spot_img
spot_img

ವಿಪ ಚುನಾವಣೆ; ಮೂಡಲಗಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಮತಯಾಚನೆ

Must Read

ಮೂಡಲಗಿ: ವಿಧಾನ ಪರಿಷತ್ ಚುನಾವಣೆಯ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಹನಮಂತ ನಿರಾಣಿ ಮತ್ತು ಅರುಣ ಶಹಾಪೂರ ಪರ ಮೂಡಲಗಿ ಪಟ್ಟಣದ ವಿವಿಧ ಶಾಲಾ-ಕಾಲೇಜಿನಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಮತ್ತು ಬಿಜೆಪಿ ಪದಾಧಿಕಾರಿಗಳು ಮತಯಾಚನೆ ಮಾಡಿದರು.

ಮೂಡಲಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ, ಮೂಡಲಗಿ ಶಿಕ್ಷಣ ಸಂಸ್ಥೆ, ಸಿ.ಎನ್.ಮುಗಳಖೋಡ ಕಾಲೇಜು, ಎಸ್.ಎಸ್.ಎಸ್. ಸರಕಾರಿ ಪ್ರಥಮ ದರ್ಜೆ ಕಾಲೇಜು, ಉರ್ದು ಪ್ರೌಢ ಶಾಲೆ, ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆ, ಅಲ್ಪ ಸಂಖ್ಯಾತರ ವಸತಿ ಶಾಲೆ, ಸರಕಾರಿ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಉಮಾಬಾಯಿ ಶಿಕ್ಷಣ ಸಂಸ್ಥೆ ,ಸಾಯಿ ಕಾಲೇಜ, ಮೇಘಾ ಶಿಕ್ಷಣ ಸಂಸ್ಥೆ, ಚೈತನ್ಯ ವಸತಿ ಶಾಲೆ ಸೇರಿದಂತೆ ವಿವಿಧಡೆ ಬಿರುಸಿನ ಮತಯಾಚನೆ ನಡೆಸಿದರು.

ಈ ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮತ್ತು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪೂರ ಮತ್ತು ಪದವೀಧರ ಕ್ಷೇತ್ರದಿಂದ ಹನಮಂತ ನಿರಾಣಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೈ ಬಲಪಡಿಸಬೇಕೆಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ರವೀಂದ್ರ ಸೋನವಾಲಕರ, ಸಂತೋಷ ಸೋನವಾಲಕರ, ಹನಮಂತ ತೇರದಾಳ, ಮರೆಪ್ಪ ಮರೆಪ್ಪಗೋಳ, ಶಿವು ಚಂಡಕಿ, ಆನಂದ ಟಪಾಲದಾರ, ಬಸು ಝಂಡೇಕುರಬರ, ಪ್ರಕಾಶ ಮುಗಳಖೋಡ, ಸಿದ್ಲಿಂಗಪ್ಪ ಅಜ್ಜಪ್ಪಗೋಳ, ಬಸವರಾಜ ಕರಿಹೊಳಿ, ಅಜೀಜ ಡಾಂಗೆ, ಸಿದ್ದು ದುರದುಂಡಿ, ರಾಜು ಭಜಂತ್ರಿ ಮತ್ತಿತರು ಇದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!