ದೇಶದ ನೀತಿ ದೊಡ್ಡದು, ನಿಮ್ಮದಲ್ಲ – ಕೇಂದ್ರ ಸರ್ಕಾರ
ಹೊಸದಿಲ್ಲಿ – ಭಾರತ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣ ಟ್ವಿಟರ್ ನಡುವಿನ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಮ್ಮ ದೇಶದಲ್ಲಿ ಕಾರ್ಯ ನಡೆಸಬೇಕಾದರೆ ದೇಶದ ಕಾನೂನು ಗೌರವಿಸಲೇಬೇಕು, ಅದರಂತೆ ನಡೆಯಲೇಬೇಕು ಎಂದು ಸರ್ಕಾರ ಟ್ವಿಟರ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
ಸಂಸದೀಯ ಸಮಿತಿಯೆದುರು ಹಾಜರಾದ ಅಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ಸರ್ಕಾರ ಈ ಎಚ್ಚರಿಕೆ ನೀಡಿದೆ.
ಕೆಲವು ದೇಶವಿರೋಧಿ ಹೇಳಿಕೆಗಳನ್ನು ವಿಜೃಂಭಿಸಿದ್ದಲ್ಲದೆ ಬಿಜೆಪಿ ಪಕ್ಷದ ಸಂಬಿತ್ ಪಾತ್ರಾ ಸೇರಿದಂತೆ ಕೆಲವು ನಾಯಕರ ಟ್ವೀಟ್ ಗಳನ್ನು ರದ್ದುಮಾಡಿದ ಟ್ವಿಟರ್ ಸಂಸ್ಥೆಯ ವಿರುದ್ಧ ಕೇಂದ್ರ ಯುದ್ಧ ಸಾರಿದೆ.
ಟ್ವಿಟರ್ ದೆಸೆಯಿದಾಗಿ ಇನ್ನುಳಿದ ಸಾಮಾಜಿಕ ಜಾಲತಾಣಗಳಿಗೂ ಕೇಂದ್ರ ವಾರ್ನಿಂಗ್ ಮಾಡಿದ್ದು ದೇಶದ ಕಾನೂನು ಪಾಲಿಸಲೇಬೇಕು ಎಂಬ ಆದೇಶ ಜಾರಿಮಾಡಿದೆ ಇಲ್ಲದಿದ್ದರೆ ಜಾಲತಾಣವನ್ನು ನಿಷೇಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಈ ಬಗ್ಗೆ ಕೇಂದ್ರ ಕಾನೂನು ಮಂತ್ರಿ ರವಿಶಂಕರ್ ಪ್ರಸಾದ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಸಂಸದೀಯ ಸಮಿತಿಯೊಂದರ ಎದುರು ಟ್ವಿಟರ್ ನ ಅಧಿಕಾರಿಯೊಬ್ಬರನ್ನು ವಿಚಾರಣೆಗೆ ಕರೆಯಲಾಗಿದ್ದು ಅವರು ನಮ್ಮ ನೀತಿಯಂತೆ ನಡೆಯುವುದಾಗಿ ಹೇಳಿದ ಹಿನ್ನೆಲೆಯಲ್ಲಿ ದೇಶದ ಕಾನೂನು ಸರ್ವ ಶ್ರೇಷ್ಠವಾದದ್ದು. ಟ್ವಿಟರ್ ಮನಸಿಗೆ ಬಂದಂತೆ ಇನ್ನು ನಡೆಯುವಂತಿಲ್ಲ ಎಂದು ಕಡಕ್ ವಾರ್ನಿಂಗ್ ನೀಡಲಾಗಿದೆ