ಬೀದರ – ಸ್ಥಗಿತಗೊಂಡು ಅನುಪಯೋಗಿಯಾಗಿದ್ದ ಬೋರ್ ವೆಲ್ ನಿಂದ ಅಚಾನಕ್ಕಾಗಿ ನೀರು ಆಕಾಶದೆತ್ತರ ಚಿಮ್ಮಿದ ಪವಾಡವೊಂದು ಬಿಸಿಲ ನಾಡು ಬೀದರಿನ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಅಚಾನಕ್ಕಾಗಿ ಕೆಟ್ಟು ಹೋದ ಬೋರವೇಲ್ ನಿಂದ ನೀರು ಆಕಾಶದೆತ್ತರ ಹಾರಿ ಬರುತ್ತಲಿದೆ. ಅದನ್ನು ಕಂಡು ಮಕ್ಕಳು ಹರ್ಷದಿಂದ ಕೂಗುತ್ತಿದ್ದಾರೆ. ಬಿಸಿಲ ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಬೋರವೇಲ್ ಒಳಗೆ ಬಿಸಿ ಹೆಚ್ಚಾಗಿ ಉಂಟಾದ ಒತ್ತಡ ನೀರು ಹೊರಕ್ಕೆ ಚಿಮ್ಮುತ್ತಿದೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟರು.
ಬೋರ್ ವೆಲ್ ನಿಂದ ನೀರು ಆಕಾಶದೆತ್ತರ ಚಿಮ್ಮುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ