ಬೀದರ್ ಜಿಲ್ಲೆಯ ರೈತರ ಭೂಮಿ ಮೇಲೂ ವಕ್ಪ್ ವಕ್ರದೃಷ್ಟಿ..! ಬಿದ್ದಿದ್ದು ರೈತರು ಕಂಗಾಲಾಗಿದ್ದಾರೆ.
960ಕ್ಕೂ ಅಧಿಕ ಎಕರೆ ಭೂಮಿಯ ಪಹಣಿಯಲ್ಲಿ ಕಾಲಂ ೧೧ ರಲ್ಲಿ ವಕ್ಪ್ ಬೋರ್ಡ್ ಜಮೀನು ಎಂದು ನಮೂದಾಗಿದೆ. ೨೦೧೩ ರಲ್ಲಿ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಹೆಸರು ನಮೂದಾಗಿದ್ದು ಬೀದರ್ ಜಿಲ್ಲೆಯ ಚಟ್ನಳ್ಳಿ ಗ್ರಾಮದ ಜಮೀನು ವಕ್ಪ್‌ಗೆ ಸೇರ್ಪಡೆಯಾಗಿದೆ.
ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರ ಭೂಮಿಯನ್ನು ರಾಜ್ಯದಾದ್ಯಂತ ವಕ್ಪ್ ಬೋರ್ಡ್ ಕಸಿದುಕೊಳ್ಳುತ್ತಿದೆ. ಒಂದು, ಎರಡು, ಐದು ಎಕರೆ ಕೃಷಿ ಭೂಮಿಯನ್ನು ನಂಬಿ ಬದುಕುತ್ತಿದ್ದ ರೈತರ ಬದುಕು ಈಗ ಅಂತಂತ್ರವಾದಂತಾಗಿದೆ
೨೦೧೩ ಲ್ಲಿ ಅಂದಿನ ಬೀದರ ಜಿಲ್ಲಾಧಿಕಾರಿ ಡಾ.ಪಿ.ಜಾಫರ್ ಮಾಡಿದ ಆದೇಶಕ್ಕೆ ಪಹಣಿಯಲ್ಲಿ ವಕ್ಫ ಎಂದು ನಮೂದಾಗಿದ್ದು ಈಗ ರೈತರಿಗೆ ಸಾಲವಷ್ಟೇ ಅಲ್ಲದೆ ಯುವಕರಿಗೆ ಕನ್ಯಾ ಕೂಡ ಸಿಗದಂತಾಗಿದೆ.
ಅಂದು ಸಿದ್ಧರಾಮಯ್ಯನವರ ಸರ್ಕಾರವೇ ಅಧಿಕಾರದಲ್ಲಿ ಇದ್ದು ಮುಸ್ಲಿಮರ ಓಲೈಕೆ ಮಾಡಲು ಸಿದ್ದು ಸರ್ಕಾರ ಈ ರೀತಿ ರೈತರಿಗೆ ಮೋಸ ಮಾಡಿದೆ. ಜೀವನಾದ್ರೂ ಬಿಡ್ತೇವೆ, ಭೂಮಿ ಬಿಟ್ಟು ಕೊಡಲ್ಲ. ತಕ್ಷಣವೇ ಪಹಣಿಯಲ್ಲಿರುವ ವಕ್ಪ್ ಬೋರ್ಡ್ ಆಸ್ತಿ ಎಂಬ ಹೆಸರನ್ನು ತೆಗೆದುಹಾಕುವಂತೆ ಅನ್ನದಾತರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ರೈತರು ನೀಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ