ವಾಟ್ಸಪ್ ನಲ್ಲಿ ಒಂದು ಹೃದಯಸ್ಪರ್ಶಿ ಫೋಟೋ ಒಂದು ಹರಿದಾಡುತ್ತಿದ್ದು ದಯನೀಯವಾಗಿ ಬಾಗಿಲೊಳಗೆ ನೋಡುತ್ತಿರುವ ಒಂದು ಗೋವು ಮತದಾರರಿಗೆ ‘ ನಾನೇನು ಓಟು ಕೇಳಲು ಬಂದಿಲ್ಲ, ನನ್ನನ್ನು ಉಳಿಸುವವರಿಗೆ ಓಟ್ ಹಾಕಿ’ ಎನ್ನುವಂತಿದೆ.
ಇದನ್ನು ಯಾರು ಹರಿಯಬಿಟ್ಟಿದ್ದಾರೋ ಗೊತ್ತಿಲ್ಲವಾದರೂ, ಪ್ರಸಕ್ತ ಸನ್ನಿವೇಶದಲ್ಲಿ ಗೋಮಾತೆಯ ಅಳಲನ್ನು ಸ್ಪಷ್ಟವಾಗಿ ಪ್ರದರ್ಶನ ಮಾಡುತ್ತಿದೆ.
ಅತ್ತ ಬಿಜೆಪಿಯವರು, ನಾವು ಗೋರಕ್ಷಣೆ ಮಾಡುತ್ತೇವೆ ಎಂದರೆ, ಹಟಕ್ಕೆ ಬಿದ್ದವರಂತೆ ಕಾಂಗ್ರೆಸ್ ನವರು ಗೋ ಹತ್ಯೆ ನಿಷೇಧವನ್ನು ತೆಗೆದು ಹಾಕುತ್ತೇವೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಶತಾಯಗತಾಯ ಹಿಂದೂಗಳ ಭಾವನೆಗಳನ್ನು ನೋಯಿಸಲೆಂದೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹಿಂದೂಗಳ ಮತಗಳೇ ಬೇಕು. ಆದರೆ ಹಿಂದುತ್ವ ಬೇಡ.
ಇದನ್ನೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದು, ತಾನು ಹಿಂದುತ್ವ ವಿರೋಧಿ ಎಂದಿದ್ದಾರೆ. ಕುಂಕುಮ ಕಂಡರೆ ತನಗೆ ಭಯ ಎಂದು ಹೇಳಿದ್ದಾರೆ ಆದರೆ ಕುಂಕುಮ ಹಚ್ಚಿಕೊಂಡವರು ಎಲ್ಲಿ ಬಾಂಬ್ ಹಾಕಿದ್ದಾರೆ ಎಂಬುದನ್ನು ಸಿದ್ಧರಾಮಯ್ಯ ಹೇಳಿಲ್ಲ.
ಇನ್ನೊಬ್ಬ ಕಾಂಗ್ರೆಸ್ ನಾಯಕ ಡಿಕೆಶಿ ಯವರು ಒಂದು ಬೆಟ್ಟವನ್ನೇ ಯೇಸು ಬೆಟ್ಟ ಮಾಡಲು ಹೊರಟಿದ್ದರು, ಮುಸಲ್ಮಾನರು ತನ್ನ ಬ್ರದರ್ಸ್ ಎನ್ನುವರು ಆದರೆ ಹಿಂದೂಗಳೇ ಹಾಕುವ ಮತಗಳಿಂದ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿದ್ದಾರೆ.
ಈ ಫೋಟೋದಲ್ಲಿನ ಗೋವಿನ ಅಳಲು ಎಲ್ಲ ಹಿಂದೂಗಳಿಗೂ ಅರ್ಥವಾಗಬೇಕು. ಗೋ ರಕ್ಷಕರಿಗೆ ಮಾತ್ರ ಆಡಳಿತ ದಕ್ಕಬೇಕು ಇದು ಇಂದಿನ ಅಗತ್ಯ ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಗೋವಷ್ಟೇ ಏಕೆ ಹಿಂದೂಗಳನ್ನು ಅತ್ಯಂತ ತುಚ್ಛವಾಗಿ ಕಾಣುವ ಕಾಂಗ್ರೆಸ್ ಪಕ್ಷವಾಗಿ ಅದು ಬದಲಾವಣೆ ಹೊಂದಬಹುದಾಗಿದೆ. ಹಾಗಾದರೆ ಭಾರತದಲ್ಲಿ ಹಿಂದೂಗಳಿಗೆ ಉಳಿಗಾಲವೆಲ್ಲಿ ?
ಉಮೇಶ ಬೆಳಕೂಡ, ಮೂಡಲಗಿ