spot_img
spot_img

ಆಲಮೇಲ ತಾಲೂಕಿನ ಸೊನ್ನ ಬ್ಯಾರೇಜ್‍ನಿಂದ ಭೀಮಾ ನದಿಗೆ ನೀರು

Must Read

spot_img

ಸಿಂದಗಿ: ಆಲಮೇಲ ತಾಲೂಕಿನ ದೇವಣಗಾಂವ ಮಹಾರಾಷ್ಟ್ರದ ಭೀಮಾನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಭೀಮಾನದಿಗೆ ನೀರು ಹರಿದು ಬರಲಾರಂಭಿಸಿದೆ.

ಮಹಾರಾಷ್ಟ್ರದ ವೀರ ಜಲಾಶಯದಿಂದ 25 ಸಾವಿರ ಕ್ಯೂಸೆಕ್ಸ ನೀರು ಹರಿಸಿರುವ ಪರಿಣಾಮದಿಂದ ಸದ್ಯ ನೀರು ಹರಿಯುತ್ತಿದ್ದು ಪ್ರವಾಹದ ಸಾಧ್ಯತೆ ಇರುವುದರಿಂದ ಜನರು ಎಚ್ಚರದಿಂದ ಇರಬೇಕು ಎಂದು ಆಲಮೇಲ ತಹಶೀಲ್ದಾರ ಸುರೇಶ ಚವಲಾರ ಹೇಳಿದ್ದಾರೆ.

ಉಜನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ ಎಂಬ ಮಾಹಿತಿ ಇರುವದರಿಂದ ಮುಂದಿನ ದಿನಗಳಲ್ಲಿ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಆದ್ದರಿಂದ ಜನ ಜಾನುವಾರುಗಳು, ರೈತರು ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕೆಂದರು. ರೈತರು ತಮ್ಮ ಪಂಪಸೆಟ್ ಅನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಬೇಕೆಂದರು.

ದೇವಣಗಾಂವ ಸಮೀಪದ ಸೊನ್ನ ಗ್ರಾಮದಲ್ಲಿರುವ ಸೊನ್ನ ಬ್ಯಾರೇಜ್ ಭರ್ತಿಯಾಗಿದ್ದು ಅಲ್ಲಿಂದಲೂ ಕೂಡ ನೀರು ಹೊರಕ್ಕೆ ಬಿಡಲಾಗುತ್ತಿದೆ. ಆಲಮೇಲ ತಾಲೂಕಿನ ನದಿ ಪಾತ್ರದ ಹಳ್ಳಿಗಳಾದ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಬಗಲೂರ ಗ್ರಾಮಗಳ ಜನ ಜಾನುವಾರುಗಳು ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!