ಹಳ್ಳೂರ- ಗುರ್ಲಾಪುರ ಗ್ರಾಮದ ಶಿಕ್ಷಕ ವಿಠ್ಠಲ ನಿಂಗಪ್ಪ ಸುಳ್ಳನವರ ಇವರಿಗೆ ಸನ್ 2025 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಚಿಕ್ಕೋಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡಿ ಗೌರವಿಸಿದ್ದಾರೆ.
ಇವರು ಹಳ್ಳೂರ ಬಸವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ವಿಠ್ಠಲ ಇವರು ಚಿಕ್ಕೋಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರು ಕೊಡ ಮಾಡುವ ಜಿಲ್ಲಾ ಅತ್ತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿರುತ್ತಾರೆ . ಈ ಸಮಯಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಉಪ ನಿರ್ದೇಶಕರಾದ ಆರ್ ಎಸ್ ಸೀತಾರಾಮ, ಜಿಲ್ಲಾಧ್ಯಕ್ಷರು ಎಸ್ ಎಂ ಲೋಕಣ್ಣವರ, ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕ ವೃಂದವರು,ಹಳ್ಳೂರ, ಹಾಗೂ ಗುರ್ಲಾಪೂರ ಗ್ರಾಮದ ಗುರು ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದರು.

