ಸಿಂದಗಿ: ಕಳೆದ 12 ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ಶಿಕ್ಷಕ ಬಾಂಧವರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ವಿಧಾನ ಪರಿಷತ್ ಹೆಚ್ಚು ಮತಗಳನ್ನು ಇಚ್ಛೆ ಹೊಂದಿದ್ದು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕ ವೃಂದ ನನಗೆ ಮತ್ತು ಪದವಿಧರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮನವಿ ಮಾಡಿಕೊಂಡರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಸಚಿವನಾಗಿ,ಸಂಸದನಾಗಿ ಸಾರ್ವಜನಿಕ ಬದುಕಿನಲ್ಲಿ ಹಲವಾರು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದೇನೆ, ಅಭಿವೃದ್ಧಿ ಕಾರ್ಯಗಳೇ ನನ್ನ ಯಾವುದೇ ಕೆಲಸವನ್ನು ಜೀವನ. ಕೈಗೆತ್ತಿಕೊಂಡರೆ ಪೂರ್ಣವಾಗಿ ಮುಗಿಯವರೆಗೂ ಬಿಡುವ ಜಾಯಮಾನ ಹಿಡಿದ ಹೊಂದಿಲ್ಲಾ. ಮುಗಿಯುವರೆಗೂ ಕೆಲಸವನ್ನು ಮಿಶ್ರವಿಸುವುದಿಲ್ಲ. ಇದೇ ನಿಟ್ಟಿನಲ್ಲಿ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇನೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಅನುಭವ ಹೊಂದಿರುವ ಪ್ರಕಾಶ ಹುಕ್ಕೇರಿ ಅವರು ಅಭಿವೃದ್ಧಿ ಪರ ಚಿಂತಕರಾಗಿದ್ದಾರೆ. ಇಂದಿನ ದಿನಮಾನಗಳಲ್ಲಿ ಶೈಕ್ಷಣಿಕ ಗುಣಮಟ್ಟ ದೇಶದಲ್ಲಿ 60 ಲಕ್ಷ ಹುದ್ದೆಗಳೂ ಪದವೀಧರರು ಖಾಲಿಯಿದ್ದರೂ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳಗಾಂವ ಸೇರಿದಂತೆ 33 ಕ್ಷೇತ್ರಗಳವರಿಗೆ ಹ್ಯಾಂಗ ಇಲೇಕ್ಷನ್ ಮಾಡೊದು ಗೊತ್ತಿದೆ ಹ್ಯಾಂಗ್ ಗೆಲ್ಲೋದು ಗೊತ್ತದ ಈ ಬಾರಿ ನನ್ನ ಗೆಲವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಈ ಸಂಧರ್ಭದಲ್ಲಿ ಪದವಿದರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಮಾತನಾಡಿ, ಪಧವಿಧರ ಸಮಸ್ಯೆಗಳಿಗೆ ಧ್ವನಿಯಾಗಿ ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ನನ್ನನ್ನು ಹಾಗೂ ಹುಕ್ಕೇರಿ ಅವರನ್ನು ಬೆಂಬಲಿಸಿ ಎಂದು ಮತ ಯಾಚನೆ ಮಾಡಿದರು.
ಕಾಂಗ್ರೆಸ್ ಮುಖಂಡ ಬಿ.ಎಸ್.ಪಾಟೀಲ ಯಾಳಗಿ, ಅಶೋಕ ಮನಗೂಳಿ, ಅಶೋಕ ವಾರದ, ಎಸ್.ಎಮ್.ಪಾಟೀಲ ಗಣಿಹಾರ, ರಾಜಶೇಖರ ಕೂಚಬಾಳ, ಮಲ್ಲಣ್ಣ ಸಾಲಿ, ರಮೇಶ ಭಂಟನೂರ, ವಿಠ್ಠಲ್ ಕೋಳೂರ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಶಿಕ್ಷಣ ಕ್ಷೇತ್ರದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದಿದ್ದು ಕಾಂಗ್ರೆಸ್ ಪಕ್ಷ ಈ ಬಾರಿ ಶಿಕ್ಷಕರ ಮತ್ತು ಪದವಿದರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.
ವೇದಿಕೆ ಮೇಲೆ ಕೈ ಮುಖಂಡ ಎಮ್.ಆರ್.ತಾಂಬೋಳಿ, ಸುಭಾಷ ಚಾಯಾಗೋಳ, ಅಯುಬ ದೇವರಮನಿ, ಶರಣಪ್ಪ ವಾರದ, ಶಾರದಾ ಬೇಟಗೇರಿ, ಗುರಣ್ಣಗೌಡ ಪಾಟೀಲ ನಾಗಾವಿ, ಅಶೋಕ ಕೋಳಾರಿ, ಪರುಶುರಾಮ ಕಾಂಬಳೆ, ಸಂತೋಷ ಹರನಾಳ, ಯೋಗಪ್ಪಗೌಡ ಪಾಟೀಲ, ಶಾಂತವೀರ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.