ಸಿಂದಗಿ: ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಭವ್ಯ ಭಾರತದ ಹೆಮ್ಮೆಯ ಪುತ್ರ ಭಾರತದ ಸನಾತನ ಸಂಸ್ಕೃತಿ, ಅಖಂಡ ಹಿಂದೂ ಧರ್ಮವನ್ನು ವಿಶ್ವದ ತುಂಬಾ ಮೊಳಕೆ ಒಡೆಯುವಂತೆ ಮಾಡಿದ ಸಿಡಿಲ ಸನ್ಯಾಸಿ, ಸ್ವಾಮಿವಿವೇಕಾನಂದರು ಎಂದು ಉಪನ್ಯಾಸಕ ಮಹಾಂತೇಶ ನೂಲಾನವರ ಹೇಳಿದರು.
ತಾಲೂಕಿನ ಲಕ್ಷ್ಮಿ ವಿದ್ಯಾ ವರ್ಧಕ ಸಂಘದ ಶ್ರೀ ಡಿ.ಎಸ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ, ಈ ಹೆಸರು ಕೇಳಿದಾಕ್ಷಣ ಮೈಯೆಲ್ಲಾ ಪುಳಕಗೊಳ್ಳುತ್ತದೆ. ವಿಶ್ವಸಂತ, ಯುವಕರ ಹೃದಯ ಮಹಾತ್ಮ, ದೇಶಭಕ್ತ, ಭಾರತದ ಕೀರ್ತಿ ಚಕ್ರ ಎತ್ತಿಹಿಡಿದ ವಿಶ್ವ ಜ್ಞಾನ ಸೂರ್ಯನೇ ಸ್ವಾಮಿ ವಿವೇಕಾನಂದ. ಪಾಶ್ಚಾತ್ಯ ದೇಶಗಳಲ್ಲಿ, ಅತ್ಯುನ್ನತ ಸ್ಥಾನದಲ್ಲಿದ್ದ ಕ್ರಿಶ್ಚಿಯನ್ ಧರ್ಮ ವಿಶ್ವದಲ್ಲಿ ಶ್ರೇಷ್ಠ ಧರ್ಮವಾದ ಕಾಲದಲ್ಲಿ ಭಾರತ ಅನಕ್ಷರಸ್ಥ ಹಾಗೂ ಹಾವಾಡಿಗರ ದೇಶ ಎಂದೆಲ್ಲ ಕೀಳಾಗಿ ಕಾಣುವ ಸಮಯದಲ್ಲಿ ಭಾರತವು ವಿಶ್ವದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ದೇಶ ಅಂತ ವಿಶ್ವ ಧರ್ಮ ಸಂಸತ್ತಿನಲ್ಲಿ ಜಗಕ್ಕೆ ಸಾರಿದ ಮಹಾನ್ ಚೇತನ ಎಂದರು.
ಅಧ್ಯಕ್ಷತೆ ವಹಿಸಿದ ಮಹಾ ವಿದ್ಯಾಲಯದ ಪ್ರಾಚಾರ್ಯ ಐ.ಡಿ ಪಡಶೆಟ್ಟಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆ ಸಂದೇಶಗಳು ಎಂದೆಂದಿಗೂ ಪ್ರಸ್ತುತ, ರಾಷ್ಟ್ರಪ್ರೇಮ ಭಾರತೀಯ ಸಂಸ್ಕೃತಿಯ ಆಳವಾದ ಜ್ಞಾನ ಹೊಂದಿದ್ದ ವಿವೇಕಾನಂದರು ಕಾಲ್ನಡಿಗೆಯಲ್ಲಿಯೇ ದೇಶದ ಮೂಲೆ ಮೂಲೆ ಸಂಚರಿಸಿ ಎಲ್ಲರಿರೂ ಸ್ಪೂರ್ತಿ ತುಂಬುತ್ತಿದ್ದರು. ಆಧ್ಯಾತ್ಮಿಕ ಲೋಕದಮಹಾನ್ ಚೇತನ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಎಂದೆಂದಿಗೂ ಜೀವಂತ ಇದೇ ಕಾರಣಕ್ಕಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾ ವಿದ್ಯಾಲಯದ ಉಪನ್ಯಾಸಕರಾದ ಎಂ.ಎನ್ ಬಡಿಗೇರ, ಆರ್.ಎಸ್ ಬಿರಾದಾರ, ಬಿ.ಟಿ ಚೌಧರಿ, ಡಿ.ಸಿ ನಾಗಠಾಣ, ಎನ್.ಜಿ ಕೂಡಲಗಿ, ಎಸ್.ಜಿ ಬರಗಿ, ಆರ್.ಆರ್ ಕನ್ನೂರ, ಎಸ್.ಬಿ ಬಿರಾದಾರ, ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾವಿತ್ರಿ ಪೂಜಾರಿ ಸ್ವಾಗತಿಸಿದರು, ಪೂಜಾ ಸಾರಂಗಮಠ ನಿರೂಪಿಸಿದರು, ಸಾವಿತ್ರಿ ಪಡಶೆಟ್ಟಿ ವಂದಿಸಿದರು.