ಮೂಡಲಗಿ:-ಪಟ್ಟಣದ ಗಂಗಾ ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಾಯಕ ಡಾllಬಿ.ಆರ್.ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ವತಿಯಿಂದ ಮಹಿಳಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು.
ದಲಿತ ಸಮುದಾಯದ ಮಹಿಳೆಯರಿಗೆ ಆಗುವ ಕಷ್ಟಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಕಾನೂನಾತ್ಮಕ ಪರಿಹಾರ ಒದಗಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡ ಬೇಡಿಕೆಯ ಹೋರಾಟ ಇದಾಗಿದೆ. ಶೋಷಣೆಗೆ ಒಳಪಟ್ಟಿರುವ ಮಹಿಳೆಯರ ಪರವಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಜಿಲ್ಲೆಯ ಪ್ರತಿಯೊಂದು ಹಳ್ಳಗಳಲ್ಲಿ ನಮ್ಮ ಸಂಘಟನೆಯನ್ನು ಕಟ್ಟುವ ಕಾರ್ಯ ಮಾಡಲಾಗುವುದು.ಇದಕ್ಕಾಗಿ ರೂಪುರೇಷ ಸಿದ್ದಪಡಿಸಲಾಗುತ್ತಿದೆ. ಸಾಮಾಜಿಕ ಸೇವೆಯ ಮೂಲಕ ಸಂಘಟನೆಯು ದಲಿತ ಮಹಿಳೆಯರಿಗೆ ಹತ್ತಿರವಾಗಲಿದೆ ಎಂದು ಮಹಾನಾಯಕ ಡಾllಬಾಬಾಸಾಹೇಬ ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಯಮನವ್ವ ತಳವಾರ ಅವರು ಉದ್ಘಾಟನೆ ನೆರವೇರಿಸಿ ಹೋರಾಟದ ರೂಪುರೇಷೆ ತಿಳಿಸಿದರು.
ಮಹಿಳೆಯರಿಗಾಗಿ ಸಂಘಟನೆ ಹೊಸ ಜವಾಬ್ದಾರಿ ನೀಡಿದ್ದು, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮುನ್ನಡೆಸಲಾಗುವುದು.ಹೋರಾಟದ ಜೊತೆಗೆ ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಯೋಜನೆಯನ್ನು ತಲುಪಿಸುವಂತ ಕಾರ್ಯ ಮಾಡಿದರೆ ಮಾತ್ರ ಸಂಘಟನೆಯ ಉದ್ದೇಶ ಈಡೇರುತ್ತದೆ. ಸಂಘಟನೆಯು ಅದಕ್ಕೆ ತಕ್ಕಂತೆ ನಡೆಯಲಿದೆ ಎಂದು ಸಂಗೀತಾ ಪಾಟೀಲ ಹೇಳಿದರು.
ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಜ್ಯೋತಿ ದೊಡಮನಿ, ಪ್ರಧಾನ ಕಾರ್ಯದರ್ಶಿ ಡೇಜಿ ಇಟ್ನಾಳ, ಜಿಲ್ಲಾಧ್ಯಕ್ಷೆ ಕವಿತಾ ಸಣ್ಣಕ್ಕಿ, ತಾಲೂಕಾಧ್ಯಕ್ಷೆ ಸುವರ್ಣ ಕಾಶವಗೋಳ, ಉಪಾಧ್ಯಕ್ಷೆ ಆಶಾ ಸಣ್ಣಕ್ಕಿ, ಶೋಭಾ ಬಂಗೆನ್ನವರ ಈ ಎಲ್ಲ ಮಹಿಳೆಯರಿಗೆ ಆದೇಶ ಪತ್ರ ನೀಡಿ ಸನ್ಮಾನಿಸಲಾಯಿತು.
ದಲಿತ ಪ್ಯಾಂಥರ್ಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಈರಪ್ಪ ಢವಳೇಶ್ವರ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಕಂಗರಾಳ್ಕರ್,ರಾಜ್ಯ ಸಂಚಾಲಕ ಸುರೇಶ ರಿಜಕನ್ನವರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮುರಗೋಡ, ಕಾರ್ಯದರ್ಶಿ ಪ್ರವೀಣ ಕಾಂಬಳೆ,ಸದಸ್ಯರುಗಳಾದ ಎ
ವಾಯ್. ಬಮ್ನನ್ನವರ, ರಮೇಶ ರಿಜಕನ್ನವರ,ವಿಜಯಲಕ್ಷ್ಮಿ ಪಾಟೀಲ, ಮಂಜುಳಾ ತಳವಾರ ಇನ್ನೂ ಅನೇಕರು ಉಪಸ್ಥಿತರಿದ್ದರು.