳು ನವ ನಂದರು, ಅವರನ್ನು ಅವರ ದರ್ಪದ, ದಬ್ಬಾಳಿಕೆಯ ಆಳ್ವಿಕೆ ಕೊನೆಗಾಣಿಸಿದ ಚಾಣಕ್ಯನು ಮುಂದೆ ಪಾಟಲಿಪುತ್ರದಲ್ಲಿ ಚಂದ್ರಗುಪ್ತ ಮೌರ್ಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದನು, ಹಾದಿ ಬದಿಯ ಗರಿಕೆ ಹುಲ್ಲು ನಮ್ಮ ದೇಶದ ಹೊಸ ಸಾಮ್ರಾಜ್ಯ ಸ್ಥಾಪನೆಗೆ , ಹೊಸ ಶಕೆಗೆ ನಾಂದಿಯಾದದು ಹೇಗೆ. 

ಗಣೇಶನ ಕುರಿತಾದ ಪೌರಾಣಿಕ ಲೋಕ ಕತೆಗಳು ಭಾರತೀಯ ಸಂಸ್ಕೃತಿಯನ್ನಷ್ಟೇ ಅಲ್ಲ ದೇಶ ಭಕ್ತಿ ಅರಳಿಸುವಲ್ಲಿ ಧರ್ಮದ ಆಸರೆ ಪಡೆದ ನಮ್ಮವರ ಜಾಣ್ಮೆಗೆ ಇಂದಿಗೂ ಮಾದರಿ. ದೇಶಭಕ್ತಿ ಕೇವಲ ನಂಬಿಕೆ ಆಗಬಾರದು ಅದು ನಿತ್ಯ ಜೀವನದಲ್ಲಿ ಆಚರಣೆಗೆ ಬರಬೇಕು ಎಂಬುದೇ ಅವರ ಮನದಾಳದ ಮಾತಾಗಿತ್ತು ಎಂದು ನೆನಪಿಟ್ಟುಕೊಂಡು ಭಾರತೀಯ ಜೀವನದಲ್ಲಿ ಗಣೇಶನ ಪ್ರಸ್ತುತತೆ ಅರಿತು ಗಣೇಶ ಹಬ್ಬ ಆಚರಿಸಿದಾಗ ಅದು ಅರ್ಥಪೂರ್ಣವಾಗುತ್ತದೆ. ಭೂತಕಾಲಕ್ಕೂ ವರ್ತಮಾನಕಾಲಕ್ಕೂ ಸಂಬಂಧ ಸನಾತನ ನಿತ್ಯ ನೂತನವಾದದ್ದು ಎಂಬುದು ಸ್ಪಷ್ಟವಾಗುತ್ತದೆ. 

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು 9739369621 ಇ-ಮೇಲ್ : [email protected]

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group