- Advertisement -
ಸ್ವರ ಗೀತೆ ಅನ್ನದಾತ
ಅ ನ್ನದಾತ ಜಗಕೆ ನೀನು ಭಾಗ್ಯದಾತ
ಆ ಳಾಗಿ ದುಡಿದು ಅನ್ನ ನಮಗೆ ನೀಡುವಾತ/
ಇ ಲ್ಲ ನಿನಗೆ ದುಡಿಮೆಯಿಂದ ವಿಶ್ರಾಂತಿ
ಈ ಗಲೂ ಜಗ ನಂಬಿದೆ ನಿನ್ನ ಹಸಿರು ಕ್ರಾಂತಿ/
ಉ ತ್ತಿ ಬಿತ್ತಿ ಬೆಳೆಯ ಕೊಡುವೆ ನೀ ನಮ್ಮಪ್ಪ
ಊ ಟ ಮಾಡುವಾಗ ನಾ ನಿನ್ನ ನೆನೆವೆನಪ್ಪ/
- Advertisement -
ಋ ಷಿಗಳಂತೆ ಸ್ವಾರ್ಥವಿರದ ಬದುಕು ನಿನ್ನದು
ಎ ಷ್ಟು ಕಷ್ಟ ಬಂದರೂ ಬಿತ್ತುದ ಬಿಡದು/
ಏ ನೇ ಕೊಟ್ಟರೂನು ನಿನ್ನ ಋಣವು ತೀರದಯ್ಯ
ಐಕ್ಯತೆಯ ನಿನ್ನ ನೋಡಿ ಕಲಿಯಬೇಕಯ್ಯ/
ಒಂದಾಗಿ ಮುಂದಾಗಿ ಸಾಗುತಿಹೆ ಜಗದಲಿ
ಓ ನೇಗಿಲಯೋಗಿ ನಮಿಪೆ ನಿನ್ನ ಮನದಲಿ/
- Advertisement -
ಔ ತಣದಾ ಕೂಟಗಳಲಿ ವ್ಯರ್ಥವಾಗೆ ಕೂಳು
ಅಂ ಧ ಪ್ರತಿಷ್ಠೆ ಕೂಪದಲ್ಲಿ ಮುಳುಗಿರೆ ಗೋಳು/
ಅಃ ಮಿಕೆಯಲಿ ಅಂತಃಕರಣ ಮಾಯವಾಯಿತೇ
ನನಗೆ ನೀನು ನಿನಗೆ ನಾನು ಎಂಬ ಭಾವ ಇಲ್ಲವಾಯಿತೇ/
ಶ್ರೀಮತಿ ಜ್ಯೋತಿ ಸಿ ಕೋಟಗಿ
ಶಿಕ್ಷಕಿ ಸ.ಮಾ.ಪ್ರಾ.ಶಾಲೆ ತಲ್ಲೂರ
ತಾ/ಸವದತ್ತಿ ಜಿ/ಬೆಳಗಾವಿ
9980801993