ಸವದತ್ತಿ – ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಲೋಕಸಭೆಯ ಉಪಚುನಾವಣೆಯ ನಿಮಿತ್ತ ಮತದಾನಕ್ಕೆ ಬಳಸುವ ವ್ಹಿ.ವ್ಹಿ.ಪ್ಯಾಟ್ ಮತ್ತು ಇ.ವ್ಹಿ.ಎಂ.ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಮಷಿನ್‍ಗಳ ಕುರಿತು ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಲಾಯಿತು. ಮತದಾನ ಹೊಂದಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ಚಿದಾನಂದ ಬಾರ್ಕಿ ಈ ಸಂದರ್ಭದಲ್ಲಿ ಕರೆ ನೀಡಿದರು.
ಗ್ರಾಮಸ್ಥರಾದ ರಾಜು ಪಾಟೀಲ.ಲಕ್ಷ್ಮಣ ಚೋಪಡೆ.ವಿಠ್ಠಲ ಇಂಚಲ.ಕಾಶೀಂಸಾಬ ಜಕಾತಿ.ಮಾಸ್ಟರ ಟ್ರೇನರ ಸಿ.ವ್ಹಿ.ಬಾರ್ಕಿ. ಸೆಕ್ಟರ್ ಆಫೀಸರ್ ವ್ಹಿ.ಕೆ.ಮುದಿಗೌಡರ. ಪಂಚಾಯತಿ ಅಭಿವೃದ್ದಿ ಅಧಿಕಾರಿ ವಹಿದ ಮುಲ್ಲಾ. ಕಾರ್ಯದರ್ಶಿ ಪಿ.ಕೆ.ಪಾಟೀಲ.ಸಿಂಗನ್ನವರ,
ಲೋಕೇಶ ಗೋಡಿ.ಭೀಮಪ್ಪ ತಿಮ್ಮನ್ನವರ. ಮೊದಲಾದ ಗ್ರಾಮಸ್ಥರು ಹಾಜರಿದ್ದು ಮಾಹಿತಿಯನ್ನು ಪಡೆದುಕೊಂಡರು. ನಂತರ ಜಕಬಾಳ, ಕಿಟದಾಳ, ಅರಟಗಲ್, ಬಸರಗಿ ಗ್ರಾಮಗಳಿಗೆ ತೆರಳಿ ಮತದಾನ ಪ್ರಾತ್ಯಕ್ಷಿಕೆಯನ್ನು ನೆರವೇರಿಸಲಾಯಿತು.