ಬೀದರ – ಸದ್ಯ ವಿವಾದಾತ್ಮಕ ಪೀರ ಪಾಶಾ ದರ್ಗಾದಲ್ಲಿ ಅನುಭವ ಮಂಟಪ ಇದ್ದ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದ್ದು ಶಾಂತಿ ಸೌಹಾರ್ದ ಕ್ಕೆ ಯಾವುದೇ ಧಕ್ಕೆ ಬಾರದಂತೆ ನಾವು ಪ್ರಯತ್ನ ಮಾಡಿ ಮೂಲ ಅನುಭವ ಮಂಟಪವನ್ನು ವಶಕ್ಕೆ ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂಬುದಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದ್ದಾರೆ.
ಪತ್ರಕರ್ತರೊಡನೆ ಮಾತನಾಡಿದ ಅವರು, ಪೀರ್ ಪಾಶಾ ದರ್ಗಾವೇ ಮೂಲ ಅನುಭವ ಮಂಟಪವಾಗಿತ್ತು ಎನ್ನುವುದು ಬಸವಕಲ್ಯಾಣ ಜನತೆಯ ನಂಬಿಕೆ ಹಾಗೂ ನನ್ನ ನಂಬಿಕೆಯು ಕೂಡಾ ಅದರ ವಾಸ್ತು ಶಿಲ್ಪ ಹಾಗು ಶೈವ ಪರಂಪರೆ ಗಮನಿಸಿದರೆ ಅದೆ ಮೂಲ ಅನುಭವ ಮಂಟಪ ಎನಿಸುತ್ತದೆ ಎಂದು ಇದೇ ಮೊದಲ ಬಾರಿಗೆ ಆ ವಿಷಯದ ಬಗ್ಗೆ ಮಾತನಾಡಿದರು.
ಈಗಾಗಲೇ ಹಲವು ಮಠದ ಸ್ವಾಮಿಗಳು ಮತ್ತು ಶರಣರು ಪಿರ್ ಪಾಶಾ ಬಂಗ್ಲಾದಲ್ಲಿ ಮೂಲ ಅನುಭವ ಮಂಟಪವಾಗಬೇಕೆಂದು ಆಶಯ ವ್ಯಕ್ತಪಡಿಸುತ್ತಿದ್ಧಾರೆ ಅದಕ್ಕೆ ನನ್ನ ಬೆಂಬಲವು ಇದೆ ಎಂದು ಹೇಳಿದರು.
ಸಮಾಜದಲ್ಲಿ ಸುವ್ಯವಸ್ಥೆ ಹಾಗು ಸಮಾಜದ ಸಾಮರಸ್ಯ ಕಾಪಾಡುವ ಮುಖಾಂತರ ಅಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಪ್ರಯತ್ನಿಸೋಣ ನಾನು ಕೆಲವೇ ದಿನಗಳಲ್ಲಿ ಪಿರ್ ಪಾಶಾ ಬಂಗ್ಲಾದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ನುಡಿದರು.
ಆದರೆ ರಾಜ್ಯ ಸರ್ಕಾರ ಇದು ವರೆಗೆ ಬಸವಣ್ಣ ನವರ ಹೊಸ ಅನುಭವ ಮಂಟಪ ಸಲುವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ತಮ್ಮ ತಮ್ಮ ಅಧಿಕಾರ ಅವಧಿಯಲ್ಲಿ ಶಂಕುಸ್ಥಾಪನೆ ಮಾಡುವ ವೇಳೆಯಲ್ಲಿ ಈ ಮೂಲ ಅನುಭವ ಮಂಟಪದ ಬಗ್ಗೆ ಪ್ರಶ್ನೆ ಏಕೆ ಬರಲಿಲ್ಲ ಎಂಬುವುದೇ ಸ್ಥಳೀಯರ ಈ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಏಕೆಂದರೆ ಯಾವದೇ ಅಭಿವೃದ್ಧಿ ಕಾರ್ಯಮಾಡದ ಬಿಜೆಪಿ ಅವರು ಇಂತಹ ಧಾರ್ಮಿಕ ವಿವಾದ ಸೃಷ್ಟಿ ಮಾಡಿ ಅಧಿಕಾರ ಪಡೆಯುವ ಪ್ರಯತ್ನ ಯಾವುದೇ ಕಾರಣಕ್ಕು ಬಸವಣ್ಣ ವರ ಕರ್ಮಭೂಮಿಯಲ್ಲಿ ಸಾಧ್ಯವಿಲ್ಲ ಎಂದು ಜನತೆ ಮುಂಬರುವ ದಿನಗಳಲ್ಲಿ ಸಾಬೀತು ಪಡಿಸುವರೋ ಅಥವಾ ಇಲ್ಲವೋ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ