ಬೆಳಗಾವಿ ಲೋಕಸಭೆಯ ಉಪ ಚುನಾವಣೆಯ ನಿಮಿತ್ತ ತಾಲೂಕಿನ ಮಬನೂರ ಗ್ರಾಮದಲ್ಲಿ ಮತದಾನಕ್ಕೆ ಬಳಸುವ EVM ಹಾಗೂ VVPAT ಮಶೀನ್ ಗಳ ಪ್ರಾತ್ಯಕ್ಷಿಕೆ ನೀಡಲಾಯಿತು.
ಮಶಿನ್ ಗಳ ಕುರಿತಂತೆ ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ಪ್ರೇರೇಪಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧಿಕಾರಿಗಳಾದ ಕೃಷ್ಣಕಾಂತ ನಾಯ್ಕ ಹಾಗೂ ಮಾಸ್ಟರ್ ಟ್ರೇನರ್ ಗಳಾದ ಎನ್ ಡಿ ಮೆಳವಂಕಿ, ಮಂಜುನಾಥ ಚಿಕ್ಕಾಣಿ ಹಾಗೂ ಬಿ ಎಲ್ ಓ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು