spot_img
spot_img

ಈ ಊರ ದೇವತೆಗೆ ನೀರಿನ ನೈವೇದ್ಯ! ಮಳೆಯಾಗಲೆಂದು ನೀರು ನೈವೇದ್ಯ ನೀಡಿದ ಭಕ್ತರು

Must Read

ಸಿಂದಗಿ: ಹಿಂದಿನ ಹಿರಿಯರ ಸಂಪ್ರದಾಯ ಪ್ರಕಾರ ದೇವತೆಗೆ ನೀರಿನ ನೈವೇದ್ಯ ನೀಡಿದರೆ ಮಳೆ ಬರುತ್ತದೆ ಹೇಳುತ್ತಿದ್ದರು ಆ ರೂಢಿಯ ಪ್ರಕಾರ ದೇವತೆಗೆ ನೀರು ನೀಡಿ ಮಳೆಯಾಗಲಿ ಎಂದು ಬೇಡಿಕೊಂಡಿದ್ದೇವೆ ಆದಷ್ಟು ಬೇಗ ಮಳೆ ಬಂದು ರೈತರ ಮುಖದಲ್ಲಿ ಮುಗುಳುನಗೆ ಬರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಪ್ರಗತಿಪರ ರೈತ ಹಾಗೂ ಸಂಗೊಳ್ಳಿ ರಾಯಣ್ಣ ಸಂಘಟನೆಯ ಅಧ್ಯಕ್ಷ ಈರಗಂಟಿ ನಡಕೂರ ಎಂದರು.

ತಾಲೂಕಿನ ಚಿಕ್ಕ ಹಾವಳಗಿ ಗ್ರಾಮದಲ್ಲಿ ಗ್ರಾಮ ದೇವತೆ ಆದಿಶಕ್ತಿ ಲಕ್ಷ್ಮಿ ದೇವಿಗೆ ಮಳೆ ಸಲುವಾಗಿ ಊರಿನ ಎಲ್ಲಾ ರೈತರು ಹಾಗೂ ಯುವಕರು ಸೇರಿ ಡೊಳ್ಳು ವಾದ್ಯದೊಂದಿಗೆ ನೀರಿನ ಕೊಡ ಹೊತ್ತು ದೇವತೆಗೆ ನೀರು ನೈವೇದ್ಯ ನೀಡಿ, ತಾಲೂಕಿನ ಕೆಲವು ಹಳ್ಳಿಗಳಲ್ಲಿ ಮಳೆ ಆಗುತ್ತಿದೆ ಆದರೆ ಚಿಕ್ಕಹಾವಳಗಿ ಗ್ರಾಮದಲ್ಲಿ ಮಾತ್ರ ಮಳೆ ಬಂದಿಲ್ಲ ಕಾರಣ ಈಗಾಗಲೇ ಬಿತ್ತನೆ ಮಾಡಿದ ರೈತರು ಮಳೆ ಇಲ್ಲದ ಕಾರಣ ಮುಗಿಲತ್ತ ಮುಖ ಮಾಡಿದ್ದಾರೆ ವರುಣ ದೇವ ಕೃಪೆ ತೊರಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಾಹೇಬಗೌಡ ಪಾಟೀಲ್ ಶಿವಪ್ರತ್ರ ದುಂಡಪ್ಪ ವಾಲಿಕಾರ ಎಸ್ ಡಿ ಎಂ ಸಿ ಅದ್ಯಕ್ಷ ಕನ್ನಯ್ಯ ಮೋರಟಗಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಪ್ಪ ನಡಕೂರ ಸಮಾಜ ಸೇವಕರು ಮಡಿವಾಳಪ್ಪ ಗಾಣೂರ, ಟಿಪ್ಪು ಕ್ರಾಂತಿ ಸೇನೆಯ ಅದ್ಯಕ್ಷರಾದ ಮೈಬು ನದಾಫ, ಮಂಜು ವಾಲಿಕಾರ ಹಾಗೂ ಊರಿನ ಪ್ರಮುಖರು ಹಿರಿಯರು ಯುವಕರು ಇದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!