ಮಂಗಳಾ ಸುರೇಶ ಅಂಗಡಿಯವರಿಗೆ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ. ಬಿ.ಜೆ.ಪಿ ಬೆಂಬಲಿಸಿ – ಆನಂದ ಮಾಮನಿ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸವದತ್ತಿಃ “ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ ದಿವಂಗತ ಸುರೇಶ ಅಂಗಡಿಯವರು ರೈಲ್ವೇ ಸಚಿವರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ದೇಶದ ಉದ್ದಗಲಕ್ಕೂ ವ್ಯಾಪಿಸಿದ ಮಹಾಮಾರಿ ಕೋರೋನಾ ರೋಗವು ವ್ಯಾಪಿಸಿದ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನಪರವಾದ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲಸ ಮಾಡಿ ಒಬ್ಬ ಅಪ್ರತಿಮ ಜನನಾಯಕರಾಗಿದ್ದರು. ರೈಲ್ವೇ ಖಾತೆಯಲ್ಲಿ ನೆನೆಗುದಿಗೆ ಬಿದ್ದಿರುವಂತಹ ಕೆಲಸಗಳನ್ನು ಮಾಡಿದವರು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕೊಂಡಿಯಾಗಿ ಸೇವೆ ಸಲ್ಲಿಸಿದವರು.

ಅಂತಹ ಜನನಾಯಕನ ಕನಸನ್ನು ನಾವು ನನಸಾಗಿ ಮಾಡಬೇಕಾದರೆ ನಾವು ಈಗ ನಡೆದಿರುವ ಲೋಕಸಭಾ ಚುನಾವಣೆಯ ನಮ್ಮ ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾದ ಮಂಗಳಾ ಸುರೇಶ ಅಂಗಡಿಯವನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವುದರ ಮುಖಾಂತರ ನರೇಂದ್ರ ಮೋದೀಯವರನ್ನು ಬೆಂಬಲಿಸೋಣ” ಎಂದು ವಿಧಾನ ಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು.

- Advertisement -

ಅವರು ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿಯವರ ಚುನಾವಣಾ ಪ್ರಚಾರಾರ್ಥ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಾಜಪ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ.ಮಾತನಾಡಿ, ನಮ್ಮ ಆತ್ಮೀಯರಾಗಿದ್ದ ಸುರೇಶ ಅಂಗಡಿಯವರು ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದರಿಂದ ನಾವು ಈ ಚುನಾವಣೆಯನ್ನು ಎದುರಿಸಬೇಕಾಗಿದೆ ಸವದತ್ತಿ ತಾಲೂಕಿನಲ್ಲಿ ಅಷ್ಟೇ ಅಲ್ಲ ಸುರೇಶ ಅಂಗಡಿಯವರು ಜಿಲ್ಲೆಯಾದ್ಯಂತ ಉತ್ತಮ ಕಾರ್ಯಗಳನ್ನು ಮಾಡಿದವರು. ಅವರ ಸ್ಥಾನಕ್ಕೆ ಅವರ ಧರ್ಮಪತ್ನಿ ಮಂಗಳಾ ಸುರೇಶ ಅಂಗಡಿಯವರನ್ನು ಆಯ್ಕೆ ಮಾಡಿ ಸುರೇಶ ಅಂಗಡಿಯವರ ಋಣ ತೀರಿಸುವ ಕೆಲಸ ಮಾಡೋಣ” ಎಂದರು.

ನಂತರ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಮಾತನಾಡಿ “ಈ ಚುನಾವಣೆಯಲ್ಲಿ ನಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿಯವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಕೈ ಬಲಪಡಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಎಂದರು.

ಅದೇ ರೀತಿಯಾಗಿ ಸಚಿವರಾದ ಜಗದೀಶ ಶೆಟ್ಟರ ರವರು ಮಾತನಾಡಿ “ಜಿಲ್ಲೆಯಲ್ಲಿ ಮಂಗಳಾ ಸುರೇಶ ಅಂಗಡಿಯವರನ್ನ ಆಯ್ಕೆ ಮಾಡುವದೇ ನಮ್ಮೆಲ್ಲರ ಅದ್ಯ ಕರ್ತವ್ಯವಾಗಿದೆ. ದಿವಂಗತ ಸುರೇಶ ಅಂಗಡಿಯವರು ರೈಲ್ವೇ ಸಚಿವರಾಗಿ ಯಾರೂ ಮಾಡಲಾರದಂತಹ ಕೆಲಸಗಳನ್ನು ಮಾಡಿದ್ದಾರೆ . ಇನ್ನೂ ಕಾಂಗ್ರೆಸ್ ಪಕ್ಷವು ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹೊರಟಿದೆ. ಎಂದರು.

ನಂತರ ಮಂಗಳಾ ಸುರೇಶ ಅಂಗಡಿಯವರು “ನನಗೆ ಮತ ನೀಡಿ.ತಮ್ಮ ಸೇವೆಗೆ ಅವಕಾಶ ಮಾಡಿಕೊಡಿ.ಜಿಲ್ಲೆಯ ಅಭಿವೃದ್ಧಿಗಾಗಿ ಬಿ.ಜೆ.ಪಿ ಬೆಂಬಲಿಸಿ. ಎಂದು ಮಾತನಾಡಿದರು.

ಅದೇ ರೀತಿಯಾಗಿ ಸಚಿವ ಉಮೇಶ ಕತ್ತಿ.ಮಹಾಂತೇಶ ಕವಟಗಿಮಠ. ಮಾತನಾಡಿದರು ವೇದಿಕೆ ಮೇಲೆ ಅಣ್ಣಾಸಾಹೇಬ ಜೊಲ್ಲೆ. ಡಾ. ವಿ ಆಯ್ ಪಾಟೀಲ.ಶಶಿಕಾಂತ ನಾಯಕ್ .ಈರಣ್ಣಾ ಕಡಾಡಿ.ಮಹಾಂತೇಶ ಟೆಂಗಿನಕಾಯಿ. ಪುರಸಭೆ ಅದ್ಯಕ್ಷ ರಾಜಶೇಖರ ಕಾರದಗಿ ವಿಜಯ ಅಮಠೆ. ಜಗದೀಶ ಶಿಂತ್ರಿ. ಜಗದೀಶ ಕೌಜಗೇರಿ ಈರಣ್ಣ ಚಂದರಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!