ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ನೋಡಿ ನನಗೆ ಮತ ನೀಡಿ – ರಮೇಶ ಭೂಸನೂರ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: ಕಾಂಗ್ರೆಸ್ ಪಕ್ಷಕ್ಕೆ ಯಾವ ನಾಯಕರೇ ಇಲ್ಲ ರಾಷ್ಟ್ರೀಯ ಅಧ್ಯಕ್ಷರಂತೂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಕರ್ನಾಟಕದ ಜವಾಬ್ದಾರಿ ತೆಗೆದುಕೊಂಡ ನಂತರವಂತೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚಿದೆ. ಬಿಜೆಪಿಯಲ್ಲಿ ಒಗ್ಗಟ್ಟಿದೆ ಆರ್‍ಎಸ್‍ಎಸ್ ಸುದ್ದಿ ಹೋಗಬೇಡಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತ ಎಲ್ಲರು ಆರ್.ಎಸ್‍ಎನ್ ಮೂಲದವರೇ ರಾಜ್ಯದ ಎಲ್ಲ ಚುನಾವಣೆಯಲ್ಲಿ ಗೆದ್ದಿದ್ದೇವೆ ಇನ್ನೂ ಬೈ ಇಲೆಕ್ಷನ್ ನಲ್ಲಿ ಗೆಲ್ಲುವುದೇನು ಮಹಾ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.

ಪಟ್ಟಣದ ತಾಲೂಕಾ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಸರಕಾರಿ ಮಾಧ್ಯಮ ಶಾಲಾ ಆವರಣದಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 25 ಸ್ಥಾನಗಳಲ್ಲಿ ಗೆದ್ದಿದ್ದೇವೆ ಕಾಂಗ್ರೆಸ್ ಮಾತ್ರ ಬರೀ ಒಂದು ಸ್ಥಾನವನ್ನು ಗೆದ್ದಿದ್ದು ನಿಮ್ಮ ಬಂಡವಾಳ ರಾಜ್ಯದ ಜನತೆಗೆ ಗೊತ್ತಿದೆ ಸಮ್ಮನೆ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಬಿಡಿ. ಭಾರತವನ್ನು ವಿಶ್ವಕ್ಕೆ ಮಾದರಿಯನ್ನಾಗಿಸಿದ ಮೋದಿಜಿಯವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಮತಯಾಚಿಸಿ ಎಂದರು.

- Advertisement -

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೋಲ್ಲೆ ಮಾತನಾಡಿ, ನಿನ್ನೆ ದಸರಾ ಹಬ್ಬದ ಬತ್ತಿ ಹಚ್ಚಿ ವಿಜಯದಶಮಿ ಆಚರಿಸಿದ್ದೇವೆ ಇಂದು ಈ ಜನಸ್ತೋಮ ನೋಡಿದರೆ ಭೂಸನೂರ ಅವರ ವಿಜಯೋತ್ಸವ ಆಚರಿಸಿದಂತಾಗಿದೆ. ಈ ಕ್ಷೇತ್ರದ ತಾರಾಪೂರ ಗ್ರಾಮವು ನೆರೆ ಹಾವಳಿಯಿಂದ ಮನೆಗಳು ಮುಳುಗಿ ಸ್ಥಳಾಂತರ ಮಾಡಿದ ಮನೆಗಳ ಹಕ್ಕು ಪತ್ರ ನೀಡುವಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬಿಜೆಪಿ ಪಕ್ಷ ಜನಪರ ಯೋಜನೆಗೆ ಹೆಸರಾಗಿದೆ ಅಲ್ಲದೆ ಮಹಾಪೂರ, ಕರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸುತ್ತಾಡಿ ಸಮಸ್ಯೆಯನ್ನು ಆಲಿಸಿ ಸಹಾಯ ಹಸ್ತ ನೀಡಿದ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ಯಾವ ಆಸೆಯಿಲ್ಲ. ದೇಶವನ್ನು ಎತ್ತರಸ್ಥಾನಕ್ಕೆ ಒಯ್ಯಬೇಕೆನ್ನುವುದೊಂದೆ ಅವರ ಮಹಾದಾಸೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ನಾಯಕರಿಲ್ಲದೆ ಅವನತಿ ದಾರಿ ಹಿಡಿದಿದೆ. ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನವರು ಹಾವು ಮುಂಗುಸಿಯಾಗಿ ತಾಮುಂದೆ ನೀಮುಂದೆ ಎನ್ನುತ್ತ ಕಾಂಗ್ರೆಸ್ ಪಕ್ಷ ಮುಳುಗುವ ಹಡಗನ್ನಾಗಿ ಮಾಡಿಬಿಟ್ಟಿದ್ದಾರೆ. ಇನ್ನೂ 20 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಇಲ್ಲ. ಜೆಡಿಎಸ್ ಪಕ್ಷವಂತೂ ಅಪ್ಪ ಮಕ್ಕಳ, ಮೊಮ್ಮಕ್ಕಳ ಪಕ್ಷವಾಗಿದೆ ಯಾವ ಕಡೆ ಚಾನ್ಸ್ ಸಿಗುತ್ತೆ ಆ ಕಡೆ ಹೋಗುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ 36 ಸಾವಿರ ತಳವಾರ ಮತದಾರರಿದ್ದಾರೆ. ಬಹುದಿನಗಳಿಂದ ಎಸ್‍ಟಿ ಮಿಸಲಾತಿ ನೆನೆಗುದಿಗೆ ಬಿದ್ದಿತ್ತು ಅದನ್ನು ಈಡೇರಿಸಿದ್ದಾರೆ ಆ ಕಾರಣಕ್ಕೆ 36 ಸಾವಿರ ಓಟು ಬಿಜೆಪಿ ಪಕ್ಕಾಇವೆ ಭೂಸನೂರ ಅವರು 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಳೆದ 7 ವರ್ಷಗಳಿಂದ ಆಡಳಿತ ನಡೆಸಿದ ಕೇಂದ್ರ ಸರಕಾರ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ. ಇಡೀ ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಬೇಕೆನ್ನುವುದು ಬಿಜೆಯ ಪ್ರಣಾಳಿಕೆಯಲ್ಲಿತ್ತು ಆ ಕಾರ್ಯಕ್ಕೆ ಮುನ್ನುಡಿ ಹಾಡಿದ್ದೇವೆ. ರಾಜ್ಯದ ಅಧಿಕಾರದಲ್ಲಿ ದೀನ ದಲಿತರಿಗಾಗಿ, ಬಡವರ ಏಳಿಗೆಗಾಗಿ ಮಾಡಿದ ಯೋಜನೆಗಳನ್ನು ಮುಂದಿಟ್ಟು ಮತ ಕೇಳುವ ಹಕ್ಕ ನಮಗಿದೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾವ ಬಂಡವಾಳವು ಇಲ್ಲ ಬರೀ ಬಿಜೆಪಿ ಪಕ್ಷವನ್ನು ಟೀಕಿಸುವುದೇ ಒಂದು ದೊಡ್ಡ ಬಂಡವಾಳವಾಗಿದೆ ಎಂದು ದೂರಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಈ ಕ್ಷೇತ್ರದ ಉಪಚುನಾವಣೆ ಬರುತ್ತೆ ಎನ್ನುವ ಕಲ್ಪನೆ ಮಾಡಿರಲಿಲ್ಲ ಆದರೆ ಅನಿವಾರ್ಯವಾಗಿ ಉಪಚುನಾವಣೆ ಬಂದಿದ್ದು ಈ ಉಪ ಚುನಾವಣೆಯು ಬಿಜೆಪಿ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ ಆ ಕಾರಣಕ್ಕೆ ಸರಕಾರದ ಸಾಧನೆಗಳನ್ನು ಬಿತ್ತರಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಭಾಗದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸಿದ್ದೇವೆ. ಅದಕ್ಕೆ ಯಾರೆ ತಪ್ಪು ಮಾಡಿದರು ಕೂಡಾ ಯಾವ ಮುಲಾಜಿಲ್ಲದೆ ಬೈಯುತ್ತೇವೆ. ನನ್ನ ಗೆಲುವಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಬಂದಿವೆ. ಆ ಋಣದಿಂದ ಹಳ್ಳಿಗೊಂದು ಗುರುತು ಮಾಡಿದ್ದೇನೆ. ಜಿಲ್ಲೆಯಲ್ಲಿ ಯಾರನ್ನೆ ಸಚಿವರನ್ನಾಗಿ ಮಾಡಿ ನೀರಾವರಿಗೆ ಹಣ ಕೊಡಿ ನಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಯಾರ ಕಾಲು ಹಿಡಿಯುವುದಿಲ್ಲ. ಕುಮಾರಸ್ವಾಮಿ ಜೆಡಿಎಸ್ ಪಕ್ಷ ತಾಲಿಬಾನ ಪಕ್ಷವಾಗಿದೆ. ಆರ್‍ಎಸ್‍ಎಸ್‍ನವರಿಗೆ ಬೈದು ಮೂಲಕ ಸೂಳೆ ಪಾಪ ಸನ್ಯಾಸಿಗೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ಬಿಜೆಪಿ ನಾಯಕರಿಗೆ ಬೈಯಿರಿ ನಾವು ಅದನ್ನು ಎದುರಿಸುತ್ತೇವೆ, ಇನ್ನೂ ಕಾಂಗ್ರೆಸ್ ದಿಕ್ಕು ದಿವಾಳಿಯಾಗಿದೆ ರಾಹುಲ ಗಾಂದಿಗೆ ವಿಶ್ವದ ಜೋಕರ ಪದವಿ ನೀಡಬೇಕು ಕೊನೆಯಲ್ಲಿ ರಾಜ್ಯದ ಒಂದು ಗ್ರಾ.ಪಂ.ಯಲ್ಲೂ ಒಬ್ಬ ಅಭ್ಯರ್ಥಿಯನ್ನು ನೋಡುವುದು ಕಷ್ಟವಾಗುತ್ತದೆ ಎಂದು ಎರಡೂ ಪಕ್ಷದ ನಾಯಕರಿಗೆ ಚಾಟಿ ಬೀಸಿದರು.

ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ನನ್ನ ನಾಮಪತ್ರ ಸಲ್ಲಿಸಲು 7 ಜನ ಸಚಿವರು ಬಂದಿದ್ದು ನಾನು ಆಯ್ಕೆಯಾದಷ್ಟೆ ಸಂತೋಷವಾಗಿದೆ.. ಕಳೆದ 2018ರ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿಯ ಮೇಲೆ ನನಗೆ ಮತ ನೀಡಿ ಎಂದು ಮತಯಾಚಿಸಿದರು.

ಸಚಿವರಾದ ವಿ.ಸೋಮಣ್ಣ, ಬೈರತಿ ಬಸವರಾಜ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಶಾಸಕ ಸೋಮನಗೌಡ ಪಾಟೀಲ ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ಘನಶಾಮ ಬಾಂಡ್ಗೆ, ಬಿ.ಎಸ್.ಪೂಜಾರಿ, ಮಲ್ಲಿಕಾರ್ಜುನ ಶಿವಾನಂದ ಪಾಟೀಲ ಸೋಮಜ್ಯಾಳ, ಸಿದ್ದಣ್ಣ ಬಿರಾದಾರ ಅಡಕಿ, ಜೋಗುರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಜಿಲ್ಲಾಧ್ಯ್ಯಕ್ಷ ಆರ್.ಎಸ್.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ನಿರೂಪಿಸಿದರು, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!