ಯರಗೋಳ: ನೀರಿನ ಅರವಟಿಗೆ ಉದ್ಘಾಟನೆ

0
143

ಯರಗೋಳ: ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಬಸ್ ನಿಲ್ದಾಣ ಎದುರಿನಲ್ಲಿರುವ ತಾಯಿ ಭುವನೇಶ್ವರಿ ಮೂರ್ತಿ ಬಳಿ ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ವ್ಯವಸ್ಥೆ ಮಾಡಲಾಗಿದೆ.

ಯುಗಾದಿ ಹಬ್ಬದಂದು ಭಾನುವಾರ ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಸಾರ್ವಜನಿಕರಿಗೆ ಬೇವು ವಿತರಿಸುವ ಮೂಲಕ ನೀರಿನ ಅರವಟಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಗ್ರಾಮದ ಯುವಕರು ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಯುಗಾದಿ ಹಬ್ಬ ಎಲ್ಲರಿಗೂ ಶುಭ ತರಲಿ’ ಎಂದು ಹಾರೈಸಿದರು.

ನಂತರ ದೊಡ್ಡದಾದ ಮಡಕೆಯಲ್ಲಿ ತಯಾರಿಸಿದ್ದ ಅಂದಾಜು 100 ಲೀಟರ್ ಬೇವು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ಗ್ರಾಮದ ಗವಿಸಿದ್ದಲಿಂಗೇಶ್ವರ ವಿರಕ್ತ ಮಠದ ಸಂಗಮೇಶ್ವರ ಮಹಾಸ್ವಾಮೀಜಿ, ನಾಗರಾಜ ಸ್ವಾಮಿ, ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವರಾಜ ಮಾನೇಗಾರ, ಲಾಲ್ ಅಹ್ಮದ್ ಪಾಟಕ್, ಸಾಬಣ್ಣ ಜಗಲಿ, ಭೀಮಾಶಂಕರ ಜಗಲಿ, ಮರಲಿಂಗ ಪೂಜಾರಿ, ಕಾಶಿನಾಥ ಟೇಲರ್, ನಿಂಗಪ್ಪ ಸಂಕ್ರಡಗಿ, ಶರಣಪ್ಪ ಬಾನರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here